More

    ಕಡ್ಡಾಯವಾಗಿ ವೋಟ್ ಮಾಡಿ

    ಹರಪನಹಳ್ಳಿ: ಅರ್ಹರನ್ನು ಆಯ್ಕೆ ಮಾಡಲು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ತಾಪಂ ಇಒ ವೈ.ಎಚ್. ಚಂದ್ರಶೇಖರ್ ಹೇಳಿದರು.

    ತಾಲೂಕಿನ ಮತ್ತಿಹಳ್ಳಿ ಗ್ರಾಪಂ ವ್ಯಾಪ್ತಿಯ ನರೇಗಾದಡಿ ಕೈಗೊಂಡ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಏರ್ಪಡಿಸಿದ್ದ ಸ್ವೀಪ್ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಭಾರತ ಇಡೀ ಪ್ರಪಂಚದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಎಲ್ಲರೂ ಕಡ್ಡಾಯವಾಗಿ ಮೇ 7ರಂದು ಮತದಾನ ಮಾಡಬೇಕು. 85 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ಮತಗಟ್ಟೆಗೆ ಬರಲು ಆಗದಿದ್ದರೆ ಮನೆಯಲ್ಲೇ ಮತದಾನ ಮಾಡಬಹುದು. ನರೇಗಾ ಕೂಲಿಕಾರರು ಕೆಲಸ ಮುಗಿಸಿಕೊಂಡು ಬಂದು ವೋಟ್ ಮಾಡಬೇಕು. ಈ ಕುರಿತು ಮೇಟಿಗಳು ಜಾಗೃತಿ ಮೂಡಿಸಬೇಕು ಎಂದರು.

    ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್ ಮಾತನಾಡಿ, ನರೇಗಾ ಕೂಲಿ ಕಾರ್ಮಿಕರು ಬೆಳಗ್ಗೆ ಬೇಗ ಹೋಗಿ ಕೊಟ್ಟ ಅಳತೆಯಲ್ಲಿ ಕೆಲಸ ಮಾಡಿ ಸರಿಯಾದ ಸಮಯಕ್ಕೆ ಹಾಜರಿ ಪಡೆದು ಮನೆಗೆ ಬಂದ ತಕ್ಷಣ ಮತದಾನ ಮಾಡಬೇಕು ಎಂದರು.

    ಚಿಗಟೇರಿ ಗ್ರಾಪಂ ವ್ಯಾಪ್ತಿಯ ಚಿಗಟೇರಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಶನಿವಾರ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಪಿಡಿಒ ಹಾಲಪ್ಪ, ತಾಲೂಕು ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ಬಿಎಫ್‌ಟಿ ಭರಮಪ್ಪ ಹಾಗೂ ಚಿಗಟೇರಿ ಗ್ರಾಪಂ ಸಿಬ್ಬಂದಿ ಮುನಿಯಪ್ಪ, ಸುರೇಶ್, ಬಿಎಫ್‌ಟಿ ಬಸವರಾಜ, ಜಿಕೆಎಂ ಮಾಲತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts