More

    ಕರೊನಾ ಔಷಧಿ ವಿತರಣೆ: ಸಂಸದ ಗೌತಮ್​ ಗಂಭೀರ್​ ವಿರುದ್ಧ ಕಾರ್ಯಾಚರಣೆಗೆ ತಡೆ ನಿರಾಕರಿಸಿದ ಸುಪ್ರೀಂ ಕೋರ್ಟ್​

    ನವದೆಹಲಿ : ಕರೊನಾ ಚಿಕಿತ್ಸೆಗೆ ಬಳಸುವ ಔಷಧಿಯನ್ನು ಅಕ್ರಮವಾಗಿ ಸಂಗ್ರಹಿಸಿ ವಿತರಿಸಿದ್ದ ಆರೋಪದ ಮೇಲೆ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್​ ವಿರುದ್ಧದ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್​ ನಿರಾಕರಿಸಿದೆ. ಆದಾಗ್ಯೂ, ಈ ಕುರಿತು ದೆಹಲಿ ಹೈಕೋರ್ಟ್​ಗೇ ಗಂಭೀರ್ ಅರ್ಜಿ ಸಲ್ಲಿಸಬಹುದು ಎಂದಿದೆ.

    ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ, ಕರೊನಾ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳು ಸಾಕಷ್ಟು ಪೂರೈಕೆ ಇಲ್ಲದ ಸಮಯದಲ್ಲಿ, ಫ್ಯಾಬಿಫ್ಲು ಮಾತ್ರೆಗಳನ್ನು ಗಂಭೀರ್​ ತಮ್ಮ ಕ್ಷೇತ್ರದ ಜನರಿಗೆ ಉಚಿತವಾಗಿ ವಿತರಿಸಿದ್ದರು. ದೆಹಲಿ ಹೈಕೋರ್ಟ್​ನಲ್ಲಿ ಈ ವಿಚಾರ ಬಂದಾಗ, ಕರೊನಾ ದುರಂತದ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ರಕ್ಷಕರ ರೀತಿ ವರ್ತಿಸುವುದನ್ನು ಮುಖಂಡರು ನಿಲ್ಲಿಸಬೇಕು ಎಂದು ಕೋರ್ಟ್​ ಹೇಳಿತ್ತು. ಡ್ರಗ್​ ಕಂಟ್ರೋಲ್​ ಅಧಿಕಾರಿಗಳಿಗೆ ಇಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿತ್ತು.

    ಇದನ್ನೂ ಓದಿ: ಕೊಲೆ, ಸಾಕ್ಷಿನಾಶ: ಪೊಲೀಸ್​​ ಇನ್ಸ್​ಪೆಕ್ಟರ್, ಕಾಂಗ್ರೆಸ್​ ನಾಯಕನ ಬಂಧನ

    ಹೈಕೋರ್ಟ್​ನ ಈ ಹೇಳಿಕೆಯ ವಿರುದ್ಧ ಗಂಭಿರ್ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಜನಸೇವೆಗಾಗಿ ಮಾಡಿದ ಕೆಲಸದ ಬಗ್ಗೆ ಹೈಕೋರ್ಟ್​ ಆಡಿರುವ ಮಾತುಗಳು ಗಂಭೀರ್​ ಅವರನ್ನು ತಪ್ಪಿತಸ್ಥರೆಂಬಂತೆ ಕಾಣಿಸುತ್ತವೆ ಎಂದು ಅವರ ವಕೀಲರು ವಾದಿಸಿದರು. ಗಂಭೀರ್​ ವಿರುದ್ಧ ಕಾರ್ಯಾಚರಣೆ ನಡೆಯದಂತೆ ಆದೇಶಿಸಬೇಕಾಗಿ ಕೋರಿದರು.

    ಆದರೆ, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಎಂ.ಆರ್​.ಷಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಆ ರೀತಿಯ ಆದೇಶ ಮಾಡುವುದಿಲ್ಲ ಎಂದಿತು. “ಜನರು ಔಷಧಿಗಾಗಿ ಅಲೆದಾಡುತ್ತಿರುವಾಗ ಒಂದು ಟ್ರಸ್ಟ್​ ಅಥವಾ ಜನರ ಗುಂಪಿಗೆ ಔಷಧಿಗಳನ್ನು ವಿತರಿಸಲು ಅವಕಾಶ ನೀಡಲಾಗುವುದಿಲ್ಲ. ಹಾಗೆ ಬಿಟ್ಟರೆ, ಎಲ್ಲರೂ ಔಷಧಿಗಳನ್ನು ಖರೀದಿಸಿ ತಂತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ವಿತರಿಸುತ್ತಾರೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. (ಏಜೆನ್ಸೀಸ್)

    ಟ್ರ್ಯಾಕ್ಟರ್ ಏರಿ ಸಂಸತ್ತಿಗೆ ಬಂದ ರಾಹುಲ್ ಗಾಂಧಿ!

    ಪ್ರೀ-ಕ್ವಾರ್ಟರ್​ಫೈನಲ್ಸ್​​​ಗೆ ಮೇರಿ ಕೋಂ ಮುನ್ನಡೆ; ಚಿನ್ನದ ಮೇಲೆ ಕಣ್ಣು!

     


     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts