More

    ಸಾಮಾನ್ಯ ವಿಭಾಗ ಮುಕ್ತ ಮುಕ್ತ; ಸುಪ್ರೀಂಕೋರ್ಟ್ ಮಹತ್ವದ ಹೇಳಿಕೆ

    ನವದೆಹಲಿ: ಸರ್ಕಾರಿ ಉದ್ಯೋಗದ ಸಾಮಾನ್ಯ ವಿಭಾಗದ ಖಾಲಿ ಹುದ್ದೆಗಳು ಪರಿಶಿಷ್ಟ ಜಾತಿ/ಪಂಗಡ, ಇತರೆ ಹಿಂದುಳಿದ ವರ್ಗ (ಒಬಿಸಿ) ಸೇರಿದಂತೆ ಎಲ್ಲರಿಗೂ ಮುಕ್ತವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮೀಸಲಾತಿ ವ್ಯಾಪ್ತಿಗೆ ಬರುವ ಅರ್ಹ ಅಭ್ಯರ್ಥಿಗಳು ಆ ವಿಭಾಗದ ಬದಲಿಗೆ ಸಾಮಾನ್ಯ ವಿಭಾಗದಲ್ಲಿ ನೌಕರಿ ಪಡೆಯಲು ಅರ್ಜಿ ಸಲ್ಲಿಸಬಹುದು. ಇದಕ್ಕೆ ಅವಕಾಶ ನೀಡದಿದ್ದರೆ ಅದು ಕೋಮು ಮೀಸಲಾತಿಗೆ ಸಮ (ಕಮ್ಯುನಲ್ ರಿಸರ್ವೆಷನ್) ಎಂದು ನ್ಯಾ. ಉದಯ್ ಲಲಿತ್, ನ್ಯಾ. ರವೀಂದ್ರ ಭಟ್, ನ್ಯಾ. ಹೃಷಿಕೇಷ್ ರಾಯ್ ಒಳಗೊಂಡ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಅಭ್ಯರ್ಥಿಗಳು ಯಾವುದೇ ಮೀಸಲು ವ್ಯಾಪ್ತಿಗೆ ಒಳಪಟ್ಟರೂ, ಅವರು ಅರ್ಹರಾಗಿದ್ದರೆ ಮುಕ್ತ ಅಥವಾ ಸಾಮಾನ್ಯ ವಿಭಾಗದಲ್ಲಿ ಅರ್ಜಿ ಸಲ್ಲಿಸಿ ನೌಕರಿ ಸಂಪಾದಿಸಬಹುದು. ಅಲ್ಲಿ ಆಯ್ಕೆ ಪ್ರಕ್ರಿಯೆ ಅವರ ಅರ್ಹತೆ ಮೇಲೆ ನಡೆಯುತ್ತದೆಯೇ ವಿನಃ ಮೀಸಲಾತಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.

    ಈ ತೀರ್ಪಿನ ಸಮ್ಮತಿಗೆ ಪ್ರತ್ಯೇಕ ತೀರ್ಪು ಬರೆದ ನ್ಯಾ. ರವೀಂದ್ರ ಭಟ್, ಸಾಮಾನ್ಯ ವಿಭಾಗವು ಮೀಸಲು ವಿಭಾಗವಲ್ಲ. ಇದು ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮುಕ್ತವಾಗಿರುವ ವಿಭಾಗ. ಅರ್ಥಾತ್ ಇಲ್ಲಿ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಇಲ್ಲಿ ಜಾತಿ ಅಥವಾ ಸಮುದಾಯ ಮುಖ್ಯವೆನಿಸುವುದಿಲ್ಲ. ಅರ್ಹತೆ, ಕೌಶಲ್ಯತೆಯೇ ಆಯ್ಕೆಯ ಮಾನದಂಡವಾಗಿರುತ್ತದೆ ಎಂದು ಹೇಳಿದ್ದಾರೆ.

    ಏನಿದು ಪ್ರಕರಣ?: ಉತ್ತರ ಪ್ರದೇಶದಲ್ಲಿ 2013ರಲ್ಲಿ ಕಾನ್​ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದ ಇತರೆ ಹಿಂದುಳಿದ ಜಾತಿಯ ಸೋನಮ್ ತೋಮರ್ ಎಂಬ ಯುವತಿ ಮತ್ತು ಪರಿಶಿಷ್ಟ ಜಾತಿಯ ಯುವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ಕಾನ್​ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿದ್ದ ಸಾಮಾನ್ಯ ವಿಭಾಗದ ಯುವತಿಗಿಂತ ಹೆಚ್ಚು ಅಂಕಗಳನ್ನು ಸೋನಮ್ ತೋಮರ್ (ಒಬಿಸಿ) ಪಡೆದಿದ್ದಳು. ಆದರೆ ಆಕೆ ಹುದ್ದೆಗೆ ಆಯ್ಕೆಯಾಗಿರಲಿಲ್ಲ. ಹೀಗಾಗಿ, 274.8928 ಅಂಕ ಗಳಿಸಿ ಸಾಮಾನ್ಯ ವಿಭಾಗದಿಂದ ಆಯ್ಕೆಯಾಗಿದ್ದ ಯುವತಿಗಿಂತ ಹೆಚ್ಚು ಅಂಕಗಳಿಸಿದ್ದ ಒಬಿಸಿ ಯುವತಿಯರನ್ನು ಕೂಡ ಅರ್ಹತೆಯ ಆಧಾರದಲ್ಲಿ ಉತ್ತರ ಪ್ರದೇಶದ ಕಾನ್​ಸ್ಟೇಬಲ್ ಹುದ್ದೆಗೆ ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅಂದರೆ, ಅಭ್ಯರ್ಥಿಗಳು ಪರಿಶಿಷ್ಟ ಜಾತಿ/ಪಂಗಡ, ಒಬಿಸಿ ವಿಭಾಗದಲ್ಲಿ ನೌಕರಿಗೆ ಅರ್ಜಿ ಸಲ್ಲಿಸಿದ್ದರೂ, ಸಾಮಾನ್ಯ ವಿಭಾಗದಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗಿಂತ ಉತ್ತಮ ನಿರ್ವಹಣೆ ತೋರಿದ ಸಂದರ್ಭದಲ್ಲಿ ಅವರನ್ನು ಅರ್ಹತೆಯ ಆಧಾರದ ಮೇಲೆ ನೌಕರಿಗೆ ತೆಗೆದುಕೊಳ್ಳಬೇಕು ಎಂಬುದು ಈ ತೀರ್ಪಿನ ತಾತ್ಪರ್ಯ.

    ಸಾಯುವಾಗಲೂ ಮಗನಿಗೆ ಬಿಯರ್​ ಕುಡಿಯೋಕೆ ದುಡ್ಡು ಕೊಟ್ಟ ಅಪ್ಪ!

    ದುಬೈನಲ್ಲಿ ಕೆಲಸ ಕಳೆದುಕೊಂಡ ಭಾರತೀಯ ರಾತ್ರೋರಾತ್ರಿ ಕೋಟ್ಯಧಿಪತಿಯಾದ! ಅದೃಷ್ಟವೆಂದರೆ ಇದೇ ನೋಡಿ

    ಕರೊನಾ ಲಸಿಕೆ ವಿಜ್ಞಾನಿಯ ದುರಂತ ಅಂತ್ಯ! 14ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟರಾ ವಿಜ್ಞಾನಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts