More

    ಅಯೋಧ್ಯೆ ಕುರಿತು ಅರ್ಜಿ ಸಲ್ಲಿಸಿ ಒಂದೊಂದು ಲಕ್ಷ ದಂಡ ಹಾಕಿಸಿಕೊಂಡರು!

    ನವದೆಹಲಿ: ಅಯೋಧ್ಯೆಯಲ್ಲಿರುವ ರಾಮಜನ್ಮಭೂಮಿ ಕುರಿತಂತೆ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಇಬ್ಬರು ಅರ್ಜಿದಾರರಿಗೆ ಕೋರ್ಟ್‌ ತಲಾ ಒಂದೊಂದು ಲಕ್ಷ ರೂಪಾಯಿಗಳ ಭಾರಿ ದಂಡ ವಿಧಿಸಿದೆ.

    ಅಯೋಧ್ಯೆಯ ರಾಮ ಜನ್ಮಭೂಮಿ ಪ್ರದೇಶದಲ್ಲಿ ವಶಕ್ಕೆ ಪಡೆಯಲಾದ ಕಲಾಕೃತಿಗಳ ಸಂರಕ್ಷಣೆಗೆ ಕೋರಿ ಇಬ್ಬರು ಈ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ರಾಮಜನ್ಮಭೂಮಿಗೆ ಸಂಬಂಧಿಸಿದಂತೆ ಹಲವು ದಶಕಗಳಿಂದ ನಡೆದಿದ್ದ ಕಾನೂನು ಸಮರಕ್ಕೆ ಕೊನೆಗೂ ತೆರೆ ಬಿದ್ದಿದ್ದು ಈ ಬಗ್ಗೆ ಇದಾಗಲೇ ತೀರ್ಪು ಹೊರಬಂದಿದೆ. ಇಂಥ ಪರಿಸ್ಥಿತಿಯಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿರುವುದು ‘ಕ್ಷುಲ್ಲಕ’ ಎಂದು ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.

    ಇದನ್ನೂ ಓದಿ: ಸುಳಿವು ಕೊಟ್ಟ ಇನ್ನೊಂದು ಫೋನ್‌: ಪೊಲೀಸರ ವಶಕ್ಕೆ ಡ್ರೋನ್‌ ಪ್ರತಾಪ್‌

    ‘ಈ ವಿಷಯದ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿದೆ. ಆದರೂ, ಮತ್ತೆ ಪಿಐಎಲ್ ಸಲ್ಲಿಸುವ ಮೂಲಕ ಕೋರ್ಟ್‌ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ನ್ಯಾಯಮಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್.ಗವಾಯ್ ಮತ್ತು ಕೃಷ್ಣನ್ ಮುರಾರಿ ಅವರ ಪೀಠ ಹೇಳಿದೆ.

    ಜತೆಗೆ ದಂಡ ವಿಧಿಸಿದ್ದು, ಇದನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ಸೂಚಿಸಿದ್ದಾರೆ.

    ಈಗಾಗಲೇ ಹಲವಾರು ವರ್ಷ ವಿಚಾರಣೆ ನಡೆದು ತೀರ್ಪು ಕೊಟ್ಟಿದ್ದರೂ ಪುನಃ ಅದನ್ನೇ ಪ್ರಶ್ನೆ ಮಾಡಿ ಕೋರ್ಟ್‌ ಸಮಯವನ್ನು ಅರ್ಜಿದಾರರು ವ್ಯರ್ಥ ಮಾಡುತ್ತಿದ್ದಾರೆ. ಇವರಿಗೆ ದಂಡ ವಿಧಿಸಬೇಕು ಎಂದು ಕೇಂದ್ರ ಸರಕಾರದ ಪರ ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ಕೋರ್ಟ್‌ ಅನ್ನು ಕೋರಿದ್ದರು. ಇದನ್ನು ಕೋರ್ಟ್‌ ಮಾನ್ಯ ಮಾಡಿದೆ. (ಏಜೆನ್ಸೀಸ್‌)

    ಜಾಮೀನು ಪಡೆದು ಅತ್ಯಾಚಾರ ಸಂತ್ರಸ್ತೆ, ತಾಯಿಯನ್ನು ಟ್ರ್ಯಾಕ್ಟರ್‌ ಹರಿಸಿ ಕೊಲೆ ಮಾಡಿದ!


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts