More

    56 ದಿನದಲ್ಲಿ ಆರು ಸಾವಿರ ಪ್ರಕರಣ ವಿಚಾರಣೆ

    ನವದೆಹಲಿ: ಲಾಕ್​ಡೌನ್ ಸಮಯದಲ್ಲಿ ಸುಪ್ರೀಂ ಕೋರ್ಟ್ ದಾಖಲೆ ಬರೆದಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿದ್ದು, 56 ದಿನಗಳಲ್ಲಿ 6 ಸಾವಿರಕ್ಕೂ ಹೆಚ್ಚು ವಿಚಾರಣೆಗಳನ್ನು ನಡೆಸಲಾಗಿದೆ. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ವರ್ಚುವಲ್ ವಿಚಾರಣೆ ನಡೆಸಿದ ನ್ಯಾಯಾಲಯವಾಗಿ ಸುಪ್ರೀಂ ಕೋರ್ಟ್ ಹೊರಹೊಮ್ಮಿದೆ. ಮಾರ್ಚ್ 25ರಂದು ಕೇಂದ್ರ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿತು. ಆದರೆ ಮಾರ್ಚ್ 22ರಿಂದಲೇ ಸುಪ್ರೀಂ ಕೋರ್ಟ್​ನಲ್ಲಿ

    ಸಿಬ್ಬಂದಿಗೆ ನಿರ್ಬಂಧಗಳನ್ನು ಹೇರಲಾಗಿತ್ತು. ವಕೀಲರು ನ್ಯಾಯಾಲಯಕ್ಕೆ ಬರುವುದನ್ನು ತಪ್ಪಿಸುವ ಸಲುವಾಗಿ ಪ್ರಾಕ್ಸಿಮಿಟಿ ಕಾರ್ಡ್​ಗಳನ್ನು ನಿಷ್ಕ್ರಿಯ ಮಾಡಿರುವುದಾಗಿ ತಿಳಿಸಲಾಗಿತ್ತು. ಇಬ್ಬರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು ತುರ್ತು ಪ್ರಕರಣಗಳ ವಿಚಾರಣೆಯನ್ನಷ್ಟೇ ಮಾಡುವುದಾಗಿ ಹೇಳಲಾಗಿತ್ತು. ಅದೇ ರೀತಿಯಲ್ಲಿ ಕರೊನಾ ಸಂಬಂಧಪಟ್ಟ ಮತ್ತು ಇತರೆ ಅಗತ್ಯ ಪ್ರಕರಣಗಳ ವಿಚಾರಣೆಯನ್ನು ವಿಡಿಯೋ ಕಾನ್ಪರೆನ್ಸ್ ಮೂಲಕವೇ ನಡೆಸಲಾಗಿದೆ.

    ಡ್ರ್ಯಾಗನ್ ಬೆನ್ನಲುಬು ಮುರಿಯೋದಕ್ಕೆ ಜಾಗೃತಿ ಅಭಿಯಾನ: ಮನೆಮನೆಗೆ ತೆರಳಲಿದ್ದಾರೆ ವಿಹಿಂಪ ಕಾರ್ಯಕರ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts