More

    ‘ಜೈಲರ್’ ಆಗಲಿದ್ದಾರೆ ಸೂಪರ್​​ಸ್ಟಾರ್ ರಜನಿಕಾಂತ್..

    ಮುಂಬೈ: ಸೂಪರ್​ಸ್ಟಾರ್ ರಜನಿಕಾಂತ್ ಅವರು ಸದ್ಯದಲ್ಲೇ ಜೈಲರ್​ ಆಗಲಿದ್ದಾರೆ. ಅರ್ಥಾತ್, ಅವರ ಮುಂದಿನ ಸಿನಿಮಾದ ಶೀರ್ಷಿಕೆ ನಿಗದಿಯಾಗಿದೆ. ಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ಸನ್​ ಪಿಕ್ಚರ್ಸ್​ ಈ ವಿಷಯವನ್ನು ಅಧಿಕೃತವಾಗಿ ತಿಳಿಸಿದೆ.

    ಇದು ರಜನಿಕಾಂತ್ ಅವರ 169ನೇ ಸಿನಿಮಾ ಆಗಿದ್ದು, ಇದನ್ನು ಖ್ಯಾತ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶಿಸಲಿದ್ದಾರೆ. ಈ ಸಿನಿಮಾಗೆ ನೆಲ್ಸನ್​ ಅವರೇ ಚಿತ್ರಕಥೆ ಬರೆದಿದ್ದು, ಆ್ಯಕ್ಷನ್​-ಕಟ್ ಹೇಳಲಿದ್ದಾರೆ.

    “#Thalaivar169 is #Jailer” ಎಂದು ಸನ್​ ಪಿಕ್ಚರ್ಸ್​ ತಿಳಿಸುವ ಮೂಲಕ ರಜನಿಕಾಂತ್ ಮುಂದಿನ ಸಿನಿಮಾ ಶೀರ್ಷಿಕೆ ಬಹಿರಂಗಗೊಂಡಿದೆ. ಸನ್​ ಪಿಕ್ಚರ್ಸ್​ ಜತೆ ನೆಲ್ಸನ್​ಗೆ ಇದು ಎರಡನೇ ಸಿನಿಮಾ. ಸನ್​ ಪಿಕ್ಚರ್ಸ್ ನಿರ್ಮಾಣ, ವಿಜಯ್ ಅಭಿನಯದ ಬೀಸ್ಟ್ ಚಿತ್ರವನ್ನೂ ನೆಲ್ಸನ್​ ನಿರ್ದೇಶಿಸಿದ್ದರು.

    ಕಲಾನಿಧಿ ಮಾರನ್​ ಈ ಚಿತ್ರವನ್ನು ಅರ್ಪಿಸುತ್ತಿದ್ದು, ಇದಕ್ಕೆ ಅನಿರುಧ್ ರವಿಚಂದರ್​ ಸಂಗೀತ ಸಂಯೋಜಿಸಲಿದ್ದಾರೆ. ಉಳಿದ ತಾರಾಗಣ ಹಾಗೂ ಚಿತ್ರತಂಡದ ಕುರಿತ ಅಧಿಕೃತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

    26 ವರ್ಷಗಳಲ್ಲೇ ಅತ್ಯಧಿಕ ಮಳೆ; ಒಂದೇ ದಿನದಲ್ಲಿ 972 ಮಿ.ಮೀ. ವರ್ಷಧಾರೆ..

    ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು: ತಲವಾರ್​ನಿಂದ ಕಡಿದು, ತಲೆಯನ್ನೇ ಜಜ್ಜಿ ಕೊಲೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts