More

    ಪ್ರಭಾಸ್ ‘ಆದಿಪುರುಷ್’ ಸಿನಿಮಾದ ರಾಮನಿಗೆ ಲಕ್ಷ್ಮಣ ಸಿಕ್ಕ

    ಮುಂಬೈ: ಪ್ರಭಾಸ್​ ಅಭಿನಯದ ‘ಆದಿಪುರುಷ್​’ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವುದು ಮುಂದಿನ ವರ್ಷವೇ ಆದರೂ, ಈಗಾಗಲೇ ತೆರೆಮರೆಯಲ್ಲಿ ಕೆಲಸಗಳು ಪ್ರಾರಂಭವಾಗಿದೆ. ಪಾತ್ರವರ್ಗದ ಆಯ್ಕೆ ಪ್ರಕ್ರಿಯೂ ಅಂತಿಮ ಹಂತದಲ್ಲಿದ್ದು, ಇನ್ನೇನು ಆ ಮಾಹಿತಿಯನ್ನೂ ಶೀಘ್ರದಲ್ಲಿ ಹೇಳಿಕೊಳ್ಳಲಿದೆ ತಂಡ. ಸಿನಿಮಾ ಸೆಟ್ಟೇರುವ ಮುನ್ನವೇ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿಕೊಂಡಿತ್ತು. ಇದೀಗ ಇದೇ ಚಿತ್ರದ ಲಕ್ಷ್ಮಣ ಪಾತ್ರಧಾರಿಯ ಆಯ್ಕೆ ಅಂತಿಮವಾಗಿದೆ.

    ಇದನ್ನೂ ಓದಿ: ರಣಬೀರ್ ಇರುವ ಅಪಾರ್ಟ್​​​ಮೆಂಟ್​ನಲ್ಲಿಯೇ 32 ಕೋಟಿ ರೂ. ಮೊತ್ತದ ಮನೆ ಖರೀದಿಸಿದ ಆಲಿಯಾ!

    ಪ್ಯಾರ್ ಕಾ ಪಂಚನಾಮಾ, ಸೋನು ಕೇ ಟೀಟು ಕೀ ಸ್ವೀಟಿ ಸಿನಿಮಾ ಖ್ಯಾತಿಯ ಸನ್ನಿ ಸಿಂಗ್​ ಲಕ್ಷ್ಮಣ ಪಾತ್ರದಲ್ಲಿ ನಟಿಸಲಿದ್ದಾರೆ. ರಾಮನಾಗಿ ಪ್ರಭಾಸ್​, ಲಂಕೇಶ್​ ಪಾತ್ರದಲ್ಲಿ ಸೈಫ್​ ಅಲಿಖಾನ್ ನಟಿಸುವುದನ್ನು ತಂಡವೇ ಹೇಳಿಕೊಂಡಿದೆ. ಇದೀಗ ಸನ್ನಿ ಸಿಂಗ್​ ಆಗಮನವನ್ನು ನಿರ್ದೇಶಕ ಓಂ ರಾವತ್ ಖಚಿತಪಡಿಸಿದ್ದಾರೆ.
    ಅಂದಹಾಗೆ. ಜನವರಿಯಿಂದ ಆದಿಪುರುಷ್ ಚಿತ್ರದ ಶೂಟಿಂಗ್​ ಆರಂಭವಾಗಲಿದೆ. ಡಿಸೆಂಬರ್​ ಒಳಗೆ ಚಿತ್ರೀಕರಣ ಮುಗಿಸಿಕೊಂಡು, 2022ರ ಆಗಸ್ಟ್ 11ರಂದು ಸಿನಿಮಾ ಬಿಡುಗಡೆ ಆಗಲಿದೆಯೆಂದು ಚಿತ್ರತಂಡವೇ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಿದೆ.

    ಶೂಟಿಂಗ್​ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಗ್ರಾಫಿಕ್ಸ್ ಇರಲಿದ್ದು, ಅದಕ್ಕಾಗಿಯೇ ಹೆಚ್ಚಿನ ಸಮಯವನ್ನು ತಂಡ ಮೀಸಲಿಡಬೇಕಿದೆ. ಚಿತ್ರದ ಒಟ್ಟಾರೆ ಬಜೆಟ್​ನಲ್ಲಿ ಅರ್ಧದಷ್ಟು ದುಡ್ಡನ್ನು ಬರೀ ವಿಎಫ್​ಎಕ್ಸ್​ಗೆ ಮೀಸಲಿಡಲಾಗುತ್ತಿದ್ದು, ಈ ಚಿತ್ರ ಯಾವ ಮಟ್ಟಿಗೆ ಮೂಡಿಬರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಇದನ್ನೂ ಓದಿ: ಮೊದಲ ಬಾರಿಗೆ ಬಂದಾಗುತ್ತಿದ್ದಾರೆ ಅಕ್ಷಯ್​ ಕುಮಾರ್​- ಅರ್ಷದ್​ ವಾರ್ಸಿ

    ಹಾಲಿವುಡ್​ ರೇಂಜ್​ನಲ್ಲಿ ಸಿನಿಮಾ ಮೂಡಿಬರಬೇಕು ಎನ್ನುವ ನಿಟ್ಟಿನಲ್ಲಿ ನಿರ್ದೇಶಕ ಓಂ ರೌತ್​, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಎಫ್​ಎಕ್ಸ್​ ತಂತ್ರಜ್ಱರನ್ನು ಈ ಚಿತ್ರಕ್ಕೆ ಕರೆಸುತ್ತಿದ್ದಾರಂತೆ. ಪ್ರಮುಖವಾಗಿ ‘ಗೇಮ್​ ಆಫ್​ ಥ್ರೋನ್ಸ್​’ಗೆ ಕೆಲಸ ಮಾಡಿದ್ದ ತಂತ್ರಜ್ಱರಿಂದ ಈ ಕೆಲಸ ಮಾಡಿಸಲಾಗುತ್ತದಂತೆ. ‘ಆದಿಪುರುಷ್​’ ಚಿತ್ರವು ರಾಮಾಯಣವನ್ನಾಧರಿಸಿದ್ದು, ಈ ಚಿತ್ರವನ್ನು ಟಿ-ಸೀರೀಸ್​ನ ಭೂಷಣ್​ ಕುಮಾರ್​ ನಿರ್ಮಿಸುತ್ತಿದ್ದಾರೆ.(ಏಜೆನ್ಸೀಸ್​)

    ಜೈಲಿನಲ್ಲಿ ರಾಗಿಣಿ, ಸಂಜನಾ ಏನು ಮಾಡುತ್ತಿದ್ದಾರೆ ಗೊತ್ತಾ? ಮಾದಕ ನಟಿಯರು ಜೈಲಿನಲ್ಲಿ ಇಷ್ಟೊಂದು ಬದಲಾಗಿದ್ದೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts