ಪ್ರವಾಹಪೀಡಿತರಿಗಾಗಿ ಡಾರ್ಲಿಂಗ್ ಪ್ರಭಾಸ್ ನೀಡಿದ ದೇಣಿಗೆ ಎಷ್ಟು ಕೋಟಿ ಗೊತ್ತಾ? ಟಾಲಿವುಡ್​ನಲ್ಲೇ ಅತಿ ಹೆಚ್ಚು!

ಆಂಧ್ರ ಪ್ರದೇಶ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. ಅದರಲ್ಲೂ, ಆಂಧ್ರ ಪ್ರದೇಶದ ತಿರುಪತಿ, ಚಿತ್ತೂರು, ನೆಲ್ಲೂರು, ವೈಜಾಗ್, ಗೋದಾವರಿ ಪ್ರದೇಶಗಳಲ್ಲಿ ಸಾವಿರಾರು ಬೆಳೆ ಹಾನಿ ಮತ್ತು ಜನರು ನೆಲ, ಮನೆ, ರಸ್ತೆಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ಜನರಿಗೆ ಸಹಾಯ ಮಾಡಲು ಸರ್ಕಾರಗಳು ಹರಸಾಹಸ ಪಡುತ್ತಿವೆ. ಆದರೆ, ಖುಷಿಯ ವಿಚಾರವೆಂದರೆ ಹಲವು ಸಿನಿ ತಾರೆಯರು ಈ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಅಂತಹ ಬಹಳಷ್ಟು ಸಿನಿ ತಾರೆಯರ ಪೈಕಿ ಸದ್ಯ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿರುವುದು ತೆಲುಗು ಸ್ಟಾರ್ ನಟ ಡಾರ್ಲಿಂಗ್ ಪ್ರಭಾಸ್.
ಪ್ರವಾಹಪೀಡಿತರಿಗಾಗಿ ಡಾರ್ಲಿಂಗ್ ಪ್ರಭಾಸ್ ನೀಡಿದ ದೇಣಿಗೆ ಎಷ್ಟು ಕೋಟಿ ಗೊತ್ತಾ? ಟಾಲಿವುಡ್​ನಲ್ಲೇ ಅತಿ ಹೆಚ್ಚು!
ಈಗಾಗಲೇ, ಹಲವು ತೆಲುಗು ಸ್ಟಾರ್ ನಟರು ಆಂಧ್ರ ಪ್ರದೇಶ ಸರ್ಕಾರದ ಬೊಕ್ಕಸಕ್ಕೆ ದೇಣಿಗೆ ನೀಡುತ್ತಿದ್ದಾರೆ. ಈ ಸಾಲಿಗೆ ನಟ ಪ್ರಭಾಸ್ ಕೂಡ ಸೇರಿದ್ದು, ಬರೋಬ್ಬರಿ 1 ಕೋಟಿ ದೇಣಿಗೆ ಸರ್ಕಾರಕ್ಕೆ ನೀಡಿದ್ದಾರೆ. ಪ್ರಭಾಸ್ 1 ಕೋಟಿ ದೇಣಿಗೆ ಕೊಟ್ಟಿದ್ದು ಇದೇ ಮೊದಲ ಬಾರಿಯಲ್ಲ. ಈ ಹಿಂದೆ ಕರೊನಾ ಸಮಯದಲ್ಲೂ ತಮ್ಮ ರಾಜ್ಯ ಸರ್ಕಾರಕ್ಕೆ 1 ಕೋಟಿ, ಕೇಂದ್ರ ಸರ್ಕಾರಕ್ಕೆ 3 ಕೋಟಿ ದೇಣಿಗೆ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ತೆಲುಗು ನಟರಾದ ಚಿರಂಜೀವಿ, ಜೂ.ಎನ್​​ಟಿಆರ್, ಮಹೇಶ್ ಬಾಬು, ರಾಮ್ ಚರಣ್ ಮತ್ತು ಹಲವು ಸ್ಟಾರ್ ನಟರು ಸರ್ಕಾರಕ್ಕೆ ದೇಣಿಗೆ ಕೊಟ್ಟಿದ್ದಾರೆ. ಆದರೆ, ಇಲ್ಲಿಯವರೆಗೆ ಎಲ್ಲಾ ಸಂರ್ದಭಗಳಲ್ಲಿ ಅತಿ ಹೆಚ್ಚು ದೇಣಿಗೆ ಕೊಡುವ ಮೂಲಕ ಅಭಿಮಾನಿಗಳಿಂದ ನಿಜವಾದ ಡಾರ್ಲಿಂಗ್ ಮತ್ತು ಹೀರೋ ಎನಿಸಿಕೊಂಡಿದ್ದಾರೆ ಪ್ರಭಾಸ್. ಜೊತೆಗೆ, ಇಷ್ಟು ದೇಣಿಗೆ ಕೊಟ್ಟರು ನಟ ಪ್ರಭಾಸ್ ಇಲ್ಲಿಯವರೆಗೆ ಎಲ್ಲೂ ಹೇಳಿಕೊಂಡಿಲ್ಲ ಅಥವಾ ಬೇರೆ ನಟರ ಹಾಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಸಹ ಮಾಡಿಲ್ಲ ಎನ್ನಲಾಗಿದೆ

Contents
ಆಂಧ್ರ ಪ್ರದೇಶ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. ಅದರಲ್ಲೂ, ಆಂಧ್ರ ಪ್ರದೇಶದ ತಿರುಪತಿ, ಚಿತ್ತೂರು, ನೆಲ್ಲೂರು, ವೈಜಾಗ್, ಗೋದಾವರಿ ಪ್ರದೇಶಗಳಲ್ಲಿ ಸಾವಿರಾರು ಬೆಳೆ ಹಾನಿ ಮತ್ತು ಜನರು ನೆಲ, ಮನೆ, ರಸ್ತೆಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ಜನರಿಗೆ ಸಹಾಯ ಮಾಡಲು ಸರ್ಕಾರಗಳು ಹರಸಾಹಸ ಪಡುತ್ತಿವೆ. ಆದರೆ, ಖುಷಿಯ ವಿಚಾರವೆಂದರೆ ಹಲವು ಸಿನಿ ತಾರೆಯರು ಈ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಅಂತಹ ಬಹಳಷ್ಟು ಸಿನಿ ತಾರೆಯರ ಪೈಕಿ ಸದ್ಯ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿರುವುದು ತೆಲುಗು ಸ್ಟಾರ್ ನಟ ಡಾರ್ಲಿಂಗ್ ಪ್ರಭಾಸ್.ಈಗಾಗಲೇ, ಹಲವು ತೆಲುಗು ಸ್ಟಾರ್ ನಟರು ಆಂಧ್ರ ಪ್ರದೇಶ ಸರ್ಕಾರದ ಬೊಕ್ಕಸಕ್ಕೆ ದೇಣಿಗೆ ನೀಡುತ್ತಿದ್ದಾರೆ. ಈ ಸಾಲಿಗೆ ನಟ ಪ್ರಭಾಸ್ ಕೂಡ ಸೇರಿದ್ದು, ಬರೋಬ್ಬರಿ 1 ಕೋಟಿ ದೇಣಿಗೆ ಸರ್ಕಾರಕ್ಕೆ ನೀಡಿದ್ದಾರೆ. ಪ್ರಭಾಸ್ 1 ಕೋಟಿ ದೇಣಿಗೆ ಕೊಟ್ಟಿದ್ದು ಇದೇ ಮೊದಲ ಬಾರಿಯಲ್ಲ. ಈ ಹಿಂದೆ ಕರೊನಾ ಸಮಯದಲ್ಲೂ ತಮ್ಮ ರಾಜ್ಯ ಸರ್ಕಾರಕ್ಕೆ 1 ಕೋಟಿ, ಕೇಂದ್ರ ಸರ್ಕಾರಕ್ಕೆ 3 ಕೋಟಿ ದೇಣಿಗೆ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ತೆಲುಗು ನಟರಾದ ಚಿರಂಜೀವಿ, ಜೂ.ಎನ್​​ಟಿಆರ್, ಮಹೇಶ್ ಬಾಬು, ರಾಮ್ ಚರಣ್ ಮತ್ತು ಹಲವು ಸ್ಟಾರ್ ನಟರು ಸರ್ಕಾರಕ್ಕೆ ದೇಣಿಗೆ ಕೊಟ್ಟಿದ್ದಾರೆ. ಆದರೆ, ಇಲ್ಲಿಯವರೆಗೆ ಎಲ್ಲಾ ಸಂರ್ದಭಗಳಲ್ಲಿ ಅತಿ ಹೆಚ್ಚು ದೇಣಿಗೆ ಕೊಡುವ ಮೂಲಕ ಅಭಿಮಾನಿಗಳಿಂದ ನಿಜವಾದ ಡಾರ್ಲಿಂಗ್ ಮತ್ತು ಹೀರೋ ಎನಿಸಿಕೊಂಡಿದ್ದಾರೆ ಪ್ರಭಾಸ್. ಜೊತೆಗೆ, ಇಷ್ಟು ದೇಣಿಗೆ ಕೊಟ್ಟರು ನಟ ಪ್ರಭಾಸ್ ಇಲ್ಲಿಯವರೆಗೆ ಎಲ್ಲೂ ಹೇಳಿಕೊಂಡಿಲ್ಲ ಅಥವಾ ಬೇರೆ ನಟರ ಹಾಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಸಹ ಮಾಡಿಲ್ಲ ಎನ್ನಲಾಗಿದೆ. 
KGF-2 ಡಬ್ಬಿಂಗ್ ಮುಗಿಸಿದ ‘ಅಧೀರ’; ಡಬ್ಬಿಂಗ್ ಮಾಡಿದ್ದು ಹಿಂದಿಯಲ್ಲೊ ಅಥವಾ ಕನ್ನಡದಲ್ಲೊ?
Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…