More

    ಸಾಲ ಮರು ಪಾವತಿ ಮಾಡದ ಬಗ್ಗೆ ಕೇಳಿದ್ದಕ್ಕೆ ಸಿಟ್ಟಾದ ಸನ್ನಿ ಡಿಯೋಲ್

    ಸನ್ನಿ ಡಿಯೋಲ್ ಅವರು ಈ ಮೊದಲು 56 ಕೋಟಿ ರೂಪಾಯಿ ಸಾಲ ಮಾಡಿದ್ದರು. ಈ ಸಾಲವನ್ನು ಅವರು ಪಡೆದಿದ್ದು ಏಳು ವರ್ಷದ ಹಿಂದೆ ಎನ್ನಲಾಗಿದೆ. ಆದರೆ, ಅವರು ಸಾಲವನ್ನು ಹಿಂದಿರುಗಿಸಿಲ್ಲ. ಈ ಕಾರಣಕ್ಕೆ ಬ್ಯಾಂಕ್​ನವರು ಮನೆ ಹರಾಜಿಗೆ ಮುಂದಾಗಿದ್ದರು. ಈ ಬಗ್ಗೆ ಸನ್ನಿಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ.


    ಸನ್ನಿ ಡಿಯೋಲ್ ಸಾಲವನ್ನು ಪಡೆದಿದ್ದು ಏಳು ವರ್ಷದ ಹಿಂದೆ ಎನ್ನಲಾಗಿದೆ. ಆದರೆ, ಅವರು ಸಾಲವನ್ನು ಹಿಂದಿರುಗಿಸಿಲ್ಲ. ಸಾಲ ಪಡೆಯುವಾಗ ಅವರು ತಮ್ಮ ಒಡೆತನದ ‘ಸನ್ನಿ ವಿಲ್ಲಾ’ ಬಂಗಲೆಯನ್ನು ಅಡ ಇಟ್ಟಿದ್ದರು. ಈ ಕಾರಣಕ್ಕೆ ಬ್ಯಾಂಕ್​ನವರು ಮನೆ ಹರಾಜಿಗೆ ಮುಂದಾಗಿದ್ದರು. ಈ ಬಗ್ಗೆ ಸನ್ನಿಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ.


    ಬ್ಯಾಂಕ್​ನವರ ನಡೆ ಕೂಡ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಮೊದಲು ಹರಾಜು ನೋಟಿಸ್ ಹೊರಡಿಸಿದ್ದ ಬ್ಯಾಂಕ್ ಆಫ್ ಬರೋಡಾ, 24 ಗಂಟೆ ಕಳೆಯುವುದರೊಳಗೆ ಆ ನೋಟಿಸ್​ನ ಹಿಂಪಡೆದಿತ್ತು. ಇದು ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.


    ನಾನು ಈ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಇದು ನನ್ನ ವೈಯಕ್ತಿಕ ವಿಚಾರ. ನಾನು ಏನೇ ಹೇಳಿದರೂ ಜನರು ತಪ್ಪು ಅರ್ಥವನ್ನೇ ಹುಡುಕುತ್ತಾರೆ’ ಎಂದು ಸನ್ನಿ ಡಿಯೋಲ್ ಅವರು ಎಎನ್​ಐಗೆ ಹೇಳಿಕೆ ನೀಡಿದ್ದಾರೆ. ಈ ವೇಳೆ ಅವರು ಸಖತ್ ಸಿಟ್ಟಾಗಿದ್ದರು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts