More

    ಪಿತೃತ್ವ ರಜೆ ವಿಚಾರದಲ್ಲಿ ಕೊಹ್ಲಿ-ನಟರಾಜನ್ ನಡುವೆ ಬಿಸಿಸಿಐ ತಾರತಮ್ಯ, ಗಾವಸ್ಕರ್ ಆರೋಪ

    ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ ಬಳಿಕ ಪಿತೃತ್ವ ರಜೆಯ ಮೇರೆಗೆ ತವರಿಗೆ ವಾಪಸಾಗುತ್ತಿದ್ದಾರೆ. ಅವರ ಪತ್ನಿ ಅನುಷ್ಕಾ ಶರ್ಮ ಜನವರಿಯಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇರುವುದರಿಂದಾಗಿ ಕೊಹ್ಲಿ ಆಸೀಸ್ ವಿರುದ್ಧದ ಕೊನೇ 3 ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ. ಆದರೆ ಇದೇ ವೇಳೆ ಭಾರತ ತಂಡದ ಮತ್ತೋರ್ವ ಆಟಗಾರ ಟಿ. ನಟರಾಜನ್‌ಗೆ ಬಿಸಿಸಿಐ ಪಿತೃತ್ವ ರಜೆಯನ್ನು ನೀಡದೆ ತಾರತಮ್ಯ ತೋರಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕವಿವರಣೆಕಾರ ಸುನೀಲ್ ಗಾವಸ್ಕರ್ ಆರೋಪಿಸಿದ್ದಾರೆ.

    ಭಾರತ ತಂಡದಲ್ಲಿ ಭಿನ್ನ ಆಟಗಾರರಿಗೆ ಭಿನ್ನ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ದೂರಿರುವ ಸುನೀಲ್ ಗಾವಸ್ಕರ್, ಪ್ರಮುಖ ಸ್ಪಿನ್ನರ್ ಆರ್. ಅಶ್ವಿನ್ ಅವರು ಕೂಡ ಬಿಸಿಸಿಐನ ಇಂಥ ತಾರತಮ್ಯಗಳಿಗೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: PHOTO | ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿವಾಹ

    ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯ ಪ್ಲೇಆಫ್​ ಹಂತದ ವೇಳೆ ವೇಗಿ ಟಿ. ನಟರಾಜನ್ ತಂದೆಯಾಗಿದ್ದರು. ಅವರ ಪತ್ನಿ ನವೆಂಬರ್‌ನಲ್ಲಿ ತವರೂರು ತಮಿಳುನಾಡಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೂ ಅವರಿಗೆ ಯುಎಇಯಿಂದ ತವರಿಗೆ ಮರಳಲು ಅವಕಾಶ ನೀಡದೆ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ಕರೆದೊಯ್ಯಲಾಯಿತು. ಬಳಿಕ ಸೀಮಿತ ಓವರ್ ಸರಣಿಯಲ್ಲಿ ಅವರು ಭಾರತ ತಂಡದ ಪರ ಆಡಿ ಗಮನಸೆಳೆದಿದ್ದರು. ಇದೀಗ ಟೆಸ್ಟ್ ಸರಣಿಗೂ ಅವರನ್ನು ನೆಟ್ ಬೌಲರ್ ಆಗಿ ತಂಡದೊಂದಿಗೆ ಉಳಿಸಿಕೊಳ್ಳಲಾಗಿದೆ. ಇದರಿಂದಾಗಿ ನಟರಾಜನ್‌ಗೆ ಮುಂದಿನ ಜನವರಿಯ ಮೂರನೇ ವಾರದವರೆಗೂ ಮಗುವಿನ ಮುಖ ನೋಡಲು ಸಾಧ್ಯವಾಗುವುದಿಲ್ಲ. ಆದರೆ ತಂಡದ ನಾಯಕನಿಗೆ ಮಾತ್ರ ಮಗುವಿನ ನಿರೀಕ್ಷೆಯಲ್ಲಿ ತವರಿಗೆ ಮರಳಲು ಬಿಸಿಸಿಐ ಅವಕಾಶ ನೀಡಿದೆ ಎಂದು ಸುನೀಲ್ ಗಾವಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಆರ್. ಅಶ್ವಿನ್ ಕೂಡ ಮಂಡಳಿಯ ನಿಯಮಾವಳಿಗಳ ತಾರತಮ್ಯ ಎದುರಿಸಿದ್ದಾರೆ. ಅವರ ಬೌಲಿಂಗ್ ಸಾಮರ್ಥ್ಯವನ್ನು ಪದೇಪದೆ ಅನುಮಾನಿಸುತ್ತ ಬರಲಾಗುತ್ತಿದೆ. ಅಶ್ವಿನ್ ಒಂದು ಪಂದ್ಯದಲ್ಲಿ ವಿಕೆಟ್ ಕಬಳಿಸಲು ವಿಫಲರಾದರೂ ಅವರನ್ನು ಮುಂದಿನ ಪಂದ್ಯದಿಂದ ದೂರವಿಡಲಾಗುತ್ತದೆ. ಆದರೆ ಬ್ಯಾಟ್ಸ್‌ಮನ್‌ಗಳಿಗೆ ಇದೇ ರೀತಿಯ ನಿಯಮಗಳು ಅನ್ವಯಿಸುವುದಿಲ್ಲ ಎಂದು ಗಾವಸ್ಕರ್ ದೂರಿದ್ದಾರೆ.

    ಕ್ರಿಕೆಟ್ V/s ಪಿತೃತ್ವ ರಜೆ; ಕ್ರಿಕೆಟಿಗರ ಪಿತೃತ್ವ ರಜೆ ಹೊಸದಲ್ಲ!

    ಮಗುವಿನ ನಿರೀಕ್ಷೆಯಲ್ಲಿ ತವರಿಗೆ ಮರಳಿದ ವಿರಾಟ್ ಕೊಹ್ಲಿ

    ಕರೊನಾವನ್ನು ಮಣಿಸಿದ ಸೈನಾ ನೆಹ್ವಾಲ್​-ಕಶ್ಯಪ್ ದಂಪತಿ

    2.5 ಕೋಟಿ ರೂ.ಗೆ ಬ್ರಾಡ್ಮನ್ ಕ್ಯಾಪ್ ಮಾರಾಟ; ಹರಾಜಿನ ಹಿಂದಿದೆ ಕ್ರಿಮಿನಲ್ ಸ್ಟೋರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts