More

    ಡೇವಿಡ್ ವಾರ್ನರ್ ನಾಯಕತ್ವ ಕಳೆದುಕೊಳ್ಳಲು ‘ಆ ಒಂದು ಹೇಳಿಕೆ’ ಕಾರಣ ಎಂದ ಇಂಗ್ಲೆಂಡ್‌ನ ಮಾಜಿ ಆಟಗಾರ..!

    ಬೆಂಗಳೂರು: ಡೇವಿಡ್ ವಾರ್ನರ್, ಐಪಿಎಲ್‌ನಲ್ಲಿ ಕೆಲ ವರ್ಷಗಳಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪ್ರಮುಖ ಆಟಗಾರ. 2016ರಲ್ಲಿ ವಾರ್ನರ್ ಸಾರಥ್ಯದಲ್ಲಿ ಸನ್‌ರೈಸರ್ಸ್‌ ಚಾಂಪಿಯನ್‌ಪಟ್ಟ ಅಲಂಕರಿಸಿತ್ತು. ಈ ಬಾರಿ ವಾರ್ನರ್ ರನ್‌ಗಳಿಸಲು ಪರದಾಡುತ್ತಿದ್ದರು. ಅಂತಿಮವಾಗಿ ವಾರ್ನರ್ ಬದಲಾಗಿ ಕೇನ್ ವಿಲಿಯಮ್ಸನ್‌ಗೆ ತಂಡದ ನಾಯಕತ್ವ ನೀಡಲಾಗಿತ್ತು. ವಾರ್ನರ್ ಕಳಪೆ ಫಾರ್ಮ್‌ನಿಂದಾಗಿಯೇ ಅವರ ನಾಯಕತ್ವ ಕಳೆದುಕೊಳ್ಳಬೇಕಾಯಿತು ಎಂದೆಲ್ಲಾ ಹೇಳಲಾಗಿತ್ತು. ಆದರೆ, ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಹಾಗೂ ಐಪಿಎಲ್‌ನಲ್ಲಿ ವಿಶ್ಲೇಷಕರಾಗಿದ್ದ ಗ್ರೇಹಂ ಸ್ವಾನ್ ಪ್ರಕಾರ, ಕನ್ನಡಿಗ ಮನೀಷ್ ಪಾಂಡೆ ಅವರನ್ನು ಸುದ್ದಿಗೋಷ್ಠಿಯಲ್ಲಿ ವಹಿಸಿಕೊಂಡಿದ್ದಕ್ಕೆ ವಾರ್ನರ್ ತಂಡದ ಆಡಳಿತ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದರು ಎಂದಿದ್ದಾರೆ.

    ಇದನ್ನೂ ಓದಿ: ಕರೊನಾ ಸಂಕಷ್ಟದಲ್ಲಿರುವವರಿಗೆ ಪಠಾಣ್ ಕ್ರಿಕೆಟ್ ಅಕಾಡೆಮಿಯಿಂದ ನೆರವು..

    ಲೀಗ್‌ನಲ್ಲಿ ರನ್‌ಗಳಿಸಲು ಪರದಾಡುತ್ತಿದ್ದ ಮನೀಷ್ ಪಾಂಡೆ ಅವರನ್ನು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಗಳಿಂದ ಕೈಬಿಡಲಾಗಿತ್ತು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾರ್ನರ್, ನನ್ನ ಪ್ರಕಾರ, ಇದು ನಿಜಕ್ಕೂ ಕಠಿಣ ನಿರ್ಧಾರ. ಆದರೆ, ಇದು ಆಯ್ಕೆ ಸಮಿತಿಯ ತೀರ್ಮಾನವಾಗಿತ್ತು ಎಂದು ವಾರ್ನರ್ ಹೇಳಿದ್ದರು. ಹೀಗೆ ವಾರ್ನರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇ ನಾಯಕತ್ವ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿತ್ತು ಎಂದು ಸ್ವಾನ್ ಹೇಳಿದ್ದಾರೆ. ವಾರ್ನರ್ ಹೇಳಿಕೆಯಿಂದ ತಂಡದ ಆಡಳಿತ ಮಂಡಳಿಗೂ ಇರುಸು ಮುರುಸು ಉಂಟಾಯಿತು. ಮೊದಲೇ ರನ್‌ಗಳಿಸಲು ಪರದಾಡುತ್ತಿದ್ದ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಸಿ ಕೇನ್ ವಿಲಿಯಮ್ಸನ್‌ರನ್ನು ನೇಮಿಸಲಾಯಿತು ಎಂದು ಸ್ವಾನ್ ಹೇಳಿದ್ದಾರೆ.

    ಇದನ್ನೂ ಓದಿ: ಟಿ20 ವಿಶ್ವಕಪ್ ಮುಗಿದ ಬಳಿಕ ಪೂರ್ಣಗೊಳ್ಳಲಿದೆ ಐಪಿಎಲ್-14ನೇ ಆವೃತ್ತಿ

    ವಾರ್ನರ್ ಅವರನ್ನು ಕೇವಲ ನಾಯಕತ್ವದಿಂದ ತೆಗೆದುಹಾಕಿದ್ದಲ್ಲದೆ, ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೆ ಹನ್ನೊಂದರ ಬಳಗದಿಂದಲೂ ಕೈಬಿಡಲಾಗಿತ್ತು. ಆ ಪಂದ್ಯದಲ್ಲಿ ಸನ್‌ರೈಸರ್ಸ್‌ 54 ರನ್‌ಗಳಿಂದ ಸೋಲು ಕಂಡಿತ್ತು. ಕೋವಿಡ್-19 ಪ್ರಕರಣಗಳು ಹೆಚ್ಚು ಕಂಡುಬಂದ ಹಿನ್ನೆಲೆಯಲ್ಲಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿ ವರೆಗೆ ಮುಂದೂಡಿತ್ತು.

    VIDEO | ಐಪಿಎಲ್​ ತಂಡದ ಪ್ರಯಾಣಕ್ಕಾಗಿ ಆ್ಯಂಬುಲೆನ್ಸ್​ಗೆ ತಡೆಯೊಡ್ಡಿದರೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts