ನವದೆಹಲಿ: ಭಾರತದಲ್ಲಿ ಸೌಮ್ಯ ಹಾಗೂ ಮಧ್ಯಮ ರೀತಿಯ ಕೋವಿಡ್-19 ರೋಗ ಲಕ್ಷಣಗಳಿರುವವರಿಗೆ ಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ಕೇವಲ 35 ರೂ. ಬೆಲೆಯ ಫ್ಲುಗಾರ್ಡ್ (ಫೆವಿಪಿರಾವಿರ್ 200 ಎಂಜಿ) ಮಾತ್ರೆಯನ್ನು ಮಂಗಳವಾರ ಬಿಡುಗಡೆಗೊಳಿಸಿರುವಾಗಿ ತಿಳಿಸಿದೆ.
ಫೇವಿಪಿರಾವಿರ್, ಸೌಮ್ಯದಿಂದ ಮಧ್ಯಮ ರೋಗ ಲಕ್ಷಣವುಳ್ಳ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆಯಾಗಿ ನೀಡಬಹುದಾದ, ಭಾರತದಲ್ಲಿ ಅಂಗೀಕರಿಸಲ್ಪಟ್ಟ ಏಕೈಕ ಮೌಖಿಕ ಆಂಟಿ-ವೈರಲ್ ಚಿಕಿತ್ಸೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ: ನಿಯಮದಂತೆ ಸ್ವಾತಂತ್ರೃ ದಿನಾಚರಣೆ
ಈ ಉತ್ಪನ್ನದ ಬಿಡುಗಡೆ ಸಂದರ್ಭದಲ್ಲಿ ಸನ್ ಫಾರ್ಮಾ ಇಂಡಿಯಾ ಬಿಸಿನೆಸ್ ಸಿಇಒ ಕೀರ್ತಿ ಗಾನೋರ್ಕರ್ ಮಾತನಾಡಿ “ಭಾರತದಲ್ಲಿ ಪ್ರತಿದಿನ 50,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಆರೋಗ್ಯ ಕಾರ್ಯಕರ್ತರಿಗೆ ಹೆಚ್ಚಿನ ಚಿಕಿತ್ಸಾ ಮಾರ್ಗಗಳನ್ನು ಒದಗಿಸುವ ತುರ್ತು ಅವಶ್ಯಕತೆಯಿದೆ. ಫ್ಲುಗಾರ್ಡ್ ಔಷಧ ಹೆಚ್ಚಿನ ಪ್ರಮಾಣದ ರೋಗಿಗಳಿಗೆ ಸಿಗುವಂತಾಗಲು ನಾವು ಯೋಗ್ಯ ಬೆಲೆಗೆ ಫ್ಲುಗಾರ್ಡ್ ಮಾತ್ರೆ ನೀಡಲು ಪ್ರಾರಂಭಿಸುತ್ತಿದ್ದೇವೆ. ಇದು ಭಾರತ ಈ ಸಾಂಕ್ರಾಮಿಕ ರೋಗವನ್ನು ಹತ್ತಿಕ್ಕುವಲ್ಲಿ ನಡೆಸುತ್ತಿರುವ ಪ್ರಯತ್ನವನ್ನು ಬೆಂಬಲಿಸುವ ನಮ್ಮ ನಿರಂತರ ಪ್ರಯತ್ನಗಳಿಗೆ ಅನುಗುಣವಾಗಿರುತ್ತದೆ ಎಂದರು.
ಇದನ್ನೂ ಓದಿ: ಅಪರಾಧಿಗಳನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಬಲ್ಲ ಫೇಸ್ ರಿಕಗ್ನಿಷನ್ ಟೆಕ್ನಾಲಜಿ
ಕಂಪನಿ ದೇಶಾದ್ಯಂತ ರೋಗಿಗಳಿಗೆ ಫ್ಲುಗಾರ್ಡ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮತ್ತು ವೈದ್ಯಕೀಯ ಸಮುದಾಯದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ. ಫ್ಲುಗಾರ್ಡ್ ಮಾತ್ರೆಯ ದಾಸ್ತಾನು ಈ ವಾರ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ.
ಸನ್ ಫಾರ್ಮಾ ವಿಶ್ವದ ನಾಲ್ಕನೇ ಅತಿದೊಡ್ಡ ವಿಶೇಷ ಜನೌಷಧೀಯ ಕಂಪನಿ ಮತ್ತು ಭಾರತದ ದೊಡ್ಡ ಔಷಧ ಕಂಪನಿಗಳಲ್ಲಿ ಒಂದಾಗಿದೆ.