More

    ಸೂರ್ಯ-ಚಂದ್ರರಿರುವವರೆಗೂ ಕೆಎಲ್‌ಇ ಅಜರಾಮರ – ಡಾ.ಎಸ್.ಸಿ.ಧಾರವಾಡ

    ಬೆಳಗಾವಿ: ಬ್ರಿಟಿಷ್ ಆಳ್ವಿಕೆಯಲ್ಲೇ ಜನರ ಭವಿಷ್ಯದ ಹಿತದೃಷ್ಟಿಯಿಂದ ಕೆಎಲ್‌ಇ ಸಂಸ್ಥೆ ಹುಟ್ಟು ಹಾಕಿದ ಸಪ್ತರ್ಷಿಗಳು ಎಂದು ಕರೆಯಲ್ಪಡುವ ಹಿರಿಯರ ಕೊಡುಗೆ ಅಪಾರ. ಸೂರ್ಯ ಚಂದ್ರ ಇರುವವರೆಗೂ ಕೆಎಲ್‌ಇ ಹೆಸರು ಅಜರಾಮರ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಹೇಳಿದ್ದಾರೆ.

    ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆ, ಕೆಎಲ್‌ಇ ಹೋಮಿಯೋಪಥಿಕ್ ಕಾಲೇಜ್ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ಶುಶ್ರೂತ ಸಭಾಭವನದಲ್ಲಿ ಆಯೋಜಿಸಿದ್ದ ಕೆಎಲ್‌ಇ ಸಂಸ್ಥೆಯ 105ನೇ ಸಂಸ್ಥಾಪನಾ ದಿನಾಚರಣೆ ಯಲ್ಲಿ ಮಾತನಾಡಿ, ಸಂಸ್ಥೆಯು ಶತಮಾನಕ್ಕಿಂತಲೂ ಅಧಿಕ ಕಾಲ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರ ಎಂದರು. 1984 ರವರೆಗೆ ಕೆಎಲ್‌ಇಯ 38 ಅಂಗಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು.

    ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಪದಗ್ರಹಣದ ನಂತರ ಸಂಸ್ಥೆ ಮತ್ತಷ್ಟು ಅಭಿವೃದ್ಧಿ ಸಾಧಿಸಿತು. ಅದರ ಫಲವಾಗಿ 38 ಸಂಸ್ಥೆಗಳಿದ್ದಲ್ಲಿ ಇಂದು 272 ಶೈಕ್ಷಣಿಕ ಕಾಲೇಜುಗಳು ಕರ್ನಾಟಕದ ಎಲ್ಲೆಡೆ , ದೇಶದ ವಿವಿಧ ರಾಜ್ಯಗಳು, ದುಬೈ ಮುಂತಾದೆಡೆ ಯಶಸ್ವಿಯಾಗಿ ಕಾರ್ವನಿರ್ವಹಿಸುತ್ತಿವೆ.

    ಸಂಸ್ಥೆಯ ಈ ಸಾಧನೆಯು ಡಾ.ಪ್ರಭಾಕರ ಕೋರೆ ಅವರ ದಕ್ಷತೆ ಮತ್ತು ಕಾರ್ಯನಿಷ್ಠೆ ತೋರಿಸುತ್ತದೆ ಎಂದು ಹೇಳಿದರು. ಹೋಮಿಯೋಪಥಿಕ್ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎ.ಉಡಚನಕರ ಮಾತನಾಡಿ, ಯಾವುದೇ ಸಂಸ್ಥೆ ಪ್ರಾರಂಭವಾಗಬೇಕಾದರೆ ಹಲವರ ತ್ಯಾಗ, ಬಲಿದಾನ ಹೊಂದಿರುತ್ತದೆ. ಆದರೆ, ಅದೇ ಸಂಸ್ಥೆಯನ್ನು ಯಶಸ್ಸಿನತ್ತ ಕೊಂಡೊಯ್ಯಲು ತಾಳ್ಮೆ ಮತ್ತು ಶ್ರಮಗಳ ಅಗತ್ಯವಿರುತ್ತದೆ.

    105 ವರ್ಷಗಳಕಾಲ ಸುದೀರ್ಘ ಪಥದಲ್ಲಿ ಹಲವು ಏಳುಬೀಳುಗಳ ನಡುವೆಯೂ ಸಂಸ್ಥೆ ಬೆಳೆದು ನಿಂತ ವೈಖರಿ ಶ್ಲಾಘನೀಯ ಎಂದರು. ಡಾ.ಬಿ.ಎಸ್.ವಹಾಂತಶೆಟ್ಟಿ, ಡಾ.ಸಿ.ಎನ್.ತುಗಶೆಟ್ಟಿ, ಡಾ.ಸೋಮನಾಥ ಚಿಟ್ಟಿ ಹಾಗೂ ಡಾ.ಸುಪ್ರಿಯಾ ಕುಲಕರ್ಣಿ, ಆಸ್ಪತ್ರೆ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts