More

    ದೇಸಿ ಸಂಪ್ರದಾಯ ಉಳಿಸಿ ಬೆಳೆಸಿ

    ಬಸವನಬಾಗೇವಾಡಿ: ಹಂತಿ ಉತ್ಸವ ಕಾರ್ಯಕ್ರಮ ಆಯೋಜಿಸುವ ಮೂಲಕ ಭಾರತದ ವೈಶಿಷ್ಟೃತೆ ಪ್ರತಿಬಿಂಬಿಸುವ ಕಾರ್ಯ ಇದಾಗಿದೆ ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು ಹೇಳಿದರು.

    ತಾಲೂಕಿನ ಮನಗೂಳಿ ಪಟ್ಟಣದ ಶ್ರೀಮಠದ ಆವರಣದಲ್ಲಿ ರೈತರು ಬೆಳೆದ ಬಿಳಿ ಜೋಳ ರಾಶಿಯ ಹಂತಿ ಉತ್ಸವ ಆಚರಣೆಯಲ್ಲಿ ಇತ್ತೀಚೆಗೆ ಅವರು ಮಾತನಾಡಿದರು.

    ನಮ್ಮ ದೇಶ ಅನೇಕ ರೀತಿಯ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ ಹೊಂದಿದ ವಿಶೇಷವಾದ ರಾಷ್ಟ್ರವಾಗಿದೆ. ಆದರೆ ಸದ್ಯ ಅವುಗಳು ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಹಂತಿ ಉತ್ಸವ ಕಾರ್ಯಕ್ರಮ ಮಾಡುವ ಮೂಲಕ ನಮ್ಮ ಸಂಪ್ರದಾಯ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಸ್ಮರಣೀಯ ಕಾರ್ಯವಾಗಿದೆ ಎಂದರು.

    ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಮುಂದುವರಿದ ಪರಿಣಾಮವಾಗಿ ಗ್ರಾಮೀಣ ಭಾಗದ ಅನೇಕ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಕ್ಕೆ ಕೊಡಲೆ ಪೆಟ್ಟು ಬಿದ್ದು ಅವುಗಳು ನಶಿಸಿ ಹೋಗುವಂಥ ಸ್ಥಿತಿ ತಲುಪಿಕೊಂಡಿವೆ. ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯವಾದಾಗ ಮಾತ್ರ ನಮ್ಮ ಭಾರತ ದೇಶದ ಪರಂಪರೆಯನ್ನು ಮತ್ತಷ್ಟು ಬಿಂಬಿಸಲು ಹಾಗೂ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಹಂತಿ ಉತ್ಸವ ಮಾಡಬೇಕಾದರೆ ಹಲವು ದಿನಗಳ ಮುಂಚೆಯೇ ಕಣ ತಯಾರಿಸಬೇಕು. ವಾರಗಟ್ಟಲೇ ನೀರು ಹೊಡೆದು ಗಟ್ಟಿ ಮಾಡಬೇಕು. ನಂತರ ಹತ್ತಾರು ರೈತರಿಂದ ಎತ್ತುಗಳನ್ನು ಸಂಗ್ರಹಿಸಿ ಹಂತಿಕಟ್ಟಿ ಹಂತಿ ಉತ್ಸವ ಮಾಡಬೇಕಾಗುತ್ತದೆ ಎಂದರು.

    ಹಂತಿ ಉತ್ಸವ ಚಾಲನೆಗೆ ಮುನ್ನ ತಾಯಿಗೂಡು ಹಾಗೂ ಮೇಟಿ ಕಂಬಕ್ಕೆ ಮಹಿಳೆಯರಿಂದ ಪೂಜೆ ಸಲ್ಲಿಸಿ ಆರತಿ ಬೆಳೆಗುವುದು, ಸುಮಂಗಲೆಯರಿಂದ ಮುತ್ತೈದೆಯರಿಗೆ ಉಡಿತುಂಬುವುದು ಹಾಗೂ 5 ಜಂಗಮರಿಗೆ ಪ್ರಸಾದ ಉಣಬಡಿಸಿ ನಂತರ ಹಂತಿ ಉತ್ಸವಕ್ಕೆ ಚಾಲನೆ ನೀಡುವ ಸಂಪ್ರದಾಯವಿದೆ ಎಂದರು.

    ಹಂತಿ ಉತ್ಸವದಲ್ಲಿ ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ನಿಂಗನಗೌಡ ಪಾಟೀಲ, ಮಹಾಂತಪ್ಪಗೌಡ ಗುಜಗೊಂಡ, ರೇಮನಸಿದ್ದ ತಪಶೆಟ್ಟಿ, ರಮೇಶ ಔರಸಂಗ, ಬಾಬು ಘೋರ್ಪಡೆ, ರಾಮು ಬಿರಾದಾರ, ಮುದುಕಪ್ಪ ಮಣ್ಣೂರ, ಬಾಬು ಹುಲಗಬಾಳ, ಮಲ್ಲಿಕಾರ್ಜುನ ಕಬ್ಬಿನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts