More

  ‘ಚಾಕೊಲೇಟ್ ಬಾಯ್’ ಆದ ‘ಫಿಸಿಕ್ಸ್ ಟೀಚರ್’; ಸುಮುಖನ ಹೊಸ ಚಿತ್ರ

  ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾದ ‘ಫಿಸಿಕ್ಸ್​ ಟೀಚರ್​’ ಚಿತ್ರದ ಮೂಲಕ ನಟ-ನಿರ್ದೇಶಕನಾಗಿ ಗುರುತಿಸಿಕೊಂಡ ಸುಮುಖ, ಈಗ ಸದ್ದಿಲ್ಲದೆ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಎರಡನೆಯ ಹಂತದ ಚಿತ್ರೀಕರಣ ಶುರುವಾಗಲಿದೆ. ಅಂದಹಾಗೆ, ಚಿತ್ರದ ಹೆಸರು ‘ಚಾಕೊಲೇಟ್​ ಬಾಯ್​’.

  ಇದನ್ನೂ ಓದಿ: ಕೊನೆಗೂ ’45’ಗೆ ನಾಯಕಿ ಫಿಕ್ಸ್​; ಚಿತ್ರತಂಡಕ್ಕೆ ಸೇರ್ಪಡೆಯಾದ ಕೌಸ್ತುಭ ಮಣಿ

  ‘ಚಾಕೊಲೇಟ್​ ಬಾಯ್​’ ಚಿತ್ರದಲ್ಲಿ ಸುಮುಖ ಬರೀ ನಟನಾಗಿ ಕಾಣಿಸಿಕೊಂಡಿದ್ದು, ಚಿತ್ರವನ್ನು ಉದಯ್​ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಸುಮುಖ ಜತೆಗೆ ಶೈನ್​ ಶೆಟ್ಟಿ ಮತ್ತು ನಿಧಿ ಹೆಗಡೆ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಸ್ನೇಹ ಮತ್ತು ಸಹೋದರತ್ವ ಸಾರುವ ಚಿತ್ರವಂತೆ ಅದು.

  ಹೆಸರೇ ಹೇಳುವಂತೆ ಇದರಲ್ಲಿ ಚಾಕೊಲೇಟ್​ ಬಾಯ್​ ಆಗಿ ಸುಮುಖ ಕಾಣಿಸಿಕೊಳ್ಳುತ್ತಿದ್ದು, ಉತ್ಸಾಹಿ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಸಕಲೇಶಪುರದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತ ಚಿತ್ರಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ. ಅಕ್ಷಯ್ ಶೆಟ್ಟಿ ಜತೆಗೂಡಿ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ ನಿರ್ದೇಶಕ ಉದಯ್ ಶೆಟ್ಟಿ.

  ಇದನ್ನೂ ಓದಿ: ಬಾಯ್‌ಫ್ರೆಂಡ್ ಜತೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ನಟಿ ಜಾನ್ವಿ ಕಪೂರ್!

  ‘ಚಾಕೊಲೇಟ್​ ಬಾಯ್​’ ಅಲ್ಲದೆ ಕನ್ನಡ ಹಾಗೂ ಮರಾಠಿಯಲ್ಲಿ ನಿರ್ಮಾಣವಾಗಿರುವ ‘ರಾಜಸ್ಥಾನ ಡೈರೀಸ್’ನಲ್ಲೂ ಸಮುಖ ನಾಯಕನಾಗಿ ಕಾಣಿಸಿಕೊಂಡಿದ್ದು, ಇದರಲ್ಲಿ ಅವರಿಗೆ ನಾಯಕಿಯಾಗಿ ಮಾನ್ವಿತಾ ಕಾಮತ್​ ಅಭಿನಯಿಸಿದ್ದಾರೆ. ಸುಮುಖ ಅವರ ತಾಯಿ ನಂದಿತಾ ಯಾದವ್ ಚಿತ್ರಕಥೆ ಬರೆದು, ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

  ಆಂಟಿ ಎಂದು ಕರೆದರೆ ನಿಮಗೇಕೆ ಕೋಪ ಬರುತ್ತೆ? ಅಭಿಮಾನಿ ಪ್ರಶ್ನೆಗೆ ಅನಸೂಯ ಕೊಟ್ಟ ಉತ್ತರ ವೈರಲ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts