More

    ಬಿಸಿಲಿನ ತಾಪ ಹೆಚ್ಚಳ: ಶಾಲಾ ಅವಧಿ ಬದಲಿಸಲು ಆಗ್ರಹ

    ಬೆಂಗಳೂರು: ಬೇಸಿಗೆ ಬಿಸಿಲು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಅವಧಿಯನ್ನು ಏಪ್ರಿಲ್ 1 ರಿಂದ ಬೆಳಗ್ಗೆ 8 ರಿಂದ 12 ಗಂಟೆಯವರೆಗೆ ನಿಗದಿ ಗೊಳಿಸಿ ಆದೇಶ ಹೊರಡಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

    ಬಿಸಿಲಿನ ತಾಪಮಾನದಿಂದ ಈಗಾಗಲೇ ಹಲವು ಸರ್ಕಾರಿ ಕಚೇರಿ ಅವಧಿ ಬೆಳಗ್ಗೆ ನಿಗದಿಯಾಗಿರುತ್ತದೆ. ಆದ್ದರಿಂದ ಶಾಲಾ ಅವಧಿಯನ್ನು ರಾಜ್ಯಾದ್ಯಂತ. ಬೆಳಗ್ಗೆ 8 ರಿಂದ 12ರ ವರೆಗೆ ನಿಗದಿಗೊಳಿಸಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದಾರೆ.

    ಈಗಾಗಲೇ ರಾಜ್ಯದಲ್ಲಿ ತಾಪಮಾನ ದಿನೇದಿನೆ ಹೆಚ್ಚುತ್ತಿದೆ. ಇತ್ತ ಕರೊನಾ ಎರಡನೇ ಅಲೆಯ ಭೀತಿಯು ಹೆಚ್ಚಾಗುತ್ತಿರುವುದು ಮಕ್ಕಳ ಕಲಿಕೆಗೆ ತೊಡಕಾಗುತ್ತದೆ. ಕಳೆದ ವರ್ಷ ಇದೇ ಸಮಯದಲ್ಲಿ ದೇಶದಲ್ಲಿ ಲಾಕ್​ಡೌನ್​ ಘೋಷಣೆಯಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು.

    ಯುವತಿ ಪರ ವಕೀಲರ ಸ್ಫೋಟಕ ಹೇಳಿಕೆ: ಪೊಲೀಸ್​ ಆಯುಕ್ತರ ಮುಂದೆ ಸಿಡಿ ಲೇಡಿ ಬರ್ತಾಳಂತೆ! ಆದರೆ…

    ‘ಮಹಾನಾಯಕ’ ಯಾರೆಂದು ಗೊತ್ತಿಲ್ಲ; ಗೊತ್ತಿದ್ರೆ ಹೇಳಿ!

    ಸಿಡಿ ಲೇಡಿಯ ಮೂರನೇ ವಿಡಿಯೋ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts