More

    ಬೇಸಿಗೆ ಬೆಳೆಗಿಲ್ಲ ಕಾಲುವೆ ನೀರು

    ದೇವದುರ್ಗ: ಆಲಮಟ್ಟಿಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ.

    ನಾರಾಯಣಪುರ ಬಲದಂಡೆ ಹಾಗೂ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಮೊದಲ ಬೆಳೆಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗುವುದು. ಉಳಿಯುವ ನೀರನ್ನು ಕುಡಿಯಲು ಕಾಯ್ದಿರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ನ.4ರವರೆಗೆ ಸುಮಾರು 85 ಟಿಎಂಸಿ ಅಡಿ ನೀರಿದೆ. ಬೇಸಿಗೆಯಲ್ಲಿ ಕುಡಿವ ನೀರು ಪೂರೈಸಲು 40 ಟಿಎಂಸಿ ಅಡಿ ನೀರು ಕಾಯ್ದಿರಿಸಲು ತೀರ್ಮಾನಿಸಲಾಗಿದೆ. 45 ಟಿಎಂಸಿ ಅಡಿ ನೀರನ್ನು ರೈತರ ಅನುಕೂಲಕ್ಕೆ ತಕ್ಕಂತೆ ಡಿ.4ರವರೆಗೆ ಹರಿಸಲು ನಿರ್ಧರಿಸಲಾಗಿದೆ.

    ಪ್ರಸಕ್ತ ಸಾಲಿನ ಮೊದಲ ಸಭೆಯ ತೀರ್ಮಾನದಂತೆ ವಾರಬಂದಿ ಪ್ರಕಾರ ನ.18ರವರೆಗೆ ನೀರು ಹರಿಸಲಾಗುತ್ತದೆ. ನ.19ರಿಂದ ಡಿ.4ರವರೆಗೆ 8ದಿನ ಚಾಲು, 8 ದಿನ ಬಂದ್ ಇಲ್ಲವೇ ರೈತರ ಸಲಹೆಯಂತೆ ಉಳಿಯುವ ನೀರನ್ನು ಹರಿಸಲು ನಿರ್ಧರಿಸಲಾಗಿದೆ. ರೈತರು ಜನವರಿವರೆಗೆ ನೀರು ಹರಿಸಲು ಆಗ್ರಹಿಸಿದ್ದು, ಸಭೆ ಸಮ್ಮತಿಸಿಲ್ಲ.

    ಜಿಲ್ಲೆಯ ಬಲದಂಡೆ ನಾಲೆ ವ್ಯಾಪ್ತಿಯಲ್ಲಿ ಹತ್ತಿ, ಮೆಣಸಿನಕಾಯಿ ಬೆಳೆದಿದ್ದು, ನೀರಿನ ಕೊರತೆಯಾಗುವ ಲಕ್ಷಣಗಳಿರುವುದರಿಂದ ರೈತರು ಆತಂಕದಲ್ಲಿದ್ದಾರೆ. ಮೆಣಸಿನಕಾಯಿ ಬೆಳೆಗೆ ಇನ್ನೂ ಎರಡು ತಿಂಗಳು ನೀರಿನ ಅಗತ್ಯವಿದ್ದು, ಸಭೆಯ ತೀರ್ಮಾನ ರೈತರಿಗೆ ಬರಸಿಡಿಲು ಬಡಿದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts