More

    ರಜಪೂತ ಸಂಘಟನೆ ಮುಖ್ಯಸ್ಥನ ಹತ್ಯೆ ವಿರೋಧಿಸಿ ರಾಜಸ್ಥಾನ ಬಂದ್‌ – ಪೊಲೀಸರ ಕಟ್ಟೆಚ್ಚರ

    ಜೈಪುರ: ರಜಪೂತ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಜೈಪುರದ ಮನೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಪ್ರತಿಭಟನೆಗೆ ಇಳಿದಿದ್ದು, ಬುಧವಾರ ರಾಜಸ್ಥಾನ ಬಂದ್‌ಗೆ ಕರೆ ನೀಡಿದ್ದಾರೆ. ರಾಜ್ಯಾದ್ಯಂತ ಪೊಲೀಸ್​ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

    ಇದನ್ನೂ ಓದಿ: ಹತ್ಯೆಯ ಸಂಚಿಗೆ ಪ್ರತೀಕಾರ! ಡಿ.13ರೊಳಗೆ ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನಿ ಉಗ್ರನ ಬೆದರಿಕೆ
    ಬಂದ್​ ಹಿನ್ನೆಲೆಯಲ್ಲಿ ಸುಖದೇವ್ ಸಿಂಗ್ ಗೊಗಮೆಡಿ ಬೆಂಬಲಿಗರು ಶಿಪ್ರಾ ಪಥ ರಸ್ತೆ ತಡೆದು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಜೈಪುರ ಅಲ್ಲದೆ, ಚುರು, ಉದಯಪುರ, ಅಲ್ವಾರ್ ಮತ್ತು ಜೋಧ್‌ಪುರ ಜಿಲ್ಲೆಗಳಲ್ಲಿಯೂ ಪ್ರತಿಭಟನೆಗಳು ಭುಗಿಲೆದ್ದಿವೆ.

    ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಅಧ್ಯಕ್ಷ ಗೊಗಮೇಡಿ ಅವರನ್ನು ಅವರ ಮನೆಯಲ್ಲಿ ಚಹಾ ಸೇವಿಸಿದ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ದರೋಡೆಕೋರ ರೋಹಿತ್ ಗೋಡಾರಾ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದು ತಿಳಿದ ಸಂಗತಿಯೇ.

    ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದು, ಆಡಳಿತ ಬದಲಾವಣೆ ಪ್ರಕ್ರಿಯೆ ನಡೆಯುತ್ತಿರುವ ಈ ಸಂದರ್ಭದಲ್ಲಿ ರಜಪೂತ ನಾಯಕನ ಹತ್ಯೆ ರಾಜಕೀಯ ತಿರುವುಗಳನ್ನು ಪಡೆದುಕೊಂಡು ಉಗ್ರ ಪ್ರತಿಭಟನೆಗೆ ನಾಂದಿ ಹಾಡಿದೆ.
    ಆರೋಪಿಗಳ ಸಂಭಾವ್ಯ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿರುವುದಾಗಿ ರಾಜಸ್ಥಾನ ಪೊಲೀಸ್ ಮುಖ್ಯಸ್ಥ ಉಮೇಶ್ ಮಿಶ್ರಾ ತಿಳಿಸಿದ್ದಾರೆ.

    2015ರಲ್ಲಿ ಲೋಕೇಂದ್ರ ಸಿಂಗ್ ಕಲ್ವಿ ನೇತೃತ್ವದ ರಜಪೂತ ಕರ್ಣಿ ಸೇನೆಯಿಂದ ಬೇರ್ಪಟ್ಟ ನಂತರ ಗೊಗಮೇಡಿ ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯನ್ನು ರಚಿಸಿದ್ದರು. ರಜಪೂತ ಸಮುದಾಯದ ಬಗ್ಗೆ ಐತಿಹಾಸಿಕ ಸಂಗತಿಗಳನ್ನು ತಿರುಚಿದ ಆರೋಪದ ಮೇಲೆ ಎರಡೂ ಸಂಘಟನೆಗಳು 2018 ರ ಚಲನಚಿತ್ರ ‘ಪದ್ಮಾವತ್’ ವಿರುದ್ಧ ಪ್ರತಿಭಟನೆ ನಡೆಸಿದ್ದವು.

    ಕತ್ರಿನಾ, ರಶ್ಮಿಕಾ, ಆಲಿಯಾ ನಂತರ ದೇಸಿ ಗರ್ಲ್ ಡೀಪ್‌ಫೇಕ್ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts