More

    ಕತ್ರಿನಾ, ರಶ್ಮಿಕಾ, ಆಲಿಯಾ ನಂತರ ದೇಸಿ ಗರ್ಲ್ ಡೀಪ್‌ಫೇಕ್ ವಿಡಿಯೋ ವೈರಲ್

    ಮುಂಬೈ: ಸದ್ಯ ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ಅವರ ವಿಡಿಯೋವೊಂದು ಅಂತರ್ಜಾಲ ಜಗತ್ತಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ್ರೆ ಇವರು ಪ್ರಿಯಾಂಕಾ ಚೋಪ್ರಾ ಅಂತ ಅನಿಸಬಹುದು, ಆದರೆ ಅವರಲ್ಲ. ಇದು ಪ್ರಿಯಾಂಕಾ ಚೋಪ್ರಾ ಅವರ ಡೀಪ್‌ಫೇಕ್ ವಿಡಿಯೋ ಅಂದರೆ ಇದು ನಕಲಿ ವಿಡಿಯೋ. ಈ ವಿಡಿಯೋವನ್ನು ಎಡಿಟ್ ಮಾಡುವ ಮೂಲಕ ಸಿದ್ಧಪಡಿಸಲಾಗಿದೆ. ತಂತ್ರಜ್ಞಾನ ಜಗತ್ತಿನಲ್ಲಿ ಈ ರೀತಿಯ ವಿಡಿಯೋವನ್ನು ಡೀಪ್‌ಫೇಕ್ ವಿಡಿಯೋ ಎಂದು ಕರೆಯುತ್ತಾರೆ. ಈ ಹಿಂದೆ ಆಲಿಯಾ ಭಟ್, ಕತ್ರಿನಾ ಕೈಫ್, ಕಾಜೋಲ್ ಅವರಂತಹ ದೊಡ್ಡ ನಟಿಯರೇ ಡೀಪ್‌ಫೇಕ್​​​​​ಗೆ ಗುರಿಯಾಗಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಅವರ ವೈರಲ್ ಡೀಪ್‌ಫೇಕ್ ವಿಡಿಯೋದಲ್ಲಿ, ಅವರು ಬ್ರ್ಯಾಂಡ್ ವೊಂದನ್ನು ಪ್ರಚಾರ ಮಾಡುವುದನ್ನು ನೀವು ನೋಡಬಹುದು. ಆದರೆ, ಈ ಮಾರ್ಫ್ ಮಾಡಿದ ವಿಡಿಯೋದಲ್ಲಿ ಪ್ರಿಯಾಂಕಾ ಮುಖವನ್ನಲ್ಲ ಆಕೆಯ ಧ್ವನಿಯನ್ನು ಟ್ಯಾಂಪರ್ ಮಾಡಲಾಗಿದೆ. ಎಐ ಸಹಾಯದಿಂದ ನಟಿಯ ಧ್ವನಿಯನ್ನು ಬದಲಾಯಿಸಲಾಗಿದೆ. ಅಷ್ಟೇ ಅಲ್ಲ, ಈ ನಕಲಿ ವಿಡಿಯೋದಲ್ಲಿ ಪ್ರಿಯಾಂಕಾ ಚೋಪ್ರಾ ತನ್ನ ವಾರ್ಷಿಕ ಆದಾಯವನ್ನೂ ಬಹಿರಂಗಪಡಿಸಿದ್ದಾರೆ. ‘ನನ್ನ ಹೆಸರು ಪ್ರಿಯಾಂಕಾ ಚೋಪ್ರಾ. ನಾನು ನಟಿ, ರೂಪದರ್ಶಿ ಮತ್ತು ಗಾಯಕಿ. ನಾನು 2023 ರಲ್ಲಿ 1000 ಲಕ್ಷ ರೂ.ಗಳಿಸಿದೆ. ಸಿನಿಮಾ, ಹಾಡುಗಳ ಹೊರತಾಗಿ ಹಲವು ಪ್ರಾಜೆಕ್ಟ್‌ಗಳಿಗೂ ಬಂಡವಾಳ ಹಾಕಿದ್ದೇನೆ’ ಎಂದು ಹೇಳಲಾಗಿದೆ. ಇದೆಲ್ಲದರ ಹೊರತಾಗಿ ಈ ನಕಲಿ ವಿಡಿಯೋದಲ್ಲಿ ಪ್ರಿಯಾಂಕಾ ಹಲವು ಮಾತುಗಳನ್ನು ಹೇಳಿದ್ದಾರೆ. ನೀವು ಪ್ರಿಯಾಂಕಾ ಚೋಪ್ರಾ ಅವರ ಈ ವಿಡಿಯೋವನ್ನು ಎಚ್ಚರಿಕೆಯಿಂದ ನೋಡಿದಾಗ, ಅವರ ಲಿಪ್ಸಿಂಕ್-ಧ್ವನಿ ಸಂಪೂರ್ಣವಾಗಿ ವಿಭಿನ್ನವಾಗಿದೆ. ಏಕೆಂದರೆ ಇದು ನಕಲಿ ವಿಡಿಯೋ. 

    ಕತ್ರಿನಾ, ರಶ್ಮಿಕಾ, ಆಲಿಯಾ ನಂತರ ದೇಸಿ ಗರ್ಲ್ ಡೀಪ್‌ಫೇಕ್ ವಿಡಿಯೋ ವೈರಲ್

    ಎಐ ಬಳಕೆಯಿಂದಾಗಿ ಹೆಚ್ಚಿವೆ ಡೀಪ್‌ಫೇಕ್ ವಿಡಿಯೋ ಪ್ರಕರಣಗಳು
    ಡೀಪ್‌ಫೇಕ್ ಹೊಸ ತಂತ್ರಜ್ಞಾನವಲ್ಲ. ಆದರೆ ಇಂಟರ್ನೆಟ್ ಬಳಕೆ ಮತ್ತು ಎಐ ಪರಿಕರಗಳ ಪ್ರವೇಶದೊಂದಿಗೆ, ಈಗ ಡೀಪ್‌ಫೇಕ್ ವಿಡಿಯೋಗಳು ವೇಗವಾಗಿ ಹೊರಹೊಮ್ಮುತ್ತಿವೆ, ಈ ಹಿಂದೆ, ರಶ್ಮಿಕಾ ಮಂದಣ್ಣ ಅವರ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಅವರು ಡೀಪ್​​​​ ನೆಕ್ ಡ್ರೆಸ್​​​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ನಂತರ ಕತ್ರಿನಾ ಕೈಫ್, ಆಲಿಯಾ ಭಟ್ ಮತ್ತು ಕಾಜೋಲ್ ಕೂಡ ಇದಕ್ಕೆ ಗುರಿಯಾದರು.  

    ಅದಾನಿ ಆಸ್ತಿ 88,000 ಕೋಟಿ ರೂ.ಹೆಚ್ಚಳ; ಬಿಲಿಯನೇರ್‌ಗಳ ಪಟ್ಟಿಯಲ್ಲಿ 16ನೇ ಸ್ಥಾನ, ಸಂಪತ್ತು ಹೆಚ್ಚಾಗೋಕೆ ಕಾರಣ ಇದೆ..

    ಅಗಲಿದ ‘ಅರ್ಜುನ’ ಸಾವಿನ ಬಗ್ಗೆ ತನಿಖೆ ಪ್ರಾರಂಭಿಸಲು ಸೂಚನೆ: ಸಿಎಂ ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts