More

    ಶೇ.83 ಅಂಕಗಳ ಖುಷಿಯಲ್ಲಿದ್ದಾಕೆ ಆತ್ಮಹತ್ಯೆ ಮಾಡಿಕೊಂಡ ಕಾರಣ ನಿಜಕ್ಕೂ ಶಾಕ್‌

    ಕಾನ್ಪುರ (ಉತ್ತರ ಪ್ರದೇಶ): ಇಲ್ಲಿಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶೇ.83ರಷ್ಟು ಅಂಕ ಪಡೆದು ಖುಷಿಯಲ್ಲಿ ಇದ್ದಳು. ಇಷ್ಟು ಅಂಕ ಪಡೆದದ್ದು ನೋಡಿ ಆಕೆಯ ಪಾಲಕರಿಗೂ ಖುಷಿಯೇ ಆಗಿತ್ತು.

    ಆದರೆ ಆ ಖುಷಿ ಹೆಚ್ಚು ಕ್ಷಣ ಇರಲಿಲ್ಲ. ಇದ್ದಕ್ಕಿದ್ದಂತೆಯೇ ಖಿನ್ನತೆಗೆ ಜಾರಿದಳು ಬಾಲಕಿ. ಇನ್ನೂ ಹೆಚ್ಚಿನ ಅಂಕ ಬರುವ ನಿರೀಕ್ಷೆ ಇಟ್ಟುಕೊಂಡಿದ್ದ ಮಗಳು ಇಷ್ಟು ಅಂಕ ಬಂದಿರುವುದಕ್ಕೆ ಬೇಸರ ಪಟ್ಟುಕೊಂಡಿರಬಹುದು ಎಂದುಕೊಂಡರು ಪಾಲಕರು. ಮೊದಲಿಗೆ ಖುಷಿಯಾಗಿಯೇ ಇದ್ದಾಕೆ ನಂತರ ತನ್ನ ಅಂಕದ ಬಗ್ಗೆ ಅಸಮಾಧಾನವಿದೆ ಎಂದಷ್ಟೇ ಹೇಳಿದ್ದಳು. ಆಗ ಪಾಲಕರು ಅವಳಿಗೆ ಸಮಾಧಾನ ಮಾಡಿ, ಇಷ್ಟು ಅಂಕ ಗಳಿಸಿರುವುದು ಹೆಚ್ಚೇ ಇದೆ ಬಿಡು ಎಂದು ಸುಮ್ಮನಾಗಿದ್ದರು.

    ಆದರೆ ಪಾಲಕರು ಮನೆಯಲ್ಲಿ ಇಲ್ಲದ ವೇಳೆ, ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಅಷ್ಟಕ್ಕೂ ಖುಷಿಯಲ್ಲಿಯೇ ಇದ್ದ ಈ ವಿದ್ಯಾರ್ಥಿನಿ ಇದ್ದಕ್ಕಿದ್ದಂತೆಯೇ ಖಿನ್ನತೆಗೆ ಜಾರಿದ್ದೇಕೆ? ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎನ್ನುವುದು ಮಾತ್ರ ತೀರಾ ವಿಚಿತ್ರವಾಗಿದೆ.
    ಅದಕ್ಕೆ ಕಾರಣ, ಆಕೆಯ ಕ್ಲಾಸ್‌ಮೇಟ್‌ ಹಾಗೂ ಸ್ನೇಹಿತ ಶೇ.85ರಷ್ಟು ಅಂಕ ಪಡೆದಿದ್ದ! ತನಗೆ ನಿರೀಕ್ಷಿಸಿದಷ್ಟು ಅಂಕ ಸಿಗದಿದ್ದರೂ ಖುಷಿಯಾಗಿಯೇ ಇದ್ದ ವಿದ್ಯಾರ್ಥಿನಿ ಯಾವಾಗ ತನ್ನ ಸ್ನೇಹಿತನ ಅಂಕವನ್ನು ನೋಡಿದಳೋ, ಅದನ್ನು ಆಕೆಗೆ ಸಹಿಸಲು ಸಾಧ್ಯವಾಗಲಿಲ್ಲ.

    ಇದನ್ನೂ ಓದಿ: ಥೂ..‌. ಇವನೆಂಥ ಮಗ? ಬೀದಿಯಲ್ಲೇ ಹೆತ್ತಮ್ಮನ ಹೊಟ್ಟೆಗೆ ಒದ್ದು ವಿಕೃತಿ ಮೆರೆದ

    ನಗುನಗುತ್ತಾ ಮನೆಗೆ ಬಂದಿದ್ದಾಕೆ, ನಂತರ ತನ್ನ ಸ್ನೇಹಿತನ ಅಂಕ ತಿಳಿಯುತ್ತಲೇ ನೋವಿನಿಂದ ಕೊರಗಿದ್ದಳು. ಈ ಬಗ್ಗೆ ಪಾಲಕರಲ್ಲಿ ಕೂಡ ಆಕೆ ಹೇಳಿಕೊಂಡಿರಲಿಲ್ಲ. ಆತ ಹೆಚ್ಚು ಅಂಕ ಪಡೆದ ಎಂದು ಈಕೆಗೆ ತನ್ನ ಅಂಕದ ಬಗ್ಗೆ ಅಸಮಾಧಾನವಾಗಿತ್ತು ಎನ್ನುವ ವಿಷಯ ನಂತರ ಬೆಳಕಿಗೆ ಬಂದಿದೆ.

    ಈ ಕುರಿತು ಎಸ್‌ಎಸ್‌ಪಿ ದಿನೇಶ್ ಕುಮಾರ್ ಸದ್ಯ ತನಿಖೆಯಿಂದ ಇಷ್ಟು ವಿಚಾರ ನಮಗೆ ತಿಳಿದಿದೆ. ಈ ಕುರಿತು ತನ್ನ ಕೆಲವು ಸ್ನೇಹಿತೆಯರ ಜತೆ ಅವಳು ಹೇಳಿಕೊಂಡಿದ್ದಳು. ಆದರೆ ಆತ್ಯಹತ್ಯೆಯ ಮಟ್ಟಿಗೆ ಇದು ಅವಳಿಗೆ ನೋವು ಉಂಟು ಮಾಡುತ್ತದೆ ಎಂದು ಅವರೂ ಅಂದುಕೊಂಡಿರಲಿಲ್ಲ. ಸದ್ಯ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ. ಈ ಬಗ್ಗೆ ಎಲ್ಲಾ ಆ್ಯಂಗಲ್‌ಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್‌)

    50 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ರಜೆ: ಇನ್ನೊಂದು ಇಲಾಖೆ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts