More

    ರಾಧಾಕೃಷ್ಣ ಅವತಾರದಲ್ಲಿ ‘ಶುಗರ್​ಲೆಸ್’​ ಚಿತ್ರದ ಫಸ್ಟ್ ಲುಕ್​ ಬಿಡುಗಡೆ

    ಬೆಂಗಳೂರು: ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಈ ವರ್ಷ ಎಲ್ಲಾ ಹಬ್ಬಗಳ ಆಚರಣೆ ಮತ್ತು ಸಂಭ್ರಮದಲ್ಲಿ ವ್ಯತ್ಯಾಸವಾಗಿದೆ. ಇದಕ್ಕೆ ದೀಪಾವಳಿ ಸಹ ಹೊರತಲ್ಲ. ಈ ಬಾರಿ ಪಟಾಕಿಗಳಿಗೆ ಸರ್ಕಾರ ನಿಷೇಧ ಹೇರಿದ್ದು, ಅದರಿಂದ ಕೊಂಚ ಸಂಭ್ರಮ ತಗ್ಗಿದೆ. ಈ ಮಧ್ಯೆ ಚಂದನವನದ ತಾರೆಯರೆಲ್ಲ ತಮ್ಮ ಅಭಿಮಾನಿಗಳಿಗೆ ತಮ್ಮದೇ ರೀತಿಯಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಕೋರಿದ್ದಾರೆ.

    ಇದನ್ನೂ ಓದಿ: ಈ ‘ವಿಂಡೋ ಸೀಟ್​’ನಲ್ಲಿ ಏನಿದೆ ಗೊತ್ತಾ? ನೀವೇ ನೋಡಿ …

    ಅದೇ ರೀತಿ ಪೃಥ್ವಿ ಅಂಬರ್​ ಮತ್ತು ಪ್ರಿಯಾಂಕಾ ತಿಮ್ಮೇಶ್​ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಶುಗರ್​ಲೆಸ್​ ಸಿನಿಮಾ ಇದೀಗ ದೀಪಾವಳಿ ಪ್ರಯುಕ್ತ ವಿಶೇಷವಾದ ಪೋಸ್ಟರ್ ಬಿಡುಗಡೆ ಮಾಡಿಕೊಂಡಿದೆ. ರಾಧಾಕೃಷ್ಣ ಭಂಗಿಯಲ್ಲಿಯೇ ಅದೇ ರೀತಿ ವೇಷಭೋಷಣ ಧರಿಸಿದ ಪೋಸ್ಟರ್ ಅನ್ನು ತಂಡ ಬಿಡುಗಡೆ ಮಾಡಿ ನಾಡಿನ ಜನತೆಗೆ ಶುಭ ಕೋರಿದೆ.

    ರಾಧಾಕೃಷ್ಣ ಅವತಾರದಲ್ಲಿ 'ಶುಗರ್​ಲೆಸ್'​ ಚಿತ್ರದ ಫಸ್ಟ್ ಲುಕ್​ ಬಿಡುಗಡೆ

    ‘ಶುಗರ್​ಲೆಸ್​’, ಕೆ.ಎಂ. ಶಶಿಧರ್​ ನಿರ್ದೇಶನದ ಹೊಸ ಚಿತ್ರ. ಈ ಹಿಂದೆ ‘ಡಾಟರ್​ ಆಫ್​ ಪಾರ್ವತಮ್ಮ’ ಚಿತ್ರವನ್ನು ನಿರ್ಮಿಸಿದ್ದರು ಅವರು. ಸದ್ಯ, ಪ್ರಜ್ವಲ್​ ಅಭಿನಯದ ‘ವೀರಂ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮಧ್ಯೆ, ತಾವೇ ಕಥೆ- ಚಿತ್ರಕಥೆ ಬರೆದು, ನಿರ್ದೇಶನ ಮಾಡುವುದಕ್ಕೆ ಹೊರಟಿದ್ದಾರೆ.

    ಇದನ್ನೂ ಓದಿ: ಟಿಫನ್ ಬಾಕ್ಸ್​ನಲ್ಲೇನಿರಬಹುದು ಗೆಸ್ ಮಾಡಿ!

    ಯುವಕನೊಬ್ಬನಿಗೆ ಚಿಕ್ಕ ವಯಸ್ಸಿನಲ್ಲೇ ಸಕ್ಕರೆ ಖಾಯಿಲೆ ಬಂದರೆ, ಅವನು ಅದನ್ನು ಹೇಗೆಲ್ಲ ಅನುಭವಿಸುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಹಾಸ್ಯಮಯವಾಗಿ ಹೇಳಲಾಗುತ್ತದಂತೆ. ಪೃಥ್ವಿ ನಾಯಕನಾಗಿ ಕಾಣಿಸಿಕೊಂಡರೆ, ಧರ್ಮಣ್ಣ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ಪುಷ್ಕರ್​ ಮಲ್ಲಿಕಾರ್ಜುನಯ್ಯ ಅರ್ಪಿಸುತ್ತಿರುವುದಷ್ಟೇ ಅಲ್ಲ, ವಿತರಣೆ ಸಹ ಮಾಡುತ್ತಿದ್ದಾರೆ. ಚಿತ್ರದ ಶೂಟಿಂಗ್​ ಸಹ ಜೋರಾಗಿಯೇ ನಡೆಯುತ್ತಿದೆ.

    PHOTOS| ಮಗುವಿನಂತೆ ಸಂಭ್ರಮಿಸಿದ ತಲೈವಾ, ದೀಪ ಬೆಳಗಿದ ಪಿಗ್ಗಿ-ಕರೀನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts