More

    ಭಗವತ ಗ್ರಂಥಗಳಿಂದ ಜ್ಞಾನ ಸಂಪಾದನೆ

    ಕೆಂಭಾವಿ:ವೇದವ್ಯಾಸರು ನಮಗೆ ನೀಡಿದ ಭಗವತ ಗ್ರಂಥ ಓದಿ ಅವುಗಳ ಜ್ಞಾನ ಪಡೆದಾಗ ಮಾತ್ರ ನಮ್ಮ ಜೀವನದ ದೀಪ ಬೆಳಗಲು ಸಾಧ್ಯ ಎಂದು ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಮಠದ ಶ್ರೀ ರಘುವಿಜಯ ತೀರ್ಥ ಸ್ವಾಮೀಜಿ ನುಡಿದರು.

    ಬೆಳಕಿನ ಹಬ್ಬ ದೀಪಾವಳಿ ನಿಮಿತ್ತ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡ ಧಾರ್ಮಿಕ ಕಾರ‍್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಅಜ್ಞಾನದ ಕತ್ತಲೆ ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವ ದೀಪದ ಸಂಕೇತಕ್ಕೆ ನಿಜವಾದ ಅರ್ಥ ಬರಬೇಕಾದರೆ ಗ್ರಂಥಗಳ ಶ್ರವಣ, ಪಠಣ ಬಹಳ ಮುಖ್ಯವಾಗಿದೆ. ಸಚ್ಚಾಸ್ತ್ರ ಶ್ರವಣ, ಗುರುಗಳ ಉಪದೇಶ, ಭಗವಂತನ ಮೇಲೆ ಅಪಾರ ಶ್ರದ್ಧೆ ಹೊಂದುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

    ಬಲಿಪಾಡ್ಯ ನಿಮಿತ್ತ ಮಂಗಳವಾರ ವೈಕುಂಠ ರಾಮಚಂದ್ರ ದೇವರಿಗೆ ಕ್ಷೀರಾಭಿಷೇಕ ಹಾಗೂ ಗೋಪೂಜೆ ನೆರವೇರಿಸಿ ನೆರೆದಿದ್ದ ನೂರಾರು ಭಕ್ತರಿಗೆ ಎಣ್ಣೆ ನೀಡಿ ತೈಲಾಂಭ್ಯಜನ ಮಾಡಿಸಿ ಆಶೀರ್ವದಿಸಿದರು.

    ಮಧ್ವರಾವ ನಾಡಿಗೇರ ಹಾಗೂ ನರಸಿಂಹರಾವ ಕುಲಕರ್ಣಿ ಅವರ ಮನೆಯಲ್ಲಿ ಶ್ರೀ ವೈಕುಂಠ ರಾಮಚಂದ್ರ ದೇವರ ಪೂಜೆ ನೆರವೇರಿಸಿದರು. ನೆರೆದಿದ್ದ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಜಯಸತ್ಯಪ್ರಮೋದ ಸೇವಾ ಕಾರ್ಯಕರ್ತರು, ಪ್ರಮೋದಿನ ಮಹಿಳಾ ಭಜನಾ ಮಂಡಳಿ ಪದಾಧಿಕಾರಿಗಳು ಸೇರಿ ಕಲಬುರಗಿ, ವಿಜಯಪುರ, ಹುಣಸಗಿ, ಸುರಪುರ, ಶಹಾಪುರ, ರಾಯಚೂರು ನಗರದಿಂದ ನೂರಾರು ಭಕ್ತರು ಆಗಮಿಸಿ ದೀಪವಾಳಿ ಸಂಭ್ರಮ ಕಣ್ತುಂಬಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts