More

    ಪ್ರಾಚೀನ ಜ್ಞಾನ: ಸೂರ್ಯನು ತನ್ನ ಕಕ್ಷೆಯಲ್ಲಿಯೇ ಸಂಚರಿಸುವನು…

    ಪ್ರಾಚೀನ ಜ್ಞಾನ: ಸೂರ್ಯನು ತನ್ನ ಕಕ್ಷೆಯಲ್ಲಿಯೇ ಸಂಚರಿಸುವನು...ಭೂಮಿಯನ್ನು ಸೂರ್ಯ ಸುತ್ತುವನೇ? ಸೂರ್ಯನನ್ನು ಭೂಮಿ ಸುತ್ತುವುದೇ? ಭೂಮಿ ಗ್ರಹ. ಭವಿಷ್ಯಶಾಸ್ತ್ರದಲ್ಲಿ ಸೂರ್ಯನೂ ಗ್ರಹ. ವಿಜ್ಞಾನ ಹೇಳುವಂತೆ ಸೂರ್ಯನನ್ನು ಭೂಮಿ ಸುತ್ತುತ್ತದೆ.

    2017ರಲ್ಲಿ ಯು.ಎಸ್​-ದಲ್ಲಿ ರೇ ಸಿಮ್ಮನ್ಸ್​ ಜ್ಯೂನಿಯರ್​ ಚರ್ಚಾಗೋಷ್ಠಿಯನ್ನು ನಡೆಸಿದರು. ಚರ್ಚುಗಳಲ್ಲಿ ಭೂಮಿಯ ಗೋಲಾಕಾರದ ಬೆಂಬಲಿಗರ ಕಿರುಕುಳ ಇರಲಿಲ್ಲ. ತಿಮಿಂಗಿಲಗಳು ಅಥವಾ ಆನೆಗಳ ಮೇಲೆ ನಿಂತಿರುವ ಭೂಮಿಯನ್ನು ಪ್ರತಿನಿಧಿಸುತ್ತದೆ ಎಂಬ ಕಲ್ಪನೆಯನ್ನು 19ನೇ ಶತಮಾನದಲ್ಲಿ ಕಂಡುಹಿಡಿಯಲಾಯಿತು. ಇದರ ವಿರುದ್ಧ ಮಾತಾಡಿದ ಜಿಯೋರ್ಡಾನೊ ಬ್ರೂನೋ ಧರ್ಮಾಂಧರ ಕೋಪಕ್ಕೆ ಸುಟ್ಟುಹೋದರು.

    ಭೂಮಿ ಚೆಂಡಿನಂತಿದೆ, ದೀರ್ವೃತ್ತಾಭ, ಕೋಳಿಮೊಟ್ಟೆಯ ಆಕಾರದಲ್ಲಿದೆ ಎನ್ನುವಲ್ಲಿಯವರೆಗೆ ನಿಂತಿದೆ. ಅಾಂಶ, ರೇಖಾಂಶಗಳ ಆಧಾರದ ಮೇಲೆ ತ್ರಿಜ್ಯವನ್ನು ಕಂಡು ಹಿಡಿಯಲಾಗಿದೆ. ತ್ರಿಜ್ಯಗಳು ಎಲ್ಲೆಡೆ ಸಮಪ್ರಮಾಣದಲ್ಲಿ ಇಲ್ಲ! ಉತ್ತರಧ್ರುವ- ದಕ್ಷಿಣಧ್ರುವ ಚಪ್ಪಟೆಯಾಗಿದೆ. ಅಲ್ಲಿಂದ ತ್ರಿಜ್ಯವೂ ಜಾಸ್ತಿ ಇದೆ ಎಂದು ವಿಜ್ಞಾನಿಗಳು ನುಡಿದರು.

    ಸೂರ್ಯನ ಪರಿಭ್ರಮಣ ವೇದಪ್ರಮಾಣ:
    ಹಿರಣ್ಯಪಾಣಿಃ ಸವಿತಾ ವಿಚರ್ಷಣಿರುಭೆ ದ್ಯಾವಪೃಥಿವೀ ಅಂತರಿಯತೇ. /ಅಪಾಮೀವಾಂ ಬಾಧತೆ ವೇತಿ ಸೂರ್ಯಮಾಭಿ ಕೃಷ್ಣೇನ ರಜಸಾ ದಯಾಮೃಣೋತಿ (ಋ.1.035.09)
    ಸೂರ್ಯನು ತನ್ನ ಕೆಯಲ್ಲೆ ತಾನು ತಿರುಗುತ್ತಾನೆ. ಆದರೆ ಅವನು ಭೂಮಿ ಮತ್ತು ಇತರ ಗ್ರಹಗಳನ್ನು ತನ್ನ ಶಕ್ತಿಯಿಂದ ಒಂದಕ್ಕೊಂದು ತಾಗದೇ, ತನ್ನ ಸುತ್ತಲೂ ತಿರುಗುವಂತೆ ಮಾಡಿದ್ದಾನೆ. (ಋಗ್ವೇದ 1.164.13)

    ಸೂರ್ಯನು ತನ್ನ ಕೆಯಲ್ಲೆ ತಾನು ತಿರುಗುತ್ತಾನೆ. ಹಾಗು ಅವನ ಗುರುತ್ವಾಕರ್ಷಣೆಯಿಂದ ಇತರ ಗ್ರಹಗಳು ಅವನ ಸುತ್ತ ಸುತ್ತುತ್ತಿವೆ. ಕಾರಣ ಸೂರ್ಯನು ಇವುಗಳಿಗಿಂತ ದೊಡ್ಡವನು.
    ಅತ್ರಾಹ ಗೋರಮನ್ವತ ನಾಮ ತ್ವಷ್ಟುರಪೀಚ್ಯಮ್​
    ಇಥ್ವಾ ಚಂದ್ರಮಸೋ ಗೃಹೆ (ಋಗ್ವೇದ 1.84.15 : )
    ಚಲಿಸುತ್ತಿರುವ ಚಂದ್ರ ಯಾವಾಗಲೂ ಸೂರ್ಯನಿಂದ ಬೆಳಕನ್ನು ಪಡೆಯುತ್ತಾನೆ.
    ಸೋಮೋ ವಧೂಯುರಭವದಶ್ವಿನಾಸ್ತಾಮುಭಾ ವರಾ
    ಸೂರ್ಯಂ ಯತ್ಪಾತ್ಯೆ ಶಂಸಂತೀಂ ಮನಸಾ ಸವಿತಾದದಾತ್​

    ಚಂದ್ರನು ಮದುವೆಯಾಗಲು ಇಚ್ಛಿಸಿದನು. ಅವನ ಮದುವೆಗೆ ದಿನ ಮತ್ತು ರಾತ್ರಿಗಳು ಬಂದವು. ಸೂರ್ಯನು ತನ್ನ ಮಗಳಾದ ರಶ್ಮಿಯನ್ನು ಚಂದ್ರನಿಗೆ ಉಡುಗೊರೆಯಾಗಿ ನೀಡಿದನು.
    ( ಋಗ್ವೇದ 10.85.9:) ಓ! ಸೂರ್ಯ!! ನೀನು ಯಾರಿಗೆ ನಿನ್ನ ರಶ್ಮಿಗಳನ್ನು ನೀಡಿದ್ದೆಯೋ ಅವನೇ ನಿನ್ನನ್ನು ಅಡ್ಡಗಟ್ಟುವನು. ನಂತರ ಭೂಮಿಯಲ್ಲಿ ಕತ್ತಲು ಆವರಿಸುವುದು (ಋಗ್ವೇದ 5.40.5:)
    ಇದು ವೇದದ ಕೆಲವೇ ಕೆಲವು ಉದಾಹರಣೆಗಳು. ಇದರ ಕುರಿತು ಇನ್ನೂ ಹೆಚ್ಚು ಹೆಚ್ಚು ಶೋಧನೆಯಾಗಬೇಕಾಗಿದೆ. ಇದಕ್ಕೆ ಮೊದಲು ವೇದಗಳ ಬಗ್ಗೆ ನಮ್ಮಲ್ಲಿರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಬೇಕು. ಆಗ ಮಾತ್ರ ಇವೆಲ್ಲವು ಸಾಧ್ಯವಾಗುವುದು.

    ಅಗ್ನಿ ನೀರಿನಿಂದ ಉದಯಿಸುತ್ತದೆ ಮತ್ತು ನೀರಿನಲ್ಲಿ ವಾಸಿಸುತ್ತದೆ ಎನ್ನುವುದು ಋಗ್ವೇದ. ಈ ವಿಷಯದ ಆಳದಲ್ಲಿ ವೈಾನಿಕತೆ ಅಡಗಿದೆ. ನೀರು ಜಲಜನಕ ಮತ್ತು ಆಮ್ಲಜನಕದ ಮಿಶ್ರಣ. ಜಲಜನಕ ಶ್ರೀವಾಗಿ ದಹಿಸುವ ಅನಿಲವಾಗಿದ್ದು, ಆಮ್ಲಜನಕ ದಹನಕ್ಕೆ ಸಹಕಾರಿ. ಅಗ್ನಿಯು ಜೀವರು ಮತ್ತು ದೇವರ ನಡುವಣ ಕೊಂಡಿ. ದೇವರ ಸಂತೃಪ್ತಿಗೆ ಮಾಡುವ ಯ ಹವನಗಳ ಮುಖವು ಅಗ್ನಿಕುಂಡ. ಜಾತವೇದ ಎಂದು ಹಲವಾರು ಮಂತ್ರಗಳಲ್ಲಿ ಬರುವುದು. ಸಾಧನಾಪಥದ ಸೋಪಾನಗಳಾದ ಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ಸ್ಮರಣಶಕ್ತಿ, ಧ್ಯಾನ, ಧ್ಯಾನದ ಅರಿವು, ದೈಹಿಕ ಮತ್ತು ಮಾನಸಿಕ ಶಕ್ತಿ, ಆಹಾರ, ನೆಲ ಮತ್ತು ಜಲಗಳಿಗಿಂತ ಅಗ್ನಿತತ್ತ$್ವ ಶ್ರೇಷ್ಠವಾದುದು. ಸ್ಮೂ ತತ್ವಗಳು ಸ್ಥೂಲ ತತ್ವಗಳಿಗಿಂತ ಹೆಚ್ಚು ವ್ಯಾಪಿಸುವುದು. ಅಗ್ನಿತತ್ತ$್ವ ಸೃಷ್ಟಿಕಾರಕ, ಸ್ಥಿತಿಕಾರಕ ಮತ್ತು ಲಯಕಾರಕ ಪರಮಾತ್ಮನ ಗುಣಗಳನ್ನು ಹೊಂದಿದೆ. ಸೂರ್ಯ ನಮಗೆ ಬೆಳಕು ಮತ್ತು ಶಾಖ ನೀಡುವವನಾಗಿದ್ದಾನೆ. ಶಾಖ ಹೆಚ್ಚಾದಾಗ ಮಳೆ ಬರುತ್ತದೆ. ನೀರು ಆವಿಯಾಗಿ, ಆಕಾಶದಲ್ಲಿ ಮೋಡವಾಗಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ರ್ಷಣೆಯ ಮೂಲಕ ನೀರೇ ಆಗುವುದು! ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವನ್ನು ಬಿಡುಗಡೆ ಮಾಡುವ ಸಮುದ್ರದ ಉಪ್ಪುನಿರು ಈ ಪ್ರಕೃತಿ ಚಕ್ರದಲ್ಲಿ ಸಿಹಿನೀರೇ ಆಗುವುದು.

    ಅಗ್ನಿಮುಖ: ಸೂರ್ಯನ ಪ್ರತಿರೂಪವೇ ಅಗ್ನಿ. ದೇವ ಮುಖವು ಅಗ್ನಿಯೇ ಆಗಿದೆ. ಹವಿಸ್ಸುಗಳನ್ನು ಅಪಿರ್ಸುವುದು ಅಗ್ನಿಮುಖದಿಂದಲೇ! ಸಕಲ ಜೀವರಾಶಿಗಳು, ಚರಾಚರಗಳ ಅಸ್ತಿತ್ವವಿರುವುದು ಅಗ್ನಿಯಲ್ಲಿ. ಎಲ್ಲಿ ಅಗ್ನಿ ನಷ್ಟವಾಯ್ತೋ ಅಲ್ಲಿ ಪ್ರಾಣವಿಲ್ಲ. ಮೃತಹೊಂದಿದ ಎನ್ನುವರು. ಸಹಜ ಜೀವಶಕ್ತಿಯನ್ನು ಕುರಿತು ಆರಾಧಿಸುವ ಒಂದು ವಿಶಿಷ್ಟ ಪದ್ಧತಿಯೇ ಅಗ್ನಿಮುಖವೆನ್ನಿಸಿ ಕೊಳ್ಳುತ್ತದೆ. ಜೀವಿಗಳಲ್ಲಿ ಜೀವಶಕ್ತಿಯೂ, ಪ್ರಾಣಶಕ್ತಿಯೂ ಆಗಿ ನೆಲೆಸಿ ಚಲನಶೀಲಗೊಳಿಸುವ ಶಕ್ತಿಯೇ ಅಗ್ನಿ. ಅದರ ನಿರಸನವೇ ಜಡತ್ವ ಪ್ರಥ್​. ಚೈತನ್ಯವು ಜೀವಂತಿಕೆಯ ಮೂಲ.

    (ಲೇಖಕರು ಕನ್ನಡ ಹಾಗೂ ಸಂಸತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts