More

    ಅಂತರಂಗ: ಬಿತ್ತಿದಂತೆ ಬೆಳೆ ಸುಳ್ಳಲ್ಲ!

    ಅಂತರಂಗ: ಬಿತ್ತಿದಂತೆ ಬೆಳೆ ಸುಳ್ಳಲ್ಲ!ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿದ, ತನ್ನನ್ನು ಯಾರು ನೆನೆಯುತ್ತಾ ಪ್ರಾಣ ಬಿಡುತ್ತಾರೋ, ಅವರು ನನ್ನನ್ನೇ ಸೇರಿಕೊಳ್ಳುತ್ತಾರೆ ಎಂಬ ವಾಣಿಯು ಚಿರಪರಿಚಿತ. ಆದ್ದರಿಂದ ನಾವೆಲ್ಲಾ ಭಗವಂತನನ್ನು ಸಾಯುವ ಸಮಯದಲ್ಲಿ ನೆನೆದರೆ ಸಾಕು, ನಮಗೆ ಸ್ವರ್ಗ ಪ್ರಾಪ್ತಿ ಉಂಟಾಗುತ್ತದೆ ಎಂದು ಭಾವಿಸುತ್ತೇವೆ. ಅಧ್ಯಾತ್ಮವು ಮುಪ್ಪಿನ ಸಮಯದಲ್ಲಿ, ಯೌವನದಲ್ಲಿ ಅಲ್ಲ ಎಂಬ ಮಾತನ್ನು ನಾವು ಹಲವಾರು ಬಾರಿ ಕೇಳಿದ್ದೇವೆ. ಆದರೆ ಇದು ಸಾಧ್ಯವೇ?. ಇದೇ ಲೆಕ್ಕಾಚಾರವನ್ನು ಹಾಕಿಕೊಂಡಿದ್ದ ಕಮಲಮ್ಮ ತನ್ನ 60ರ ವಯಸ್ಸಿನಲ್ಲಿ ಮನೆಯ ನಿರ್ವಹಣೆಯನ್ನು ಸೊಸೆಯಂದಿರಿಗೆ ಬಿಟ್ಟು, ಭಗವಚ್ಚಿಂತನೆಯನ್ನು ಪ್ರಾರಂಭಿಸುತ್ತಾಳೆ.

    ಆದರೆ ಮನಸ್ಸು ಕೇಳಬೇಕಲ್ಲ! ಇಷ್ಟು ದಿನದ ಸಂಸಾರದ ಚಿಂತೆಯನ್ನು ಬಿಡಲು ಸಾಧ್ಯವಾಗಲಿಲ್ಲ. ಸೊಸೆಯಂದಿರು ಹೆಚ್ಚು ಖರ್ಚು ಮಾಡುತ್ತಾರೋ, ಅನವಶ್ಯಕವಾಗಿ ಪದಾರ್ಥಗಳನ್ನು ಉಪಯೋಗಿಸುತ್ತಾರೋ ಎಂಬೆಲ್ಲ್ಲ ಶಂಕೆ, ಆತಂಕ. ಇಂತಹ ಮನಃ ಸ್ಥಿತಿಯಿಂದ ಭಗವಂತನ ಧ್ಯಾನ ಕಷ್ಟಸಾಧ್ಯ. ಅದರೂ ಕಮಲಮ್ಮ ಪ್ರಯತ್ನಿಸುತ್ತಿದ್ದಳು. ಹೀಗಿರಲು ಕಮಲಮ್ಮನಿಗೆ ಇಹಲೋಕದ ಯಾತ್ರೆ ಮುಗಿಸುವ ಸಮಯ ಬಂದಿತು. ವೈದ್ಯರು ಅಕೆಯ ದಿನಗಳು ಬೆರಳೆಣಿಕೆಯಷ್ಟು ಎಂದರು. ದುಃಖತಪ್ತರಾದ ಮನೆಮಂದಿಯೆಲ್ಲ ಕಮಲಮ್ಮನ ಹಾಸಿಗೆ ಸುತ್ತ ಕುಳಿತಿದ್ದಾರೆ. ಕಮಲಮ್ಮ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಯಾರಿಗೂ ಅರ್ಥವಾಗುತ್ತಿಲ್ಲ.

    ಕಮಲಮ್ಮ ತನ್ನ ಅಂತಿಮ ಬಯಕೆಯನ್ನು ಹೇಳುತ್ತಿರಬಹುದೇನೋ ಎಂದು ತಿಳಿಯಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಸೊಸೆಯೊಬ್ಬಳು ಎಲ್ಲರಿಗೂ ಸುಮ್ಮನಿರಲು ಹೇಳಿ, ಕಮಲಮ್ಮನ ಬಾಯಿ ಬಳಿ ತನ್ನ ಕಿವಿಯನ್ನಿಟ್ಟು ಕಮಲಮ್ಮನ ಮಾತನ್ನು ಕೇಳಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ದೀಪದ ಬತ್ತಿಯನ್ನು ಕಡಿಮೆ ಮಾಡಿ. ಇಲ್ಲದಿದ್ದರೆ ಎಣ್ಣೆಯು ಬೇಗನೆ ಖಾಲಿಯಾಗುತ್ತದೆ ಎಂಬ ಮಾತನ್ನು ಕಮಲಮ್ಮ ಹೇಳಲು ಪ್ರಯತ್ನಿಸುತ್ತಿದ್ದಳು. ಇದನ್ನು ಆಲಿಸಿದ ಎಲ್ಲರಿಗೂ ಕಮಲಮ್ಮನ ಮೇಲೆ ಕೋಪ, ಬೇಜಾರು ಉಂಟಾಗುತ್ತದೆ. ಆದರೆ ಆಗಲೇ ಕಮಲಮ್ಮನ ಪ್ರಾಣಪಯು ಹಾರಿಹೋಗಿರುತ್ತದೆ. ಕೊನೆಗೂ ಕಮಲಮ್ಮನಿಗೆ ತನ್ನ ಅಂತ್ಯದ ಸಮಯದಲ್ಲಿ ಭಗವಂತನನ್ನು ನೆನೆಯಲು ಸಾಧ್ಯವಾಗಲಿಲ್ಲ. ಜೀವನದುದ್ದಕ್ಕೂ ನಾವು ಮಾಡುವ ಕೆಲಸ, ಚಿಂತನೆಗಳು ನಮ್ಮನ್ನು ಸಾವಿನ ಸಮಯದಲ್ಲೂ ಹಿಂಬಾಲಿಸುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts