More

    ಚಂದ್ರು-ಉಪ್ಪಿ ಕಬ್ಜದಲ್ಲಿ ಭಾರ್ಗವ್ ಬಕ್ಷಿಯಾದ ಸುದೀಪ್

    ಬೆಂಗಳೂರು: ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರದಲ್ಲಿ ಸುದೀಪ್ ಒಂದು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಸುದ್ದಿಯನ್ನು ಸಂಕ್ರಾಂತಿ ಸಂದರ್ಭದಲ್ಲೇ ಘೋಷಿಸಿದ್ದರು ನಿರ್ದೇಶಕ ಆರ್ ಚಂದ್ರು. ಅಷ್ಟೇ ಅಲ್ಲ, ಸುದೀಪ್ ಅವರ ಸ್ಕೆಚ್ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದರು. ಆದರೆ, ಇನ್ನೊಂದು ಸಂಕ್ರಾಂತಿ ಬರುವುದಕ್ಕೆ ಒಂದೇ ತಿಂಗಳಿದ್ದರೂ, ಸುದೀಪ್ ಮಾತ್ರ ಚಿತ್ರೀಕರಣದಲ್ಲಿ ಭಾಗವಹಿಸಿರಲಿಲ್ಲ. ಈಗ ಕೊನೆಗೂ ಸುದೀಪ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ‘ಕಬ್ಜ’ ಚಿತ್ರದ ಚಿತ್ರೀಕರಣ ಪುನಃ ಪ್ರಾರಂಭವಾಗಿದ್ದು, ಈ ಭಾಗದ ಚಿತ್ರೀಕರಣದಲ್ಲಿ ಸುದೀಪ್ ಸಹ ಭಾಗವಹಿಸಿದ್ದಾರೆ. ಸುದೀಪ್, ಭಾರ್ಗವ್ ಬಕ್ಷಿ ಎಂಬ ಹೆಸರಿನ ಪಾತ್ರ ಮಾಡುತ್ತಿದ್ದು, ಈ ಪಾತ್ರವು ಚಿತ್ರಕ್ಕೊಂದು ವಿಭಿನ್ನ ತಿರುವು ಕೊಡುತ್ತದೆ ಎಂದು ಹೇಳಲಾಗಿದೆ.

    ಅಂಡರ್​ವರ್ಲ್ಡ್ ಹಿನ್ನೆಲೆಯ ‘ಕಬ್ಜ’ ಚಿತ್ರದಲ್ಲಿ ಉಪೇಂದ್ರ ಮತ್ತು ಸುದೀಪ್ ಜತೆಗೆ ಜಗಪತಿ ಬಾಬು, ರಾಹುಲ್ ದೇವ್, ಕೋಟ ಶ್ರೀನಿವಾಸ ರಾವ್ ಮುಂತಾದವರು ನಟಿಸುತ್ತಿದ್ದು, ನಾಯಕಿ ಯಾರೆಂದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.

    ಮೂರು ವರ್ಷದ ಅವಳಿ ಮಕ್ಕಳ ಸಾವಿನ ಬೆನ್ನಿಗೆ ತಾಯಿಯೂ ನಿಧನ; ತಂದೆ ಇನ್ನೂ ಆಸ್ಪತ್ರೆಯಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts