ಬೆಂಗಳೂರು: ಸ್ಯಾಂಡಲ್ವುಡ್ ಅಂಗಳದಲ್ಲೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಇತ್ತೀಚೆಗಷ್ಟೇ ನಾನು ಮತ್ತೆ ನಿರ್ದೇಶನ ಮಾಡುವುದಕ್ಕೆ ಸಿದ್ಧನಾಗಿದ್ದೇನೆ. ಶೀಘ್ರದಲ್ಲಿಯೇ ಆ ಪ್ರಾಜೆಕ್ಟ್ ಬಗ್ಗೆ ಹೇಳಲಿದ್ದೇನೆ ಎಂದಿದ್ದರು ಉಪೇಂದ್ರ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅದಕ್ಕೆ ಸಂಬಂಧಿಸಿದ ಪೋಸ್ಟ್ವೊಂದು ಹರಿದಾಡುತ್ತಿದೆ. ಅಚ್ಚರಿ ವಿಚಾರ ಏನೆಂದರೆ, ಆ ಚಿತ್ರದಲ್ಲಿ ಸ್ಯಾಂಡಲ್ವುಡ್ನ ಸ್ಟಾರ್ ನಟರಾದ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಲಿದ್ದಾರಂತೆ!
ಇದನ್ನೂ ಓದಿ: ಲಾಕ್ಡೌನ್ ಬಳಿಕ ಹಾಸ್ಯ ನಟ ಧರ್ಮಣ್ಣ ಸಖತ್ ಬಿಜಿ
ಹೌದು, ಉಪೇಂದ್ರ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರಕ್ಕೆ ‘ದಿಗ್ಗಜರು 2’ ಎಂದು ಶೀರ್ಷಿಕೆ ಅಂತಿಮವಾಗಿದ್ದು, ಸುದೀಪ್ ಮತ್ತು ದರ್ಶನ್ ಮುಖ್ಯಭೂಮಿಕೆ ನಿಭಾಯಿಸಲಿದ್ದಾರಂತೆ. ಅಷ್ಟೇ ಅಲ್ಲ ಚಿತ್ರಕ್ಕೆ ಸಂಗೀತ ನಿರ್ದೇಶಕರನ್ನೂ ಫೈನಲ್ ಮಾಡಲಾಗಿದೆ, ಅಜನೀಶ್ ಲೋಕನಾಥ್ ಮ್ಯೂಸಿಕ್ ಹೊಣೆ ಹೊತ್ತಿದ್ದಾರಂತೆ.
ಆನಂದ್ ಆಡಿಯೋ ಸಂಸ್ಥೆ ಲೋಗೋದೊಂದಿಗೆ ಪೋಸ್ಟರ್ ಡಿಸೈನ್ ಮಾಡಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಈ ವಿಚಾರವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ಸಿನಿಮಾ ಆಗುತ್ತಿರುವುದು ನಿಜವೇ? ಈ ಪ್ರಶ್ನೆಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ಗೆ ಆಕ್ಷನ್-ಕಟ್ ಹೇಳಲಿರುವ ‘ಮಾಸ್ಟರ್’ ನಿರ್ದೇಶಕ …
‘ನನಗೆ ಈ ರೀತಿಯ ಯಾವ ಆಫರ್ ಬಂದಿಲ್ಲ. ನನಗನಿಸಿದ ಮಟ್ಟಿಗೆ ಇದು ಅಭಿಮಾನಿಗಳು ತಮ್ಮ ಸಂತೋಷಕ್ಕೆ ಮಾಡಿಕೊಂಡ ಪೋಸ್ಟರ್. ಈ ಕಾಂಬಿನೇಷನ್ ಒಂದಾದರೆ, ನಮಗೂ ಸಂತೋಷವೇ. ಅಭಿಮಾನಿಗಳಿಗೂ ಹಬ್ಬಾನೇ’ ಎಂದಿದ್ದಾರೆ.
Here It's Official News For Entire KFI ..!🌠🌠🌠🌠🌠🌠🌠🌠🌠🌠🌠@KicchaSudeep And @dasadarshan
Come With #Diggajaru2 ….!💥💥Directed by @nimmaupendra
Music – @AJANEESHB #DBoss #Roberrt #Kotigobba3 #Phantom @aanandaaudio pic.twitter.com/vhyhPh30Sb— Bullet Basya (@BulletTweets_) September 16, 2020
ಡ್ರಗ್ಸ್ ಮಾಫಿಯಾ ಬಗ್ಗೆ ಸಾಕ್ಷಿ ಇದ್ದರೆ ಪೊಲೀಸರಿಗೆ ಕೊಡಿ… ಕಂಗನಾಗೆ ರಮ್ಯಾ ಸಲಹೆ