More

    ಬೆಂಗಳೂರಲ್ಲಿ ಕೇಳಿಬಂತು ಜೋರು ಶಬ್ದ!

    ಬೆಂಗಳೂರು : ನಗರದ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಜೋರು ಶಬ್ದವೊಂದು ಕೇಳಿಬಂತು. ಸುಮಾರು 12.30 ರ ನಂತರ ಕೇಳಿಬಂದ ಈ ಶಬ್ದದ ಬಗ್ಗೆ ಅನೇಕ ನಿವಾಸಿಗಳು ಟ್ವಿಟರ್​ನಲ್ಲಿ ಶೇರ್​ ಮಾಡಿ ಚರ್ಚೆ ನಡೆಸಿದರು.

    ನೆಟ್ಟಿಗರ ಪ್ರಕಾರ, ಈ ದಿಢೀರಾದ ಜೋರು ಶಬ್ದವು ಸರ್ಜಾಪುರ, ಜೆಪಿ ನಗರ, ಬೆನ್ಸನ್​ ಟೌನ್, ಅಲ್ಸೂರು, ಇಸ್ರೋ ಲೇಔಟ್​, ಎಚ್​ಎಸ್ಆರ್ ಲೇಔಟ್​ ಮತ್ತು ಬೆಂಗಳೂರಿನ ದಕ್ಷಿಣ ಮತ್ತು ಪೂರ್ವ ಭಾಗದ ಇತರ ಕೆಲವು ಪ್ರದೇಶಗಳಲ್ಲಿ ಕೇಳಿಬಂದಿದೆ.

    ಕಳೆದ ವರ್ಷ ಮೇನಲ್ಲಿ ಇದೇ ರೀತಿ ಶಬ್ದ ಕೇಳಿಬಂದಿದ್ದನ್ನು ಹಲವು ಟ್ವಿಟರ್​ ಬಳಕೆದಾರರು ನೆನಪಿಸಿಕೊಂಡಿದ್ದಾರೆ. ಆಗ ಇಂಡಿಯನ್ ಏರ್​ ಫೋರ್ಸ್​ನ ಸುಖೋಯಿ 30 ಜೆಟ್​ ಹಾದುಹೋದ ಶಬ್ದವಾಗಿತ್ತು ಎಂಬುದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಇದು ಮತ್ತೊಂದು ‘ಸಾನಿಕ್​ ಬೂಮ್​’ ಆಗಿರಬಹುದೇ ಎಂದು ಟ್ವೀಟ್​ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ.

    ಕೆಲವೆಡೆಗಳಲ್ಲಿ ಶಬ್ದ ಕೇಳದಿದ್ದರೂ, ಬರೀ ಕಿಟಕಿಗಳು ಅಲುಗಾಡಿದ್ದರೆ, ಮತ್ತೆ ಹಲವೆಡೆ ಭಾರೀ ಶಬ್ದದೊಂದಿಗೆ ಕಿಟಕಿ ಗಾಜುಗಳು ಅಲುಗಾಡಿದವು ಎಂದು ಟ್ವೀಟ್​ ಮಾಡಲಾಗಿದೆ. ಆದರೆ, ತನ್ನ ಯಾವುದೇ ವಿಮಾನಗಳು ಈ ಶಬ್ದ ಉಂಟುಮಾಡಿಲ್ಲ ಎಂದು ಹೆಚ್​ಎಎಲ್​ ಸುದ್ದಿಗಾರರಿಗೆ ಹೇಳಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಸಂಚಾರಿ ವಿಜಯ್​ ಅಪಘಾತ: ಆ ರಾತ್ರಿಯ ಘಟನಾವಳಿ ಬಿಚ್ಚಿಟ್ಟ ಬೈಕ್​ ಸವಾರ ನವೀನ್

    ದೊಣ್ಣೆ, ಕತ್ತಿ ಝಳಪಿಸಿದ ಮದುವೆ ಹೆಣ್ಣು! …ಚಕಿತರಾದ ಬಂಧುಬಳಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts