More

    ಇವರು ಕಡಿಮೆ ಬೆಲೆಗೆ ಖರೀದಿ ಮಾಡ್ತಿದ್ರು ಮಾದಕ ವಸ್ತು! ಡ್ರಗ್​ ಪೆಡ್ಲರ್​ಗಳನ್ನು ಬಂಧಿಸಿದ ಸಿಸಿಬಿ

    ಬೆಂಗಳೂರು: ಬೆಂಗಳೂರು ನಗರದಲ್ಲಿ ನೈಜೀರಿಯನ್ನರ ಮೇಲೆ ಯಾವಾಗಲೂ ಓರೆಗಣ್ಣು ಇದ್ದಿರುತ್ತೆ. ಕಾರಣ ಇಷ್ಟೇ. ಅಲ್ಲಿಂದ ಹೆಚ್ಚಿನವರು ಇಲ್ಲಿಗೆ ಬರುವುದೇ ಮಾದಕ ವಸ್ತುಗಳ ಮಾರಾಟಕ್ಕೆ. ಈಗ ಸಿಸಿಬಿ ಪೊಲೀಸರು ಸೂಡಾನ್​ ಹಾಗೂ ಕೇರಳ ಮೂಲದ ಅಪರಾಧಿಗಳನ್ನು ಬಂಧಿಸಿದ್ದು ಕ್ರಿಸ್ಟಲ್​ ರೂಪದಲ್ಲಿದ್ದ ಎಂಡಿಎಂ ಅನ್ನು ಇವರು ಮಾರಾಟ ಮಾಡುತ್ತಿದ್ದರು.

    ನಗರದ ವಿವಿಧೆಡೆ ಎಂಡಿಎಂಎ ಕ್ರಿಸ್ಟಲ್ ಮಾದಕವಸ್ತು ಮಾರಾಟ ಮಾಡುತ್ತಿದ್ದ ನಾಲ್ವರು ಡ್ರಗ್‌ಪೆಡ್ಲರ್‌ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೩೫ ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

    ಸೂಡಾನ್ ಮೂಲದ ಅಮೂರ್ ಮೊಹಮ್ಮದ್, ಶಬ್ಬಿರ್, ಯಸೀಮ್ ಮತ್ತು ರಮೇಶ್ ಬಂಧಿತರು. ಬಂಧಿತರಿಂದ ೩೫ ಲಕ್ಷ ರೂ. ಮೌಲ್ಯದ ೨೪೦ ಗ್ರಾಂ ಎಂಡಿಎಂಎ ಕ್ರಿಸ್ಟಲ್, ೧ ಕಾರು, ೫ ಬೈಕ್, ೫ ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳು ನೈಜಿರಿಯಾ ಹಾಗೂ ಕೇರಳ ಮೂಲದ ವ್ಯಕ್ತಿಗಳಿಂದ ಎಂಡಿಎಂಎ ಕ್ರಿಸ್ಟಲ್ ಅನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದರು. ನಂತರ ೧ ಗ್ರಾಂ ಎಂಡಿಎಂಎಗೆ ೧೦ ರಿಂದ ೧೨ ಸಾವಿರ ರೂ.ನಂತೆ ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಕಂಪನಿ ನೌಕರರು, ಉದ್ಯೋಗಿಗಳಿಗೆ ನಿರಂತರವಾಗಿ ಡ್ರಗ್ಸ್ ಪೂರೈಸುತ್ತಿದ್ದರು. ಅಲ್ಲದೆ, ತಮ್ಮ ಪರಿಚಿತ ಗ್ರಾಹಕರಿಗೆ ಮಾತ್ರ ಮಾದಕ ವಸ್ತು ಪೂರೈಸುತ್ತಿದ್ದರು. ಈ ನಾಲ್ವರು ಆರೋಪಿಗಳ ಬಗ್ಗೆ ಸಿಸಿಬಿ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಖಚಿತ ಮಾಹಿತಿ ಆಧಾರದ ಮೇಲೆ ಹೆಬ್ಬಾಳ, ಬಾಣವಾಡಿ, ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವಶಕ್ಕೆ ಪಡೆದಿರುವ ಮಾದಕವಸ್ತುಗಳನ್ನು ನಗರದಲ್ಲಿ ನಡೆಯಲಿರುವ ಹೊಸ ವರ್ಷ ಆಚರಣೆಯ ಪಾರ್ಟಿಗಳಲ್ಲಿ ಪೂರೈಕೆ ಮಾಡುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts