More

    ಬದುಕನ್ನು ಎದುರಿಸುವ ಕಲೆ ಗೊತ್ತಿದ್ದರೆ ಮಾತ್ರ ಯಶಸ್ಸು

    ರಾಯಚೂರು: ಬದುಕನ್ನು ಎದುರಿಸುವ ಕಲೆ ಗೊತ್ತಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ದೊರೆಯಲು ಸಾಧ್ಯವಾಗುತ್ತಿದ್ದು, ಬದುಕು ಕಲಿಸುವ ಶಿಕ್ಷಣ ನಮ್ಮದಾಗಬೇಕಾಗಿದೆ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಹೇಳಿದರು.
    ಸ್ಥಳೀಯ ರಾಯಚೂರು ವಿವಿಯ ಕೃಷ್ಣತುಂಗಾ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಹಿರಿಯರು ಅನೇಕ ಕಷ್ಟನಷ್ಟಗಳು ಬದುಕಿ ಬಾಳಿ ತೋರಿಸಿದರು. ಅವರ ಬದುಕು ನಮಗೆ ಆದರ್ಶವಾಗಬೇಕಾಗಿದೆ ಎಂದರು.
    ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಓದಿ ಹತ್ತಾರು ಪದವಿ ಪಡೆದಿದ್ದರೂ ಬದುಕನ್ನು ಎದುರಿಸಲಾಗದೆ ಸೋತವರು, ಆತ್ಮಹತ್ಯೆ ಮಾಡಿಕೊಂಡವರನ್ನು ನೋಡಿದ್ದೇವೆ. ಐಐಟಿಯಲ್ಲಿ ಕಲಿತು ವಿದೇಶದಲ್ಲಿ ಉದ್ಯೋಗ ಪಡೆದು ಲಕ್ಷಾಂತರ ಸಂಪಾದಿಸುತ್ತಿದ್ದರೂ ಆರ್ಥಿಕ ಹಿನ್ನಡೆ ಸಂದರ್ಭದಲ್ಲಿ ಉದ್ಯೋಗ ಹೋಗುತ್ತದೆ.
    ಮನುಷ್ಯ ಧನಾತ್ಮಕ ಯೋಚನಾ ಗುಣ ಮತ್ತು ವ್ಯಕ್ತಿತ್ವ ಬೆಳೆಸಿಕೊಂಡಾಗ ಆತನ ಸುತ್ತ ಅದೇ ಬಗೆಯ ಧನಾತ್ಮಕತೆ ಬೆಳೆಯುತ್ತದೆ. ಜನರು ಆತನಡೆಗೆ ಆಕರ್ಷಿಸಲ್ಪಡುತ್ತಾರೆ. ಸದಾ ಕೆಟ್ಟದನ್ನು ಅಥವಾ ಸೋಲನ್ನು ಯೋಚಿಸುವ ಋಣಾತ್ಮಕ ಮನಸ್ಥಿತಿಯ ಮನುಷ್ಯನನ್ನು ಯಾರೂ ಇಷ್ಟಪಡುವುದಿಲ್ಲ. ಅದಕ್ಕೆ ನಾವು ನಮ್ಮಲ್ಲಿರುವ ಕೆಟ್ಟ ಚಿಂತನೆಗಳನ್ನು, ಸೋಲಿನ ಭಯವನ್ನು ಮನಸ್ಸಿನಿಂದ ಹೊರಹಾಕಬೇಕು ಎಂದು ಡಾ.ಗುರುರಾಜ ಕರ್ಜಗಿ ಹೇಳಿದರು.
    ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದು, ಕುಲಸಚಿವ ಪ್ರೊ.ಎಂ.ವಿಶ್ವನಾಥ, ವೌಲ್ಯಮಾಪನ ಕುಲಸಚಿವ ಪ್ರೊ.ಎಂ.ಯರ‌್ರಿಸ್ವಾಮಿ, ಹಣಕಾಸು ಅಕಾರಿ ನಾಗರಾಜ, ವಿದ್ಯಾರ್ಥಿ ಕಲ್ಯಾಣಾಕಾರಿ ಡಾ.ಜಿ.ಎಸ್.ಬಿರಾದರ, ಉಪನ್ಯಾಸಕರಾದ ಅನಿಲ್ ಅಪ್ರಾಳ್, ಪ್ರೊ.ಪಿ.ಭಾಸ್ಕರ್, ಪ್ರೊ.ಸಿ.ಎಸ್.ಪಾರ್ವತಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts