More

    ಅನುದಾನ ವಾಪಸ್ ಹೋದರೆ ನೀವೇ ಜವಾಬ್ದಾರರು, ಅಧಿಕಾರಿಗಳಿಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಎಚ್ಚರಿಕೆ

    ಬಳ್ಳಾರಿ: ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಸಮರ್ಪಕವಾಗಿ ಬಳಸಬೇಕು. ಒಂದು ವೇಳೆ ಹಣ ವಾಪಸ್ ಹೋದರೆ ನೀವೇ ಜವಾಬ್ದಾರರು ಎಂದು ಅಧಿಕಾರಿಗಳಿಗೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಎಚ್ಚರಿಸಿದರು. ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕ್ಷೇತ್ರದ ಅಭಿವೃದ್ಧಿಗೆ ಮಂಜೂರಾಗಿರುವ ಅನುದಾನ ಯಾವುದೇ ಕಾರಣಕ್ಕೂ ಹಿಂದಕ್ಕೆ ಹೋಗಬಾರದು. ಹದಗೆಟ್ಟಿರುವ ಹಲಕುಂದಿ ಗ್ರಾಮದ ಅಂಗನವಾಡಿ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸಬೇಕು. ಕೆಲ ಶಾಲೆಗಳಲ್ಲಿ ಶೌಚಗೃಹಗಳಿದ್ದರೆ ನೀರಿಲ್ಲ. ನೀರು ಇದ್ದಲ್ಲಿ ಶೌಚಗೃಹಗಳು ಇಲ್ಲ. ದುರಂತ ಎಂದರೆ ಕೆಲ ಆರೋಗ್ಯ ಕೇಂದ್ರಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಹೀಗಾದರೆ ಹೇಗೆ? ಕೂಡಲೇ ಎಲ್ಲ ಸಮಸ್ಯೆ ಬಗೆಹರಿಸಿ, ಹೆಚ್ಚುವರಿ ಅನುದಾನದ ಅವಶ್ಯಕತೆಯಿದ್ದಲ್ಲಿ ಶಾಸಕರ ನಿಧಿಯಲ್ಲಿ ಒದಗಿಸಲಾಗುವುದು. ಎಲ್ಲರೂ ಒಗ್ಗೂಡಿ ಜನರಿಗೆ ಮೂಲ ಸೌಕರ್ಯ ಒದಗಿಸೋಣ ಎಂದರು. ತಾಪಂ ಇಒ ಮಡಗಿನ ಬಸಪ್ಪ, ತಹಸೀಲ್ದಾರ್ ನಾಗರಾಜ, ತಾಪಂ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ಪುಷ್ಪಾವತಿ, ಜಿಪಂ ಸದಸ್ಯರಾದ ಮಾನಯ್ಯ, ಎ.ಬನಶಂಕರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts