More

    ಸುಬ್ರಹ್ಮಣ್ಯ ಆರಾಧನೆಯಿಂದ ಕಷ್ಟಗಳು ದೂರ

    ಕಂಪ್ಲಿ: ನಾಗಸುಬ್ರಹ್ಮಣ್ಯ ಆರಾಧನೆಯಿಂದ ಸರ್ವ ರೋಗ ಹಾಗೂ ಸಂಕಷ್ಟಗಳು ಪಾರಾಗಲಿವೆ ಎಂದು ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಹೇಳಿದರು.

    ಇದನ್ನೂ ಓದಿ:ಮೈಸೂರಿನಲ್ಲಿ ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ

    ಇಲ್ಲಿನ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ನಾಗಸುಬ್ರಹ್ಮಣ್ಯ (ಸ್ಕಂದ) ಚಂಪಾಷಷ್ಠಿ ಆರಾಧನೆಯ ನಿಮಿತ್ತ ಏರ್ಪಡಿಸಿದ್ದ ಧರ್ಮ ಜಾಗೃತಿ ಸಭೆಯಲ್ಲಿ ಸೋಮವಾರ ಮಾತನಾಡಿದರು.

    ಏಕಾಗ್ರತೆ, ನಂಬಿಕೆ ಮತ್ತು ವಿಶ್ವಾಸಗಳಿಂದ ಚಂಪಾಷಷ್ಠಿ ಆಚರಿಸಿದರೆ ಬೇಡಿದ ಇಷ್ಟಾರ್ಥಗಳು ಸಿದ್ಧಿಸಲಿವೆ. ತನ್ನ ಅಭ್ಯುದಯಕ್ಕಾಗಿ ಪ್ರತಿ ವರ್ಷ ಚಂಪಾಷಷ್ಟಿಯಂದು ಬ್ರಾಹ್ಮಣವಟುವಿಗೆ ಬಿಳಿ ಲುಂಗಿ, ಟವಲ್, ಒಂದು ಲೋಟ ಹಾಲು ದಾನ ನೀಡಿದಲ್ಲಿ ಅಖಂಡ ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಎಂದರು.

    ಏಳುಹೆಡೆ ನಾಗಪ್ಪನಿಗೆ ರುದ್ರಾಭಿಷೇಕ, ಪಂಚಾಮೃತದೊಂದಿಗೆ ಅಷ್ಟೋತ್ತರ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರುಗಿತು. ಚರ್ಮ, ಮನೋರೋಗ ನಿವಾರಣೆಗೆ ಸಂಕಲ್ಪಿಸಿ ಸರ್ವ ಸಮುದಾಯದವರು ಬ್ರಹ್ಮಚಾರಿ(ವಟು)ಗೆ ವಸ್ತ್ರ, ಹಾಲು,

    ನಾಗಬಿಂಬವನ್ನು ದಾನಮಾಡಿದರು. ಸೇವಾಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಆಶ್ವತ್ಥನಾರಾಯಣ, ಸಂಪತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts