More

    ವಿಷಯಗಳ ಕಲಿಕೆಗೆ ಭಾಷೆ ಸಹಾಯಕ

    ಅಳವಂಡಿ: ಶಾಲಾ ಶಿಕ್ಷಣದಲ್ಲಿ ಭಾಷಾ ಕಲಿಕೆ ಮಾಧ್ಯಮವಾಗಿ ಮತ್ತು ಒಂದು ವಿಷಯವಾಗಿ ಕಲಿಸಲ್ಪಡುತ್ತದೆ. ಭಾಷಾ ಕಲಿಕೆ ಮಕ್ಕಳ ಬದುಕಿನ ವಿವಿಧ ಸಂದರ್ಭದ ಮತ್ತು ಜ್ಞಾನ ಶಾಖೆಗಳ ವಿಷಯ ವಸ್ತುವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕವಲೂರು ಸಿಆರ್‌ಪಿ ವೀರೇಶ ಕೌಟಿ ತಿಳಿಸಿದರು.

    ಇದನ್ನೂ ಓದಿ: BBKS10: ಏಳನೇ ವಾರಕ್ಕೆ ಮನೆಯಿಂದ ಹೊರಬಂದ ಸ್ಪರ್ಧಿ ನೀತು ವನಜಾಕ್ಷಿ​!; ಹಂಚಿಕೊಂಡ ವಿಷಯಗಳಿವು

    ಸಮೀಪದ ಹಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಅಜೀಂ ಪ್ರೇಮಜೀ ಫೌಂಡೇಶನ್ ಸಹಯೋಗದಲ್ಲಿ ನಡೆದ ಕವಲೂರು ಕ್ಲಷ್ಟರ್ ಮಟ್ಟದ 4 ರಿಂದ 8ನೇ ತರಗತಿ ಭಾಷಾ ಬೋಧನೆ ಮಾಡುವ ಶಿಕ್ಷಕರ ಮಾಸಿಕ ಸಮಾಲೋಚನೆ ಸಭೆಯಲ್ಲಿ ಶನಿವಾರ ಮಾತನಾಡಿದರು.

    ಅಜೀಂ ಪ್ರೇಮಜೀ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ದೇವರಾಜ ಮಾತನಾಡಿ, ಮಕ್ಕಳಿಗೆ ವಿಷಯವನ್ನು ಸಂದರ್ಭಾನುಸಾರ ಮನ ಮುಟ್ಟುವಂತೆ ತಿಳಿಸಬೇಕು. ಮಕ್ಕಳ ತರಗತಿ ಮತ್ತು ವಯೋಮಾನಕ್ಕೆ ಅನುಗುಣವಾಗಿ ಕಲಿಸುವ ಅಗತ್ಯವಿದೆ.

    ಅದಕ್ಕಾಗಿ ಭಾಷಾ ತರಗತಿಗಳಲ್ಲಿ ಪಠ್ಯದ ಸಾರ, ಮಾಹಿತಿ ಮತ್ತು ನೀತಿಗಿಂತ ಮಕ್ಕಳ ಭಾಷಾ ಅಭಿವೃದ್ಧಿ ನೆಲೆಯಲ್ಲಿ ಭಾಷೆಯ ಬಳಕೆ ಸಾಗಬೇಕು ಎಂದರು.
    ಬೋಧನಾ ಸಮಯದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ತಿಳಿಸಿದರು. ಕನ್ನಡ, ಇಂಗ್ಲೀಷ, ಹಿಂದಿ ಭಾಷಾ ವಿಷಯ ಕುರಿತು ಮಾಡಬೇಕಾದ ತರಗತಿ ಪ್ರಕ್ರಿಯೆಗಳನ್ನು ಶಿಕ್ಷಕರೊಂದಿಗೆ ಚರ್ಚಿಸಲಾಯಿತು.

    ಮುಖ್ಯ ಶಿಕ್ಷಕ ವೀರಣ್ಣ ಮಟ್ಟಿ , ಶಿಕ್ಷಕರಾದ ಸುರೇಶ, ಕೃಷ್ಣಪ್ಪ, ಜಂದಿಸಾಬ, ಹನುಮಂತ, ಷಣ್ಮುಖಪ್ಪ, ವಿಶ್ವನಾಥ, ಅಜೀಮಾ, ಮಹಾಂತೇಶ, ಅನೂಸೂಯಾದೇವಿ, ಶೋಭಾ, ಭಾರತಿ, ನೇತ್ರಾ, ಮಂಜುಳಾ, ಮಹಾಲಿಂಗಪ್ಪ, ಶಿವಪುತ್ರಪ್ಪ, ಸಣ್ಣಶರಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts