More

    ವಿದ್ಯಾರ್ಥಿಗಳು ಧನಾತ್ಮಕವಾಗಿ ಯೋಚಿಸಿ

    ಶಿವಮೊಗ್ಗ: ವಿದ್ಯಾರ್ಥಿಗಳು ಜೀವನದಲ್ಲಿ ಧನಾತ್ಮಕವಾಗಿ ಯೋಚನೆ ಮಾಡಬೇಕು. ನಮ್ಮ ಗುರಿಗಳನ್ನು ತಲುಪಲು ಪೂರಕ ವಾತಾವರಣ ಇಲ್ಲಿದ್ದು ಗುರಿ ಇಲ್ಲದೆ ಜೀವನ ನಡೆಯಬಾರದು ಎಂದು ಸಹ ಪ್ರಾಧ್ಯಾಪಕ ಪ್ರೊ. ಶಶಿಧರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
    ನಗರದ ಬಾಪೂಜಿನಗರ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪುನಶ್ಚೇತನ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಕಲಿಯುವ ವಿಷಯದಲ್ಲಿ ಪೂರ್ಣತೆ ಬರಬೇಕಾದರೆ ಬದ್ಧತೆ ಇರಬೇಕು. ತರಗತಿಯಲ್ಲಿ ಕಲಿಕೆಯನ್ನು ಆರಾಧಿಸಬೇಕು. ಅದಕ್ಕೆ ಬೇಕಾದ ಟಿಪ್ಪಣಿಯನ್ನೂ ಮಾಡಿಕೊಳ್ಳಬೇಕು. ಗ್ರಂಥಾಲಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದರು.
    ಸಹ ಪ್ರಾಧ್ಯಾಪಕಿ ವಾಣಿಶ್ರೀ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಿಕೊಳ್ಳಬೇಕು. ಇದರಿಂದ ಉದ್ಯೋಗಾವಕಾಶಗಳು ಸುಲಭವಾಗುತ್ತವೆ. ಪ್ರತಿ ಸೆಮಿಸ್ಟರ್‌ಗೆ ಒಂದೊಂದು ಕೋರ್ಸ್ ಮಾಡಿಕೊಳ್ಳುವ ಅವಕಾಶಗಳಿದ್ದು ಇದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಕಾಲೇಜಿನಿಂದಲೇ ಮಾಡಿಕೊಡಲಾಗುವುದು ಎಂದು ತಿಳಿಸಿದರು.
    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಚನ್ನೇಶ್ ಹೊನ್ನಾಳಿ ಮಾತನಾಡಿ, ಅವಕಾಶಗಳನ್ನು ಸುದುಪಯೋಗ ಮಾಡಿಕೊಳ್ಳುವ ಕಡೆಗೆ ಹೆಚ್ಚಿನ ಗಮನಹರಿಸಬೇಕು. ನೈತಿಕ ಜವಾಬ್ದಾರಿಯೊಂದಿಗೆ ಕೀಳರಿಮೆಯಿಂದ ವಿದ್ಯಾರ್ಥಿಗಳು ಹೊರಬರಬೇಕು ಎಂದರು.
    ಪ್ರಾಧ್ಯಾಪಕರಾದ ಡಾ. ಅಣ್ಣಪ್ಪ ಮಳೀಮಠ್, ಪ್ರೊ.ಜಿ. ಬಸವರಾಜ್, ಡಾ. ಮಂಜುನಾಥ್, ಡಾ. ಪ್ರಸನ್ನ, ಪ್ರೊ. ಪಾಂಡುರಂಗ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts