More

    ಫೆ. 24ರಂದು ಮಕ್ಕಳ ಸಾಹಿತ್ಯ ಸಂಭ್ರಮ

    ಆಯನೂರು: ಆಯನೂರು, ಕೋಹಳ್ಳಿ, ಹಾರನಹಳ್ಳಿ, ಮಂಡಘಟ್ಟ, ತಮ್ಮಡಿಹಳ್ಳಿ, ಸಿರಿಗೆರೆ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಫೆ.24ರಿಂದ 26ರವರೆಗೆ ಆಯನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಬೆಳಗ್ಗೆ 10 ಗಂಟೆಯಿAದ ಸಂಜೆ 5 ಗಂಟೆಯವರೆಗೆ ಮಕ್ಕಳ ಸಾಹಿತ್ಯ ಸಂಭ್ರಮ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ ವಿಶೇಷ ಆಹ್ವಾನಿತರಾಗಿ ಆಗಮಿಸಲಿz್ದÁರೆ. ಶಾಸಕಿ ಶಾರದಾ ಪರ‍್ಯಾನಾಯ್ಕ್ ಅಧ್ಯಕ್ಷತೆ ವಹಿಸಲಿz್ದÁರೆ. ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲï.ಭೋಜೆಗೌಡ, ಎಸ್.ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ಗ್ರಾಪಂ ಅಧ್ಯಕ್ಷರಾದ ಎನ್.ಪದ್ಮಿನಿ, ಎಲï.ಸುಜಾತಾ, ಟಿ.ಎಂ.ಸುಮಿತ್ರಾ, ಬಿ.ಕೆ.ಅನಿತಾ, ಟಿ.ಜೆ.ಪ್ರಕಾಶ್, ನಾಗರತ್ನಮ್ಮ ಅತಿಥಿಗಳಾಗಿz್ದÁರೆ.
    ಮೂರು ದಿನಗಳ ತಾಲೂಕು ಮಟ್ಟದ ತರಬೇತಿ ಶಿಬಿರದಲ್ಲಿ ಕಥೆ ಕಟ್ಟೋಣ, ಹಾಡುಹಕ್ಕಿ, ನಾಟಕ ಮಾಡೋಣ ಹಾಗೂ ನಾನು ರಿಪೋರ್ಟರ್ ಎಂಬ 4 ತಂಡಗಳ ರಚನೆ ಮಾಡಲಿದ್ದು ಪರಿಣಿತ ಸಂಪನ್ಮೂಲ ವ್ಯಕ್ತಿಗಳಾಗಿ ಗಾಯಕಿ ಸುರೇಖಾ ಹೆಗ್ಡೆ, ರಂಗಭೂಮಿ ಕಲಾವಿದ ಜಿ.ಕೊಟ್ರಪ್ಪ, ಸಾಹಿತಿ ಹಸನ್ ಹಾಗೂ ಟಿವಿ ಭಾರತ್ ಸಂಪಾದಕ ಹಾಲಸ್ವಾಮಿ ಭಾಗವಹಿಸಿಲಿz್ದÁರೆ.
    ಕಾಲೇಜು ಆವರಣದಿಂದ ವಿನಾಯಕ ವೃತ್ತದವರೆಗೆ ಬೆಳಗ್ಗೆ 9 ಗಂಟೆಗೆ ವಿದ್ಯಾರ್ಥಿಗಳಿಂದ ಜಾಥಾ ಹೊರಡಲಿದೆ. ಒಟ್ಟು 11 ಶಾಲೆಗಳಿಂದ 100 ವಿದ್ಯಾರ್ಥಿಗಳು ಭಾಗವಹಿಸಲಿz್ದÁರೆ. 16 ಜನ ಸಂಪನ್ಮೂಲ ವ್ಯಕ್ತಿಗಳಿರುತ್ತಾರೆ. ಆಯನೂರಿನ ಕೋರ್ ವಿe್ಞÁನ ಕೇಂದ್ರದಲ್ಲಿ ಶಿಬಿರಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಭಾರತ e್ಞÁನ ವಿe್ಞÁನ ಸಮಿತಿಯವರು ಕಾರ್ಯಕ್ರಮ ನಡೆಸುತ್ತಿದ್ದು ಜಿ¯್ಲೆಯಿಂದ ಈ ಬಾರಿ ಶಿವಮೊಗ್ಗ ಹಾಗೂ ಸಾಗರ ತಾಲೂಕುಗಳು ಆಯ್ಕೆಯಾಗಿವೆ. ಮುಂದಿನ ವರ್ಷದಿಂದ ಪ್ರತೀ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಭಾರತ e್ಞÁನ ವಿe್ಞÁನ ಸಮಿತಿಯ ಸಂಚಾಲಕ ಶಿವಾನಾಯ್ಕ್ ತಿಳಿಸಿz್ದÁರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts