More

    ವಿದ್ಯಾರ್ಥಿಗಳ ಪ್ರಗತಿಗೆ ಯೋಜನೆ ಅನುಷ್ಠಾನ

    ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಸರ್ವಾಂಗೀಣ ಹಾಗೂ ಕೌಶಲಭರಿತ ನಾಗರಿಕರನ್ನಾಗಿ ಮಾಡಲು ಹಲವು ಯೋಜನೆ ಅನುಷ್ಠಾನ ಮಾಡಿದೆ ಎಂದು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ ಎಸ್. ಹೇಳಿದರು.

    ನಗರದ ವಿಟಿಯು ಸಭಾಂಗಣದಲ್ಲಿ ವಿಶ್ವೇಶ್ವರಯ್ಯ ಸಂಶೋಧನೆ ಮತ್ತು ಇನ್ನೊವೇಷನ್ ಫೌಂಡೇಷನ್, ಸೆಲ್ಕೊ ಫೌಂಡೇಷನ್ ಮತ್ತು ವಾದ್ವಾನಿ ಫೌಂಡೇಷನ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಿಸೈನ್ ಥಿಂಕಿಂಗ್ ಕಾರ್ಯಾಗಾರ ಉದ್ಘಾಟಿಸಿ ಮಾತ ನಾಡಿ, ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲೇ ಔದ್ಯೋ ಗಿಕ ಮತ್ತು ತಾಂತ್ರಿಕ ಶಿಕ್ಷಣ ತಂದು ಇಂಟರ್ನ್ ಶಿಪ್ ಮತ್ತು ತರಬೇತಿ ಮೂಲಕ ಅವಶ್ಯವಿರುವ ಕೌಶಲ ನೀಡಲಾಗುತ್ತಿದೆ. ಅದಕ್ಕಾಗಿ ಸಿಎನ್‌ಸಿ ವರ್ಕ್‌ಶಾಪ್ ಸ್ಥಾಪಿಸಲಾಗಿದೆ. ಕೌಶಲ ನೀಡುವ ಪ್ರಯೋಗಾಲಯ ನಿರ್ಮಿ ಸಲಾಗುತ್ತಿದೆ. ಅದೇ ರೀತಿ ಕೊಪ್ಪಳ ಮತ್ತು ದಾಂಡೇಲಿಯಲ್ಲಿರುವ ಕೌಶಲ ಕೇಂದ್ರಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಯುತ್ತಿವೆ ಮತ್ತು ಸುತ್ತಲಿನ ಇಂಜಿನಿಯರಿಂಗ್ ಕಾಲೇಜುಗಳ ಜತೆಗೆ ಒಡಂಬಡಿಕೆ ಮಾಡಿಕೊಂಡು ಇಂಟರ್ನ್‌ಶಿಪ್ ನೀಡಲಾಗುತ್ತಿದೆ ಎಂದರು.

    ವಿಟಿಯು ಉದ್ದೇಶ ಕೇವಲ ತರಬೇತಿ ನೀಡುವುದಲ್ಲ. ಜತೆಗೆ ವಿದ್ಯಾರ್ಥಿಗಳಲ್ಲಿರುವ ಇನ್ನೋವೇಟಿವ್ ಮತ್ತು ಸೃಜನಶೀಲ ಕೌಶಲ ಗುರುತಿಸಿ ಹೊಸ ಐಡಿಯಾಗಳಿಗೆ ಮೂರ್ತರೂಪವನ್ನು ಕೊಟ್ಟು ಹೊಸ ಪ್ರಾಡಕ್ಟ್ ಅಥವಾ ತಮ್ಮದೆ ಸ್ಟಾರ್ಟಪ್ ಆರಂಭಿಸಲು ಉತ್ತೇಜನ ನೀಡಲಿದೆ. ಈ ವರ್ಷ ಕನಿಷ್ಠ 25 ಸ್ಟಾರ್ಟಪ್ ಹುಟ್ಟುಹಾಕುವ ಗುರಿ ಇದೆ ಎಂದು ತಿಳಿಸಿದರು.

    ಸೆಲ್ಕೊ ಫೌಂಡೇಷನ್ ಕಾರ್ಯಕ್ರಮ ವ್ಯವಸ್ಥಾಪಕಿ ಲಕ್ಷ್ಮೀ ಉನ್ನಿ, ಕುಲಸಚಿವ ಪ್ರೊ. ಬಿ.ಇ.ರಂಗಸ್ವಾಮಿ, ಪ್ರೊ . ಟಿ.ಎನ್. ಶ್ರೀನಿವಾಸ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ , ಸಂತೋಷ ಇಟ್ಟಣಗಿ, ಮದನ ಫಡಕಿ, ಸಂಗಮಿತ್ರಾ ಭಾಸಿನ, ವೆಂಕಟೇಶ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts