More

    ಯೂಕ್ರೇನ್​ನಲ್ಲಿ ಊಟಕ್ಕೂ ಪರದಾಟ, ನೀರೂ ಸಿಗುತ್ತಿಲ್ಲ..; ಆತಂಕದಲ್ಲಿ ಕರ್ನಾಟಕದ ಯುವಕ-ಯುವತಿಯರು

    ರಾಯಚೂರು: ರಾಜ್ಯದಲ್ಲಿನ ಹಲವಾರು ವಿದ್ಯಾರ್ಥಿಗಳು ಯೂಕ್ರೇನ್​ನಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರುವ ಸಲುವಾಗಿ ಕೇಂದ್ರ ಸರ್ಕಾರ ಸಕಲ ಪ್ರಯತ್ನಗಳನ್ನು ನಡೆಸುತ್ತಿದೆ.

    ಆದರೆ ಅಷ್ಟರವರೆಗೆ ಅಲ್ಲಿನ ವಿದ್ಯಾರ್ಥಿಗಳು ಆತಂಕದಲ್ಲೇ ಕಾಲ ಕಳೆಯುವಂತಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಹಸಿವಿನಿಂದಾಗಿ ಪರದಾಡುವಂತಾಗಿದೆ. ಅಂಥ ಒಂದು ಫಜೀತಿಯನ್ನು ಅಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಯೊಬ್ಬ ಹೇಳಿಕೊಂಡಿದ್ದಾನೆ.

    ರಾಯಚೂರಿನ ದಾತಾರ್ ನಗರದ ಮೊಹಮದ್ ಅಸರ್ ಹುಸೇನ್​ ಯೂಕ್ರೇನ್​ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ನಡೆಸುತ್ತಿದ್ದು, ಅಲ್ಲಿನ ಚಿತ್ರಣದ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಯೂಕ್ರೇನ್​ನ ಇವಾನೋ ಫ್ರಾನ್ಸಿವಿಸ್ಕ್ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವ ರಾಜ್ಯದ 20 ವಿದ್ಯಾರ್ಥಿಗಳು ಒಂದೇ ಹಾಸ್ಟೆಲ್​ನಲ್ಲಿದ್ದಾರೆ. ಅಲ್ಲಿದ್ದ ಕೇವಲ ಹತ್ತೇ ಕಿಲೋ ಮೀಟರ್​ ದೂರದಲ್ಲಿ ದಾಳಿ ನಡೆದಿದೆ.

    ಹತ್ತಿರದ ವಿಮಾನ ನಿಲ್ದಾಣ ರನ್ ವೇ ಮೇಲೆ ದಾಳಿಯಾದ್ದರಿಂದ ಆತಂಕ ಹೆಚ್ಚಾಗಿದೆ. ಅಲ್ಲದೆ ನಿನ್ನೆ ರಾತ್ರಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸೈರನ್ ಶಬ್ದ ಬಂದ ಕೂಡಲೇ ಹತ್ತಿರದ ಬಂಕರ್‌ಗಳಿಗೆ ತೆರಳಿ ಅಧಿಕಾರಿಗಳು ಸೂಚನೆ ನೀಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

    ಚಾಮರಾಜನಗರದಿಂದ ಯೂಕ್ರೇನ್​ಗೆ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿರುವ ಕಾವ್ಯ, ಕಳೆದೆರಡು ದಿನಗಳಿಂದ ಮೆಟ್ರೋ ಸ್ಟೇಷನ್​ನಲ್ಲಿದ್ದೇವೆ. ಇಲ್ಲಿ ಬಾಂಬ್ ಪ್ರೊಟೆಕ್ಟರ್ ಇದೆ, ಸುರಕ್ಷಿತ ಎಂದು ಇಲ್ಲೇ ಇದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ದಿನಸಿ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಿ ಎಂದು ಇಲ್ಲಿನ ಸರ್ಕಾರದ ಸೂಚನೆ ಮೇರೆಗೆ ಅವುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದೇವೆ. ಆದರೆ ಇಲ್ಲಿ ಈಗಾಗಲೇ ನೀರು ಕೂಡ ಸಿಗುತ್ತಿಲ್ಲ ಎಂದು ಆಕೆ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

    ಗೋಡೆ ಮೇಲೆ ರಕ್ತದ ಕಲೆ; ಅಜ್ಜಿ-ಮೊಮ್ಮಗಳ ಶವ ಪತ್ತೆ, ಕಾರಣವಿನ್ನೂ ನಿಗೂಢ..

    ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ; ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾವಿಗೆ ಶರಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts