More

    ಸಂಸ್ಕೃತ ಕಲಿಕೆಗೆ ಲಿಂಗ ಸ್ವಾಮೀಜಿ ನಾಂದಿ

    ಸಾಗರ: ಮಲೆನಾಡು ಪ್ರಾಂತ್ಯಕ್ಕೆ ಅತ್ಯಂತ ಹಿರಿಯರಾಗಿರುವ ಲಿಂಗ ಸ್ವಾಮೀಜಿ ಅವರು 1916ರಲ್ಲಿ ವಿದ್ಯಾರ್ಥಿನಿಲಯ ಸ್ಥಾಪಿಸಿ ಮಲೆನಾಡಿನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುನ್ನುಡಿ ಬರೆದರು ಎಂದು ಆನಂದಪುರ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

    ಆನಂದಪುರ ಮುರುಘಾಮಠದಲ್ಲಿ 535ನೇ ಶಿವಾನುಭವ ಗೋಷ್ಠಿ ಹಾಗೂ ಲಿಂಗ ಸ್ವಾಮೀಜಿ ಅವರ 96ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ಲಿಂಗ ಸ್ವಾಮೀಜಿ ಅವರು ಪ್ರಥಮವಾಗಿ ಸಂಸ್ಕೃತ ಪಾಠಶಾಲೆಯನ್ನು ಆರಂಭಿಸುವ ಮೂಲಕ ಮಲೆನಾಡು ಭಾಗದಲ್ಲಿ ಸಂಸ್ಕೃತ ಕಲಿಕೆಗೆ ನಾಂದಿ ಹಾಡಿದರು ಎಂದು ತಿಳಿಸಿದರು.

    ಕರೊನಾ ಹಿನ್ನೆಲೆಯಲ್ಲಿ ಪ್ರತಿ ತಿಂಗಳ ಶಿವಾನುಭವಗೋಷ್ಠಿ ನಡೆದಿರಲಿಲ್ಲ. ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಆನ್​ಲೈನ್ ಮೂಲಕ ಶಿವಾನುಭವ ಗೋಷ್ಠಿ ನಡೆಸಲಾಗಿದೆ. ಶ್ರೀಮಠದಲ್ಲಿ ಅದ್ದೂರಿಯಾಗಿ ನಡೆಸಲಾಗುತ್ತಿದ್ದ ಕಾರ್ತಿಕ ದೀಪೋತ್ಸವವನ್ನು ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಂತ ಸರಳವಾಗಿ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

    ಕಪ್ಪನಹಳ್ಳಿ ಶಿವಯೋಗ ಮಂದಿರದ ಶ್ರೀ ರೇವಣಸಿದ್ದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಗುತ್ತಲ ಮಠದ ಪ್ರಭು ಸ್ವಾಮೀಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts