ಶಿಗ್ಗಾಂವಿ(ಗ್ರಾ): ಪಟ್ಟಣದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸುಸಜ್ಜಿತ ರಸ್ತೆ ನಿರ್ಮಾಣ ಮತ್ತು ಬಸ್ ನಿಲುಗಡೆಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿ, ಶಿರಸ್ತೇದಾರ ವಿಲಿಯಮ್ಸನ್ ಅವರ ಮೂಲಕ ಶಾಸಕರಿಗೆ ಮನವಿ ಸಲ್ಲಿಸಿದರು.
![blank](https://www.vijayavani.net/wp-content/plugins/wp-fastest-cache-premium/pro/images/blank.gif)
ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ರವಿ ಬಂಕಾಪುರ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ದಿನನಿತ್ಯ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ವಿದ್ಯಾರ್ಥಿಗಳು ಹೋರಾಟ ಮಾಡಿದಾಗ ರಸ್ತೆ ಮಾಡಲಾಗಿತ್ತು. ಈಗ ಆ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈ ಮೊದಲು ಕಾಲೇಜ್ ಹತ್ತಿರ ಅಂತಾರಾಜ್ಯ ಬಸ್ ಹೊರತುಪಡಿಸಿ ಉಳಿದ ಬಸ್‌ಗಳ ನಿಲುಗಡೆ ಇತ್ತು. ಈಗ ಇಲ್ಲದಂತಾಗಿದೆ. ಆದ್ದರಿಂದ ಶಾಸಕರು ಪದವಿ ಕಾಲೇಜ್ ಹತ್ತಿರ ಬಸ್ ನಿಲ್ದಾಣ ನಿರ್ಮಿಸಿ, ಬಸ್‌ಗಳು ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
![blank](https://www.vijayavani.net/wp-content/plugins/wp-fastest-cache-premium/pro/images/blank.gif)
ಎಸ್‌ಎಫ್‌ಐ ತಾಲೂಕು ಕಾರ್ಯದರ್ಶಿ ಅರ್ಜುನ ರಜಪೂತ, ದುರ್ಗಪ್ಪ ಯೆಮ್ಮಿಯವರ, ಶ್ರೀನಿವಾಸ ಮಣ್ಣವಡ್ಡರ, ಯಲ್ಲಪ್ಪ, ಪ್ರತಾಪ ಭಜಂತ್ರಿ, ಸಚಿನ್ ಲಮಾಣಿ, ಚಂದು ಕಲಾಲ, ಕಿರಣ, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.