More

    ಫೀಸ್​ ಕಟ್ಟಿಲ್ಲ ಎಂದು 12 ವರ್ಷದ ಬಾಲಕನನ್ನು 4 ತಿಂಗಳು ತರಗತಿಯ ಹೊರಗೇ ಕೂರಿಸಿದ್ರು!

    ಮುಂಬೈ: ತಂದೆ ಕ್ಷಯ ರೋಗದಿಂದ ಬಳಲುತ್ತಿದ್ದು, ಸಂಸಾರ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿದ್ದರೂ ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ 12 ವರ್ಷದ ಬಾಲಕನನ್ನು ಶಿಕ್ಷಣ ಸಂಸ್ಥೆಯವರು ನಾಲ್ಕು ತಿಂಗಳ ಕಾಲ ತರಗತಿಯ ಹೊರಗೇ ಕೂರಿಸಿದ್ದ ಪ್ರಕರಣವೊಂದು ನಡೆದಿದೆ. ಶಿಕ್ಷಣ ಸಂಸ್ಥೆಯ ಈ ದೌರ್ಜನ್ಯದ ವಿರುದ್ಧ ಕೊನೆಗೂ ಎಫ್​ಐಆರ್ ದಾಖಲಾಗಿದೆ.

    ಮುಂಬೈನ ಕಲಿನಾದಲ್ಲಿನ ಸೇಂಟ್ ಮೇರಿಸ್ ಹೈಸ್ಕೂಲ್​ನಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ 8ನೇ ತರಗತಿ ವಿದ್ಯಾರ್ಥಿಯೊಬ್ಬ 18 ಸಾವಿರ ರೂ. ಫೀಸ್ ಬಾಕಿ ಇರಿಸಿದ್ದರಿಂದ ಆತನನ್ನು ನಾಲ್ಕು ತಿಂಗಳ ಕಾಲ ತರಗತಿಯ ಹೊರಗೇ ಕೂರಿಸಲಾಗಿದೆ. ಈ ಬಗ್ಗೆ ಬಾಲಕನ ತಾಯಿ ಮಾರ್ಚ್​ 22ರಂದು ಪೊಲೀಸರಿಗೆ ದೂರು ನೀಡಿದ್ದು, ಕೊನೆಗೂ ಏ. 11ರಂದು ಶಿಕ್ಷಣ ಸಂಸ್ಥೆಯವರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು!

    ಬಾಲಕನ ತಂದೆ ಚಾಲಕನಾಗಿದ್ದು, ಎರಡು ವರ್ಷಗಳಿಂದ ಕ್ಷಯರೋಗದಿಂದ ಬಳಲುತ್ತಿದ್ದಾರೆ. ಆತನ ಆರೋಗ್ಯ ತೀರಾ ಹದಗೆಟ್ಟಿದ್ದು, ದುಡಿಯಲಾಗದ್ದರಿಂದ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ಫೀಸ್ ಕಟ್ಟಲು ಕಾಲಾವಕಾಶ ಕೋರಿ, ಕಂತಿನಲ್ಲಿ ಪಾವತಿಸುವುದಾಗಿ ಹೇಳಿದ್ದರೂ ಶಿಕ್ಷಣ ಸಂಸ್ಥೆಯವರು ಬಾಲಕನನ್ನು ನಾಲ್ಕು ತಿಂಗಳು ತರಗತಿ ಹೊರಗೇ ಕೂರಿಸಿದ್ದರು. ದೊಡ್ಡ ಮಗನಿಗೆ ಚಿನ್ನಾಭರಣ ಮಾರಿ ಫೀಸ್ ಕಟ್ಟಿದ್ದೆ, ಕಿರಿಯವನಿಗಾಗಿ ಹಣ ಹೊಂದಿಸಲು ಆಗಿಲ್ಲ ಎಂದು ವಿದ್ಯಾರ್ಥಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ನನ್ನ ಮಗನನ್ನು ತರಗತಿಯ ಹೊರಗೆ ನೆಲದಲ್ಲಿ ಕೂರಿಸಿ ಅವರು ದೌರ್ಜನ್ಯ ನಡೆಸಿದ್ದರಿಂದ ತೀವ್ರ ಅವಮಾನಿತನಾಗಿ ನೊಂದಿರುವ ಆತ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾನೆ ಎಂದು ತಾಯಿ ಪೊಲೀಸರ ಬಳಿ ಅಲವತ್ತುಕೊಂಡಿದ್ದಾರೆ.

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts