More

    ಗಂಡಂದಿರು ತಮ್ಮ ಮದುವೆ ದಿನಾಂಕ ಮರೆಯುವುದರ ಹಿಂದಿರುವ ಬಲವಾದ ಕಾರಣ ಇಲ್ಲಿದೆ…

    ಮರೆವು ಎಂಬುದು ಇಂದು ಅನೇಕ ಜನರನ್ನು ಕಾಡುತ್ತಿರುವ ಸಾಮಾನ್ಯ ಕಾಯಿಲೆ ಆಗಿದೆ. ಒಂದಲ್ಲ ಒಂದು ಕ್ಷಣದಲ್ಲಿ ಪ್ರತಿಯೊಬ್ಬರು ಈ ಮರೆವನ್ನು ಅನುಭವಿಸಿಯೇ ಇರುತ್ತಾರೆ. ಕೆಲವರು ತಮ್ಮ ಮದುವೆ ದಿನಾಂಕ ಮತ್ತು ಪತ್ನಿಯ ಬರ್ತಡೇ ದಿನಾಂಕವನ್ನು ಸಹ ಮರೆತುಬಿಡುತ್ತಾರೆ. ವಿಶೇಷ ದಿನದಂದು ಪತ್ನಿಗೆ ವಿಶೇಷ ಉಡುಗೊರೆ ಕೊಡಲು ಮರೆತು ಕೋಪಕ್ಕೂ ಗುರಿಯಾಗುತ್ತಾರೆ. ಆದರೆ, ಈ ಸಮಸ್ಯೆಗಳು ಮಹಿಳೆಯರಲ್ಲಿ ಹೆಚ್ಚಾಗಿ ಏಕೆ ಕಂಡುಬರುವುದಿಲ್ಲ? ಪುರುಷರಲ್ಲೇ ಹೆಚ್ಚಾಗಿ ಏಕೆ ಕಂಡುಬರುತ್ತದೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ.

    ಅನೇಕ ಸಂಶೋಧನೆಗಳ ಪ್ರಕಾರ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಮರೆವು ಜಾಸ್ತಿ ಇರುತ್ತದೆ. ಇದನ್ನು ಮೆಮೊರಿ ಡಿಸ್​ಫಂಕ್ಷನ್​ ಅಥವಾ ಜ್ಞಾಪಕ ಶಕ್ತಿ ನಿಷ್ಕ್ರಿಯತೆ ಎನ್ನುತ್ತಾರೆ. ಸೌಮ್ಯವಾದ ಅರಿವಿನ ದುರ್ಬಲತೆ ಅಂತಾನೂ ಕರೆಯಲಾಗುತ್ತದೆ. ವಯಸ್ಸು ಹೆಚ್ಚಾದಂತೆ ಇದು ಸಂಭವಿಸುತ್ತದೆ. ಇದು ಬುದ್ಧಿಮಾಂದ್ಯತೆಗೂ ಕಾರಣವಾಗುತ್ತದೆ. ಜ್ಞಾಪಕ ಶಕ್ತಿ ನಿಷ್ಕ್ರಿಯತೆಯಿಂದಾಗಿ ದಿನ ನಿತ್ಯದ ಜೀವನದಲ್ಲಿ ಏಕಾಗ್ರತೆ ಕೊರತೆ, ಯೋಚನೆ ಮಾಡುವ ಸಾಮರ್ಥ್ಯ ಕುಸಿತ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಸಮರ್ಥತೆಯಂತಹ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಪುರುಷರಲ್ಲಿ ಮರೆವಿನ ಕಾಯಿಲೆ 30 ರಿಂದ 60ನೇ ವಯಸ್ಸಿನಲ್ಲಿ ಶುರುವಾಗುತ್ತದೆ.

    ನಾರ್ವೆ ದೇಶದಲ್ಲಿ ನಡೆಸಲಾದ ಹಂಟ್​ 3 ಸಂಶೋಧನೆ ಪ್ರಕಾರ ಮಹಿಳೆಯರು ಪುರುಷರಿಗಿಂತ ಉತ್ತರ ಮೆಮೊರಿ ಹೊಂದಿರುತ್ತಾರೆ ಎಂದು ತಿಳಿದುಬಂದಿದೆ. ಈ ಸಂಶೋಧನೆಯಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸುಮಾರು 37,405 ಮಂದಿಯ ಮೆಮೊರಿ ಪವರ್​ ಪರೀಕ್ಷೆ ಮಾಡಲಾಯಿತು. ಸುಮಾರು 9 ಪ್ರಶ್ನೆಗಳನ್ನು ಮೆಮೊರಿಗೆ ಸಂಬಂಧಿಸಿದಂತೆ ಕೇಳಲಾಯಿತು. ಹದಿಹರೆಯದ ವರ್ಷಗಳಲ್ಲಿ ಮರೆವು ಪ್ರಾರಂಭವಾಗಿದೆಯೇ? ದಿನಾಂಕಗಳನ್ನು ಮರೆತುಬಿಡುತ್ತೀರಾ? ಕೆಲವು ದಿನಗಳ ಹಿಂದೆ, ಕೆಲವು ವರ್ಷಗಳ ಹಿಂದೆ ನಡೆದ ಘಟನೆಗಳು ನಿಮಗೆ ನೆನಪಿದೆಯೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಯಿತು. ಆದರೆ, ಈ ಪರೀಕ್ಷೆಗಳಲ್ಲಿ ಬಹುತೇಕ ಪುರುಷರು ಅನುತ್ತೀರ್ಣರಾದರು.

    ಈ ಸಂಶೋಧನೆ ಪ್ರಕಾರ ಅರ್ಧದಷ್ಟು ಹುಡುಗಿಯರು ಮತ್ತು ಹುಡುಗರಲ್ಲಿ ಕಡಿಮೆ ಜ್ಞಾಪಕಶಕ್ತಿ ಇರುವುದು ಕಂಡುಬಂದಿದೆ. ಪುರುಷರಲ್ಲಿ 1.6 ರಷ್ಟಿದ್ದರೆ, ಮಹಿಳೆಯರಲ್ಲಿ 1.2 ರಷ್ಟು ಮರೆವು ಕಂಡುಬಂದಿದೆ. ಆದಾಗ್ಯೂ, ವಯಸ್ಸು ಹೆಚ್ಚಾದಂತೆ ಮರೆವು ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಈ ಮರೆವಿಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಅಧಿಕ ರಕ್ತದೊತ್ತಡ ಮತ್ತು ಬಿಎಂಐನಂತಹ ಅಪಾಯಕಾರಿ ಅಂಶಗಳು ಮೆದುಳಿನ ನ್ಯೂರೋಡಿಜನರೇಷನ್​ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ನಂಬಿದಿದ್ದಾರೆ.

    ಪುರುಷರು ಒಂದು ಘಟನೆ ಅಥವಾ ನಿರ್ದಿಷ್ಟ ದಿನಾಂಕವನ್ನು ಮರೆಯಲು ನಿಖರವಾದ ಕಾರಣ ಏನೆಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ ಎಂದು ನಾರ್ವೇಜಿಯನ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ರಿಸರ್ಚ್ ತಂಡದ ಪ್ರಾಧ್ಯಾಪಕ ಜೋಸ್ಟೆನ್​ ಹೊಲ್​ಮೆನ್​ ಹೇಳಿದ್ದಾರೆ. ಆದರೆ, ಸಂಶೋಧಕರ ಪ್ರಕಾರ ಮರೆವು ಹೆಚ್ಚಾದರೆ ಬುದ್ಧಿಮಾಂದ್ಯ ಉಂಟಾಗಲಿದ್ದು, ಇದು ಇನ್ನಷ್ಟು ಅಪಾಯಕಾರಿ ಎಂದಿದ್ದಾರೆ. ಮಾನಸಿಕ ಮತ್ತು ದೈಹಿಕ ಒತ್ತಡ, ಕೆಲಸದ ಒತ್ತಡ, ಮನೆಯ ಜವಾಬ್ದಾರಿಗಳು, ವೃತ್ತಿ ಜೀವನದ ಗುರಿಗಳು ಮುಂತಾದವುಗಳು ಮರೆವಿನ ಮೇಲೆ ಅತಿಯಾದ ಪ್ರಭಾವ ಬೀರುತ್ತದೆ ಎಂದು ಕೆಲಸ ಸಂಶೋಧನೆಗಳು ತಿಳಿಸಿವೆ.

    ಈ ಅಧ್ಯಯನಗಳ ಪ್ರಕಾರ, ಪುರುಷರು ಏಕೆ ಮರೆಯುತ್ತಾರೆ ಎಂಬುದು ನಿಖರವಾಗಿ ತಿಳಿದಿಲ್ಲ, ಆದರೆ ಮಹಿಳೆಯರಿಗಿಂರತ ಪುರುಷರಲ್ಲಿ ಕಡಿಮೆ ಸ್ಮರಣೆ ಇರುತ್ತದೆ. ಆರೋಗ್ಯ ಸಮಸ್ಯೆಗಳು ಮತ್ತು ಒತ್ತಡದಿಂದಾಗಿ ಪುರುಷರು ಪ್ರಮುಖ ದಿನಾಂಕಗಳನ್ನು ಮರೆತುಬಿಡುತ್ತಾರೆ. ಆದ್ದರಿಂದ ಮಹಿಳೆಯರು ಈ ನಿಟ್ಟಿನಲ್ಲಿ ಪುರುಷರನ್ನು ಅರ್ಥ ಮಾಡಿಕೊಳ್ಳಬೇಕು. ಈ ಸಂಶೋಧನಾ ವರದಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕಾಮೆಂಟ್ ಮಾಡಿ ತಿಳಿಸಿ. (ಏಜೆನ್ಸೀಸ್​)

    ಪುರುಷರಂತೆ ಮಹಿಳಾ ಕ್ರಿಕೆಟರ್ಸ್​ ಕೂಡ ಗಾರ್ಡ್ಸ್​ ಧರಿಸುತ್ತಾರೆಯೇ? ನಿಮಗೆ ಗೊತ್ತಿರದ ಮತ್ತೊಂದು ರಕ್ಷಾಕವಚವಿದೆ!

    ಇಲ್ಲಿ ಕೇವಲ ಒಂದು ರೂಪಾಯಿಯಲ್ಲಿ ಮದುವೆ ಮಾಡಿಕೊಡ್ತಾರೆ! ಆದರೆ ಒಂದು ಕಂಡೀಷನ್​

    ಕ್ಷಮಿಸು ಅಮ್ಮ… ನನಗೆ ಗೊತ್ತಿಲ್ಲದೆ ದೊಡ್ಡ ತಪ್ಪು ಮಾಡಿದೆ: ಹಿರಿಯ ನಟಿ ಲಕ್ಷ್ಮೀ ಪುತ್ರಿ ಐಶ್ವರ್ಯಾ ಕಣ್ಣೀರು

    ಡಿಂಪಲ್​ ಹಯಾತಿ ಮನೆಯಲ್ಲಿ ವೈನ್​ ಬಾಟಲ್​ ಇಟ್ಟು ವಿಶೇಷ ಪೂಜೆ! ಜ್ಯೋತಿಷಿ ವೇಣುಸ್ವಾಮಿ ಹೇಳಿಕೆಗೆ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts