More

    ಅಭಿವೃದ್ಧಿ ಕಾರ್ಯಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲ

    ಬಂಕಾಪುರ: ಸರ್ಕಾರ ಯಾವುದೇ ಬರಲಿ, ಅಭಿವೃದ್ಧಿ ನಿರಂತರವಾಗಿರಬೇಕು. ಯಾವುದೇ ಪಕ್ಷದ ಸರ್ಕಾರ ಇರಲಿ ಜನರ ಸೇವೆ ನಡೆಯುತ್ತಲೇ ಇರಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ನಂಬಿಕೆ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಪಟ್ಟಣದ ದೇಸಾಯಿ ಪ್ಲಾಟ್​ನಲ್ಲಿ ನಿರ್ವಣಗೊಂಡಿರುವ ಜಿ+1 ಮಾದರಿ ಮನೆಗಳ ಸಮುಚ್ಚಯವನ್ನು ಭಾನುವಾರ ಉದ್ಘಾಟಿಸಿ, ಫಲಾನುಭವಿಗಳಿಗೆ ಮನೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.

    ಬಂಕಾಪುರ ಒಂದು ಕಾಲದಲ್ಲಿ ಈ ಭಾಗದ ಸಂಸ್ಥಾನಗಳ ರಾಜಧಾನಿಯಾಗಿತ್ತು. ರನ್ನನಿಗೆ ಜ್ಞಾನವನ್ನು ನೀಡಿದಂಥ ಪುಣ್ಯಭೂಮಿ ಬಂಕಾಪುರ. ಚಾಲುಕ್ಯರ ಆಡಳಿತದಿಂದ ಹಿಡಿದು ವಿಜಯನಗರ ಸಾಮ್ರಾಜ್ಯದ ವರೆಗೂ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಈ ಗತ ವೈಭವದ ಜತೆಗೆ ನಮ್ಮ ಇವತ್ತಿನ ಆಧುನಿಕ ಬದುಕಿನಲ್ಲಿ ಬೇಕಾಗಿರುವ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸುತ್ತ ಬಂಕಾಪುರವನ್ನು ಅಭಿವೃದ್ಧಿಪಡಿಸಬೇಕಾಗಿದೆ. ಆದರೆ, ಇಲ್ಲಿ ಸರ್ಕಾರಿ ಜಾಗದ ಅಭಾವದಿಂದಾಗಿ ಅಭಿವೃದ್ಧಿಗೆ ತೊಂದರೆಯಾಗಿದೆ. ಈ ಎಲ್ಲ ಸಮಸ್ಯೆಗಳ ಮಧ್ಯೆ ಪಟ್ಟಣದ ದೇಸಾಯಿ ಮನೆತನದವರು ಸುಮಾರು 8 ಎಕರೆ ಜಮೀನು ನೀಡಿದ್ದರಿಂದ ಇವತ್ತು ಬಡವರಿಗೆ ಸೂರು ನಿರ್ವಣವಾಗಿದೆ. ಅವರಿಗೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ. ಇಡಿ ರಾಜ್ಯದಲ್ಲಿ ಬಡವರಿಗೆ ಇಷ್ಟೊಂದು ವ್ಯವಸ್ಥಿತವಾದ ಮನೆ, ಕಾಲನಿ ಎಲ್ಲೂ ಇಲ್ಲ. ನಗರ ಪ್ರದೇಶಗಳಲ್ಲಿ ಖಾಸಗಿಯವರು ನಿರ್ವಿುಸುವಂತಹ ಮನೆಗಳು ಇಲ್ಲಿ ಸಕಲ ಸೌಲಭ್ಯಗಳನ್ನು ಒಳಗೊಂಡು ನಿರ್ಮಾಣ ಮಾಡಲಾಗಿದೆ ಎಂದರು.

    ನಾನು ಮುಖ್ಯಮಂತ್ರಿಯಾಗಿ ಪೌರ ಕಾರ್ವಿುಕರಿಗೆ ಶಾಶ್ವತವಾದ ನೌಕರಿ, ಸುಡುಗಾಡು ಕಾಯುವ ಜನರಿಗೆ ಕಾಯಂ ನೌಕರಿ, ಆಸಿಡ್ ದಾಳಿಗೊಳಗಾದವರಿಗೆ 10 ಸಾವಿರ ರೂ., ಡಯಾಲಿಸಿಸ್​ಗೆ ಒಳಗಾದವರಿಗೆ, ಕ್ಯಾನ್ಸರ್ ಪೀಡಿತರಿಗೆ, ಕಿವುಡರಿಗೆ ಸಹಾಯ, ಅಂಗವಿಕಲ ಮತ್ತು ಅಂಗನವಾಡಿಯವರ ಮಾಸಾಶನ ಸೇರಿದಂತೆ ಹತ್ತು ಹಲವು ಕೆಲಸಗಳು ನನಗೆ ಸಮಾಧಾನ ತಂದಿವೆ ಎಂದರು.

    ಬಂಕಾಪುರಕ್ಕೆ ಕೇವಲ ಜಿ+1 ಮನೆ ಅಷ್ಟೇ ಅಲ್ಲ, ಅಂಬೇಡ್ಕರ್ ಅವಾಸ್ ಯೋಜನೆಯಡಿ ಸುಮಾರು 30ರಿಂದ 40 ಮನೆ ನೀಡುತ್ತ ಬಂದಿದ್ದೇವೆ. ಸ್ಲಮ್ ಬೋರ್ಡ್​ನಿಂದ ಸುಮಾರು 800 ಮನೆಗಳು, ಪ್ಲಡ್​ನಲ್ಲಿ 300ಕ್ಕೂ ಅಧಿಕ ಮನೆಗಳನ್ನು ಈಗಾಗಲೇ ಕೊಟ್ಟಿದ್ದೇವೆ ಎಂದರು.

    ಬಿಜೆಪಿ ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಉಪವಿಭಾಗಾಧಿಕಾರಿ ಎಚ್.ಹುನಸ್ಯಾಳ, ತಹಸೀಲ್ದಾರ್ ಸಂತೋಷ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ಎ. ಶಿವಪ್ಪ, ಉಪತಹಸೀಲ್ದಾರ್ ವೆಂಕಟೇಶ ಕುಲಕರ್ಣಿ, ಮಾಜಿ ತಾಪಂ ಸದಸ್ಯ ವಿಶ್ವನಾಥ ಹರವಿ, ಹೊನ್ನಪ್ಪ ಹೂಗಾರ, ಬಸವರಾಜ ನಾರಾಯಣಪುರ, ಬಸವರಾಜ ಕಟ್ಟಿಮನಿ, ನಿಂಗಪ್ಪ ಕಟಗಿ, ಗುರು ಚಲವಾದಿ, ಬೀರಪ್ಪ ಗಿಡ್ಡನ್ನವರ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

    ಬಂಕಾಪುರ ತಾಲೂಕು ಕೇಂದ್ರ

    ಬಂಕಾಪುರ ತಾಲೂಕು ಕೇಂದ್ರ ಮಾಡಲು ಈಗಾಗಲೇ ಆಜ್ಞೆ ಮಾಡಿದ್ದೇನೆ. ಈಗಿನ ಸರ್ಕಾರ ಪರಿಗಣಿಸುವುದಾಗಿ ತಿಳಿಸಿದೆ. ಪಟ್ಟಣಕ್ಕೆ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ನಿರಂತರ ಒತ್ತಡಯುಕ್ತ ನೀರು ಸರಬರಾಜಿಗೆ ಸುಮಾರು 44.53 ಕೋಟಿ ರೂ. ಅನುಮೊದನೆ ನೀಡಲಾಗಿದೆ. ಇದರಿಂದ ಎಲ್ಲರಿಗೂ ಶಾಶ್ವತವಾಗಿ ಕುಡಿಯುವ ನೀರು ಹೆಚ್ಚಿನ ಪ್ರಮಾಣದಲ್ಲಿ ಸಿಗಲಿದೆ. ಬಂಕಾಪುರಕ್ಕೆ ಸುವ್ಯಸ್ಥಿತವಾದ ಕ್ರೀಡಾಂಗಣ ವ್ಯವಸ್ಥೆ, ಮತ್ತು ಅಟಲ್ ಸೇವಾ ಕೇಂದ್ರ ಆರಂಭಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts