More

    ಸಿಂಧನೂರಿನಲ್ಲಿ ಬೀದಿಯಲ್ಲೇ ಸಂತೆ

    ಸಿಂಧನೂರು: ವ್ಯಾಪಾರ-ವಹಿವಾಟಿನಲ್ಲಿ ಅಂತಾರಾಜ್ಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ನಗರದಲ್ಲಿ ಬೀದಿಯಲ್ಲೇ ಸಂತೆ ನಡೆಯುತ್ತಿದೆ. ವ್ಯಾಪಾರದಿಂದ ಹೆಚ್ಚಿನ ತೆರಿಗೆ ಸಂಗ್ರಹವಾದರೂ ಮಾರುಕಟ್ಟೆ ನಿರ್ಮಾಣಕ್ಕೆ ನಿರ್ಲಕ್ಷೃ ವಹಿಸಲಾಗಿದೆ.

    ನಗರದಲ್ಲಿ ಒಂದು ಲಕ್ಷ ಜನಸಂಖ್ಯೆಯಿದ್ದು, ಅದಕ್ಕನುಗುಣವಾಗಿ ಸುಸಜ್ಜಿತವಾದ ಸಂತೆ ಮಾರುಕಟ್ಟೆ ನಿರ್ಮಿಸಬೇಕಿದೆ. ಸಂತೆಯಿಂದ ನಗರಸಭೆಗೆ ಲಕ್ಷಾಂತರ ರೂ. ತೆರಿಗೆ ಸಂಗ್ರಹವಾಗುತ್ತಿದ್ದು, ಮಾರುಕಟ್ಟೆ ನಿರ್ಮಾಣ ಬದಲಿಗೆ ನಗರಸಭೆಯ ಇತರ ವೆಚ್ಚಗಳಿಗೆ ಬಳಯಾಗುತ್ತಿದೆ. ಇದರಿಂದಾಗಿ ಬೀದಿಯಲ್ಲಿ ಸಂತೆ ನಡೆಯುವಂತಾಗಿದೆ. 1991-92 ರಲ್ಲಿ ನಿರ್ಮಿಸಿರುವ ದೇವರಾಜ ಅರಸು ಸಣ್ಣ ಸಂತೆ ಮಾರುಕಟ್ಟೆಯಿದ್ದು, ಅಲ್ಲಿ 10 ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಾಣ ಮಾಡಿ ಹಾಗೆಯೇ ಬಿಡಲಾಗಿದೆ.

    ನಗರದಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯುತ್ತಿದ್ದು, ಕನಕದಾಸ ವೃತ್ತದಿಂದ ದೇವರಾಜು ಅರಸು ಮಾರುಕಟ್ಟೆವೆರೆಗೆ ವರ್ತಕರು ರಸ್ತೆ ಬದಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಇದರಿಂದಾಗಿ ವಾಹನಗಳ ಸಂಚಾರಕ್ಕೂ ತೀವ್ರ ತೊಂದರೆ ಆಗುತ್ತಿದೆ. ರಸ್ತೆ ಧೂಳು ಹಾಗೂ ವಾಹನಗಳು ಹೊರಸೂಸುವ ಹೊಗೆಯಿಂದಾಗಿ ತರಕಾರಿ, ಹಣ್ಣುಗಳು ಕಲುಷಿತಗೊಳ್ಳುತ್ತಿವೆ.

    ಈಗಿರುವ ಮಾರುಕಟ್ಟೆ ಬಳಿ ಇನ್ನೊಂದು ಸಂತೆ ಮಾರುಕಟ್ಟೆ ನಿರ್ಮಾಣ ಮಾಡಲು ಜಾಗ ಇಲ್ಲ. ಇದರಿಂದಾಗಿ ನಗರಸಭೆ ಆಡಳಿತ ಪರ್ಯಾಯ ಚಿಂತನೆ ಮಾಡಬೇಕಿದೆ. ನಗರದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸ ವರ್ತಕರು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts