More

    ವಿಮಾನದಲ್ಲಿ ನೀಡಿದ್ದ ಆಹಾರದಲ್ಲೇ ಕಲ್ಲು!; ತಗ್ಗುತ್ತಿದೆಯೇ ವೈಮಾನಿಕ ಪ್ರಯಾಣದ ಗುಣಮಟ್ಟ-ಘನತೆ?

    ನವದೆಹಲಿ: ವಿಮಾನದಲ್ಲಿ ಓಡಾಡುವುದೆಂದರೆ ಪ್ರತಿಷ್ಠೆ-ಶ್ರೀಮಂತಿಕೆಯ ಸಂಕೇತ, ಅಲ್ಲಿ ಎಲ್ಲವೂ ಸ್ಟ್ಯಾಂಡರ್ಡ್​ ಎಂಬ ಭಾವನೆ ಸಾಮಾನ್ಯ. ಆದರೆ ಇತ್ತೀಚೆಗೆ ವಿಮಾನ ಪ್ರಯಾಣ ವೇಳೆ ಸಂಭವಿಸಿರುವ ಪ್ರಕರಣಗಳು ವೈಮಾನಿಕ ಪ್ರಯಾಣದ ಘನತೆ ತಗ್ಗುತ್ತಿದೆಯೇ ಎಂಬ ಅನುಮಾನವನ್ನು ಮೂಡಿಸುವಂತಿದೆ.

    ಏಕೆಂದರೆ ಮೊನ್ನೆಮೊನ್ನೆಯಷ್ಟೇ ಬಿಜಿನೆಸ್ ಕ್ಲಾಸ್​ ವಿಮಾನದಲ್ಲೇ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿ, ಖಾಸಗಿ ಅಂಗವನ್ನು ಪ್ರದರ್ಶಿಸಿದ ಪ್ರಕರಣ ನಡೆದಿತ್ತು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 54 ಮಂದಿ ಪ್ರಯಾಣಿಕರನ್ನು ಹಾಗೇ ಬಿಟ್ಟುಹೋದ ಪ್ರಸಂಗ ನಿನ್ನೆ ಬೆಳಕಿಗೆ ಬಂದಿದೆ. ಈ ನಡುವೆಯೇ ವಿಮಾನ ಪ್ರಯಾಣದಲ್ಲಿ ಇನ್ನೊಂದು ಅಪಸವ್ಯ ಬೆಳಕಿಗೆ ಬಂದಿದೆ.
    ಏರ್​ ಇಂಡಿಯಾ ವಿಮಾನದಲ್ಲಿ ನೀಡಿದ್ದ ಆಹಾರದಲ್ಲಿ ಕಲ್ಲು ಸಿಕ್ಕಿದ ಬಗ್ಗೆ ಪ್ರಯಾಣಿಕರೊಬ್ಬರು ದೂರು ಹೇಳಿಕೊಂಡಿದ್ದು, ಸಂಸ್ಥೆಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಜ. 8ರಂದು ಏರ್ ಇಂಡಿಯಾದ ವಿಮಾನದಲ್ಲಿ ಪ್ರಯಾಣಿಸಿದ್ದ ಸರ್ವಪ್ರಿಯ ಸಂಗ್ವನ್ ಎಂಬಾಕೆ ತಮಗಾದ ಕೆಟ್ಟ ಅನುಭವವನ್ನು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ವಿಮಾನದಲ್ಲಿ ಕಲ್ಲಿರದ ಆಹಾರ ನೀಡಲು ನಿಮಗೆ ಹಣ ಹಾಗೂ ಸಂಪನ್ಮೂಲದ ಅಗತ್ಯವಿದೆಯೇ? ಎಂದು ಪ್ರಶ್ನಿಸಿರುವ ಅವರು, ಇದು ನಾನು ಇಂದು ಪ್ರಯಾಣಿಸಿದ ವಿಮಾನದಲ್ಲಿ ನೀಡಿದ್ದ ಆಹಾರದಲ್ಲಿ ಸಿಕ್ಕಿದ್ದು ಎಂದು ಕೈಯಲ್ಲಿ ಕಲ್ಲು ಹಿಡಿದ ಫೋಟೋ ಕೂಡ ಅವರು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸಿಬ್ಬಂದಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಇಂಥ ನಿರ್ಲಕ್ಷ್ಯ ಖಂಡಿತ ಅಸಹ್ಯ ಎಂಬಂತೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ತಮಗೆ ವಿಮಾನದಲ್ಲಿ ನೀಡಿದ್ದ ಆಹಾರದಲ್ಲಿ ಜಿರಳೆ ಸಿಕ್ಕಿದ್ದ ಕುರಿತು ಕೂಡ ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.

    ರಾಜ್ಯದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ; ಒಂದೇ ವಾರದಲ್ಲಿ ದಿನ ಬಿಟ್ಟು ದಿನ 3 ಮಕ್ಕಳು ಹೃದಯಾಘಾತದಿಂದ ಸಾವು

    ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..

    ಶಾಸಕರ ಕಾರಿಗೆ ವೃದ್ಧೆ ಬಲಿ!?; ಆಕೆಯ ಸಾವಿಗೆ ನನ್ನ ಕಾರಲ್ಲ, ನಾಯಿ ಕಾರಣ ಎಂದ ಎಂಎಲ್​ಎ

    ‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts