More

    ಕನ್ನಡಿಗ ಕೆಎಲ್ ರಾಹುಲ್ ಶತಕ ವ್ಯರ್ಥ, 2ನೇ ಏಕದಿನದಲ್ಲಿ ಭಾರತಕ್ಕೆ ಸೋಲು

    ಪುಣೆ: ಕನ್ನಡಿಗ ಕೆಎಲ್ ರಾಹುಲ್ (108 ರನ್, 114 ಎಸೆತ, 7 ಬೌಂಡರಿ, 2 ಸಿಕ್ಸರ್) ಭರ್ಜರಿ ಶತಕದ ನಡುವೆಯೂ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ತಿರುಗೇಟು ಎದುರಿಸಿದೆ. ಜಾನಿ ಬೇರ್‌ಸ್ಟೋ (124 ರನ್, 112 ಎಸೆತ, 11 ಬೌಂಡರಿ, 7 ಸಿಕ್ಸರ್) ಮತ್ತು ಆಲ್ರೌಂಡರ್ ಬೆನ್ ಸ್ಟೋಕ್ಸ್ (99 ರನ್, 52 ಎಸೆತ, 4 ಬೌಂಡರಿ, 10 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡದ ಬೃಹತ್ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಿದ ಪ್ರವಾಸಿ ಇಂಗ್ಲೆಂಡ್ ತಂಡ 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಇದರಿಂದ 3 ಪಂದ್ಯಗಳ ಸರಣಿ 1-1 ಸಮಬಲಗೊಂಡಿದ್ದು, ನಿರ್ಣಾಯಕ ಪಂದ್ಯ ಭಾನುವಾರ ನಡೆಯಲಿದೆ.

    ಎಂಸಿಎ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಟಾಸ್ ಸೋತರು. ಇದರಿಂದ ಮತ್ತೊಮ್ಮೆ ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ, 6 ವಿಕೆಟ್‌ಗೆ 336 ರನ್ ಪೇರಿಸಿ ಕಳೆದ ಪಂದ್ಯಕ್ಕಿಂತಲೂ ಹೆಚ್ಚಿನ ಮೊತ್ತವನ್ನೇ ಗಳಿಸಿತು. ಆದರೆ ಜಾನಿ ಬೇರ್‌ಸ್ಟೋ-ಬೆನ್ ಸ್ಟೋಕ್ಸ್ ಜೋಡಿ 2ನೇ ವಿಕೆಟ್‌ಗೆ 117 ಎಸೆತಗಳಲ್ಲಿ 175 ರನ್ ಕೂಡಿಹಾಕಿದ ಸಾಹಸದಿಂದಾಗಿ ಭಾರತಕ್ಕೆ ಈ ಮೊತ್ತವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಜೋಡಿ ಬೇರ್ಪಟ್ಟ ಬಳಿಕ ಭಾರತ ಪಂದ್ಯಕ್ಕೆ ಮರಳಲು ಯತ್ನಿಸಿದರೂ, ಇಂಗ್ಲೆಂಡ್ ತಂಡ 43.3 ಓವರ್‌ಗಳಲ್ಲಿ 4 ವಿಕೆಟ್‌ಗೆ 337 ರನ್ ಗಳಿಸಿ ಸರಣಿ ಜೀವಂತವಿಟ್ಟಿತು.

    ಇದನ್ನೂ ಓದಿ: ಹೊಸ ಹೇರ್‌ಸ್ಟೈಲ್‌ನಲ್ಲಿ ಯುವರಾಜ್ ಸಿಂಗ್, ಮನಗೆದ್ದ ರಾಕ್‌ಸ್ಟಾರ್ ಲುಕ್!

    ಭಾರತ: 6 ವಿಕೆಟ್‌ಗೆ 336 (ರೋಹಿತ್ ಶರ್ಮ 25, ಧವನ್ 4, ಕೊಹ್ಲಿ 66, ರಾಹುಲ್ 108, ಪಂತ್ 77, ಹಾರ್ದಿಕ್ 35, ಕೃನಾಲ್ 12*, ಟಾಪ್ಲೆ 50ಕ್ಕೆ 2, ಟಾಮ್ ಕರ‌್ರನ್ 83ಕ್ಕೆ 2). ಇಂಗ್ಲೆಂಡ್: 43.3 ಓವರ್‌ಗಳಲ್ಲಿ 4 ವಿಕೆಟ್‌ಗೆ 337 (ರಾಯ್ 55, ಬೇರ್‌ಸ್ಟೋ 124, ಸ್ಟೋಕ್ಸ್ 99, ಮಲಾನ್ 16*, ಲಿವಿಂಗ್‌ಸ್ಟೋನ್ 27*, ಪ್ರಸಿದ್ಧಕೃಷ್ಣ 58ಕ್ಕೆ 2, ಭುವನೇಶ್ವರ್ 63ಕ್ಕೆ 1).

    ಮದುವೆ ಬೆನ್ನಲ್ಲೇ ಸಂಜನಾ ಕೆಲಸಕ್ಕೆ ಹಾಜರ್! ಬುಮ್ರಾ ಹನಿಮೂನ್‌ಗೆ ಯಾರ ಜತೆ ಹೋದರು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts