More

    ಷೇರು ಸೂಚ್ಯಂಕ ಅಲ್ಪ ಏರಿಕೆ: ಫೆಡರಲ್​ ಬ್ಯಾಂಕ್​ ನಿರ್ಧಾರ ಅವಲಂಬಿಸಿ 70 ಸಾವಿರ ಗಡಿ ದಾಟುವ ನಿರೀಕ್ಷೆ

    ಮುಂಬೈ: ಬಂಡವಾಳ ಸರಕುಗಳು, ವಾಹನ ಮತ್ತು ಇಂಧನ ಷೇರುಗಳ ಖರೀದಿ ಹಿನ್ನೆಲೆಯಲ್ಲಿ ಬಿಎಸ್ಇ ಮತ್ತು ನಿಫ್ಟಿ ಸೂಚ್ಯಂಕಗಳು ಬುಧವಾರ ಅಲ್ಪ ಏರಿಕೆ ದಾಖಲಿಸಿದವು. ಅಮೆರಿಕ ಫೆಡರಲ್​ ಬ್ಯಾಂಕ್​ ಬಡ್ಡಿ ದರ ಕುರಿತು ಗುರುವಾರ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಬುಧವಾರ ಎಚ್ಚರಿಕೆಯ ಹೆಜ್ಜೆ ಹಾಕಿದರು. ಈ ವಾರದಲ್ಲಿ ಬಿಎಸ್​ಇ ಸೂಚ್ಯಂಕವು 70 ಸಾವಿರ ಅಂಕಗಳ ಗಡಿ ದಾಟುವುದೋ ಇಲ್ಲವೋ ಎಂಬುದು ಫೆಡರಲ್​ ಬ್ಯಾಂಕ್​ ನಿರ್ಧಾರದ ಮೇಲೆ ಅವಲಂಬಿತವಾಗಬಹುದಾಗಿದೆ.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 33.57 ಅಂಕಗಳು ಅಥವಾ ಶೇಕಡಾ 0.05 ರಷ್ಟು ಏರಿಕೆ ಕಂಡು 69,584.60 ಕ್ಕೆ ಸ್ಥಿರವಾಯಿತು, ದಿನದ ವಹಿವಾಟಿನ ನಡುವೆ ಇದು 450.47 ಅಂಕ ಕುಸಿದು 69,100.56ಕ್ಕೆ ತಲುಪಿತ್ತು.

    ನಿಫ್ಟಿ ಸೂಚ್ಯಂಕವು 19.95 ಅಂಕಗಳು ಅಥವಾ ಶೇಕಡಾ 0.10 ರಷ್ಟು ಏರಿಕೆ ಕಂಡು 20,926.35 ಕ್ಕೆ ತಲುಪಿತು.

    ಎನ್‌ಟಿಪಿಸಿ, ಪವರ್ ಗ್ರಿಡ್, ಮಹೀಂದ್ರಾ ಆಂಡ್ ಮಹೀಂದ್ರ, ಲಾರ್ಸೆನ್ ಮತ್ತು ಟೂಬ್ರೊ, ಸನ್ ಫಾರ್ಮಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟೈಟಾನ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭ ಗಳಿಸಿದವು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಹಿನ್ನಡೆ ಅನುಭವಿಸಿದವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ ರೂ 76.86 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಎರಡು ದಿನಗಳ ರ್ಯಾಲಿಯ ನಂತರ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು ಮಂಗಳವಾರ 377.50 ಅಂಕ ಕುಸಿದು 69,551.03 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 90.70 ಅಂಕ ಕುಸಿದು 20,906.40 ಕ್ಕೆ ತಲುಪಿತ್ತು.

    ಸುರಕ್ಷಿತ ಎನ್ನಲಾಗುವ ಲಾರ್ಜ್​ ಕ್ಯಾಪ್​ ಮ್ಯೂಚುಯಲ್ ಫಂಡ್‌ಗಳ ಸರಾಸರಿ ಲಾಭ ಶೇ 19.83; ಇದರಲ್ಲಿ ನಂಬರ್ 1 ಫಂಡ್​ ಯಾವುದು ಗೊತ್ತೆ?

    ನಾಚಿಕೆಯೇ ಇಲ್ಲ: ಮುಖ್ಯಮಂತ್ರಿ, ಸಚಿವರ ಮೇಲೆ ವಾಗ್ದಾಳಿ ಮುಂದುವರಿಸಿದ ಕೇರಳ ರಾಜ್ಯಪಾಲರು

    ಶೈಕ್ಷಣಿಕ ಅರ್ಹತೆ ಇದ್ದರೂ ನಿರುದ್ಯೋಗದಿಂದ ಬೇಸರ… ಸಂಸತ್ತಿನ ಹೊರಗೆ ಬಂಧಿಸಲ್ಪಟ್ಟ ನೀಲಂ ಸೋದರ, ತಾಯಿ ಹೇಳುವುದೇನು?

    ವಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts