More

    ಗಬ್ಬೆದ್ದು ನಾರುತ್ತಿದೆ ಶೆಟ್ಟಿ ಗಲ್ಲಿ ಮುಖ್ಯ ರಸ್ತೆ

    ಬೆಳಗಾವಿ: ನಗರದ ಹೃದಯಭಾಗದಲ್ಲಿರುವ ಶೆಟ್ಟಿ ಗಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಒಳಚರಂಡಿಗಳು ಬ್ಲಾಕ್ ಆಗಿ ಗಬ್ಬೆದ್ದು ನಾರುತ್ತಿವೆ. ಕೆಲ ಪ್ರದೇಶದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ. ಇದರಿಂದ ಸಾರ್ವಜನಿಕರು ರಸ್ತೆಯ ಪಕ್ಕದಲ್ಲಿಯೇ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ.

    ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ರಸ್ತೆ ಕಾಮಗಾರಿಯಿಂದ ಉಂಟಾಗಿರುವ ಸಂಚಾರ ದಟ್ಟಣೆ, ಮಾಲಿನ್ಯ ಮತ್ತು ಇನ್ನಿತರ ಸಮಸ್ಯೆಗಳಿಂದ ತತ್ತರಿಸಿರುವ ನಾಗರಿಕರು ಇದೀಗ ನಗರದ ಗಲ್ಲಿಗಳಲ್ಲಿನ ಚರಂಡಿಗಳು ಬ್ಲಾಕ್ ಆಗಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಮತ್ತೊಂದೆಡೆ ನೀರು ಹರಿಯದೆ ಮಡುಗಟ್ಟಿ ನಿಂತು ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿಕೊಡುತ್ತಿದೆ. ಶೆಟ್ಟಿ ಗಲ್ಲಿಯ ಒಂದು ಬದಿಯ ತೀರುವಿನಲ್ಲಿ ಕಳೆದ ಕೆಲ ತಿಂಗಳಿನಿಂದ ಒಳಚರಂಡಿಗಳು ಬ್ಲಾಕ್ ಆಗಿದೆ. ಕೆಲ ಚರಂಡಿಯಲ್ಲಿ ಮಣ್ಣು ಹಾಗೂ ಕಸದ ರಾಶಿಯೇ ಬಿದ್ದಿದೆ.

    ಇದರಿಂದ ನೀರು ಸರಾಗವಾಗಿ ಹರಿಯದೇ ಕೊಳಚೆ ನೀರು ಅಲ್ಲಲ್ಲಿ ಸಂಗ್ರಹವಾಗಿ ಗಬ್ಬೆದ್ದು ನಾರುತ್ತಿದೆ. ಹಾಗಾಗಿ ಇಲ್ಲಿನ ನಿವಾಸಿಗಳು ಹಾಗೂ ವ್ಯಾಪಾರಸ್ಥರಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

    ಚರಂಡಿ ಪಕ್ಕದಲ್ಲಿಯೇ ಹೆಸ್ಕಾಂನವರು ಟಿಸಿ ಅಳವಡಿಸಿದ್ದು, ವಿದ್ಯುತ್ ಕಂಬದ ಕೆಳಗೆ ಚರಂಡಿ ನೀರು ನಿಂತಿದೆ. ಇದು ಸಾರ್ವಜನಿಕರಲ್ಲಿ ಭಯವನ್ನುಂಟುಮಾಡಿದೆ. ಇದೇ ಪ್ರದೇಶದಲ್ಲಿ ನಿವಾಸಿಗಳಿಗೆ ಕುಡಿಯುವ ನೀರಿಗಾಗಿ ಬ್ರಿಟಿಷರು ನಿರ್ಮಿಸಿದ ಬಾವಿ ಇದೆ. ಆದರೆ, ಈ ಬಾವಿ ಸ್ಥಳೀಯರಿಗೆ ಪ್ರಯೋಜನವಾಗಿಲ್ಲ.

    ಶೆಟ್ಟಿ ಗಲ್ಲಿಯಲ್ಲಿ ಒಳಚರಂಡಿ ನೀರು ಬ್ಲಾಕ್ ಆಗಿರುವ ಕುರಿತು ಮಾಹಿತಿ ಬಂದಿಲ್ಲ. ಒಂದು ವೇಳೆ ಸಮಸ್ಯೆ ಇದ್ದರೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
    | ಡಾ.ಸಂಜಯ ಡುಮ್ಮಗೋಳ ಪಾಲಿಕೆ ಆರೋಗ್ಯಾಧಿಕಾರಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts