More

    ಸ್ಟೇಟಸ್ ಲವಿಂಗ್ ಆ್ಯಂಡ್ ಕಂಫರ್ಟ್ ಲವಿಂಗ್‌ನಿಂದ ಸಂಘದ ಕಾರ್ಯಕ್ಕೆ ತೊಡಕು: ಮೋಹನ್ ಭಾಗವತ್

    ತುಮಕೂರು: ಸ್ಟೇಟಸ್ ಲವಿಂಗ್ ಆ್ಯಂಡ್ ಕಂಫರ್ಟ್ ಲವಿಂಗ್‌ಗೆ ಜೋತು ಬೀಳುವುದು ಸಂಘದ ಕಾರ್ಯಕ್ಕೆ ಮಾರಕವಾಗಲಿದೆ. ಈ ಬಗ್ಗೆ ಎಚ್ಚರ ವಹಿಸುವುದು ಒಳಿತು ಎಂದು ಆರ್‌ಎಸ್‌ಎಸ್ ಸರ ಸಂಘಚಾಲಕ ಮೋಹನ್ ಭಾಗವತ್ ಎಚ್ಚರಿಸಿದರು. ನಗರದ ಕೋತಿತೋಪಿನ ಆರ್‌ಎಸ್‌ಸ್ ಜಿಲ್ಲಾ ಕಾರ್ಯಾಲಯ ‘ಸಾಧನಾ’ದ ಲೋಕಾರ್ಪಣೆ ಸಮಾರಂಭದ ಅಂಗವಾಗಿ ಇಂದು ಆಯೋಜಿಸಿದ್ದ ಬೌದ್ಧಿಕ್ ವರ್ಗದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಂಘ ಕಾರ್ಯಕ್ಕೆ ಸಾಧನೆಯ ಅವಶ್ಯಕತೆ ಇದೆ. ಸಂಘಕಾರ್ಯ ಸಾಧನಗಳಿಲ್ಲದೆಯೇ ನಡೆದು ಬಂತು. ಡಾ.ಹೆಗ್ಡೇವಾರ್ ಜಿ ಅವರ ಬಳಿ ಯಾವುದೇ ಸಾಧನಗಳಿರಲಿಲ್ಲ. ಅಂದು ಸಂಘ ಕಟ್ಟುವ ಸಂದರ್ಭದಲ್ಲಿ ಪರಿಸ್ಥಿತಿ ವಿರುದ್ಧವಾಗಿತ್ತು, ಸಂಕಟಗಳು ಎದುರಾದವು. ಅಷ್ಟಾದರೂ ಸಂಘ ಕಾರ್ಯ ಬೆಳೆಯಿತು ಎಂದು ಸ್ಮರಿಸಿದರು.

    ಸುಸ್ಥಿರ ಸಮಾಜದ ಸರ್ವಾಂಗೀಣ ಉನ್ನತಿಗಾಗಿ ಸಂಘದಲ್ಲಿ ಜೋಡಿಸಿಕೊಂಡವರು ಶ್ರಮಿಸಬೇಕು. ಪರಸ್ವರ ಸುಖ-ದುಃಖದಲ್ಲಿ ಸಮವಾಗಿ ಭಾಗಿಯಾಗಬೇಕು. ನಮ್ಮ ಮನಸ್ಸಿನಲ್ಲಿ ಸ್ವಾರ್ಥದ ಲವಲೇಶವೂ ಇರಬಾರದು. ಸಂಪೂರ್ಣ ಹಿಂದೂ ಸಮಾಜದ ಸಂಘಟನೆ ನಮ್ಮ ಕಾಯಕ, ಹಿಂದೂ ಸಮಾಜದ ಏಳಿಗೆಯೇ ನಮ್ಮ ಉದ್ದೇಶ ಎಂದರು.

    ಶುದ್ಧತೆ, ಆತ್ಮೀಯ ವ್ಯವಹಾರ, ಪಾವಿತ್ರ್ಯ, ಪ್ರಾಮಾಣಿಕತೆ, ಸದ್ಭಾವನೆ, ನಿಸ್ಪೃಹತೆಯಿಂದ ಅಂತಃಕರಣ ಶುದ್ಧಿ ಉಂಟಾಗಬೇಕು. ಹೀಗಾದಾಗ ಸಂಘ ಕಾರ್ಯದ ವೇಗ ಹೆಚ್ಚುತ್ತದೆ. ಕಾರ್ಯಾಲಯದಲ್ಲಿ ಇಂತಹ ಪರಿಶುದ್ಧ ವಾತಾವರಣ ಇರಬೇಕು. ಸಂಘ ಅರಿಯಬೇಕಾದರೆ ಶಾಖೆಗೆ ಹೋಗಬೇಕು. ಶಾಖೆಯಿಂದ ಪಡೆದ ಸಂಸ್ಕಾರದಿಂದ ಸಂಘಜೀವನ ಹಾಗೂ ಸಾಮಾಜಿಕ ಜೀವನದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿದೆ. ಕಾರ್ಯಾಲಯಕ್ಕೆ ಯಾರೇ ಬಂದರೂ ಅವರಿಗೆ ಸಂಘದ ಅನುಭವ ಉಂಟಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆಯನ್ನು ಮೋಹನ್‌ ಭಾಗವತ್ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಇದ್ದರು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬ್ಯಾಂಕ್​ ವ್ಯವಹಾರದ ಬಗ್ಗೆ ಅನುಮಾನ; ಪಿಗ್ಮಿ ಹಣ ಹಿಂದಿರುಗಿಸುವಂತೆ ಮುಗಿಬಿದ್ದ ಖಾತೆದಾರರು

    ಪೆಟ್ರೋಲ್‌ ಬೆಲೆ ಏರಿತು ಅಂತ ಬೈಯೋದೇಕೆ? ಎಲ್ಲದಕ್ಕೂ ಸೊಲ್ಯೂಷನ್‌ ಇದೆ ಎಂದವ ಮಾಡಿದ ಈ ಪ್ಲ್ಯಾನ್‌ ಈಗ ಸಕತ್‌ ವೈರಲ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts