More

    ನೂತನ ತಂತ್ರಜ್ಞಾನದ ಸಮರ್ಪಕ ಅಗತ್ಯ

    ಧಾರವಾಡ: ಶಿಕ್ಷಕರು ಮತ್ತು ಸಂಶೋಧಕರು ನೂತನ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಂಖ್ಯಾಶಾಸ್ತçವನ್ನು ಮಾತೃಭಾಷೆಯಲ್ಲಿ ಕಲಿಸುವ ಪ್ರಯತ್ನವಾಗಬೇಕು ಎಂದು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ಟಿ. ಶಿರ್ಕೆ ಹೇಳಿದರು.
    ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸಂಖ್ಯಾಶಾಸ್ತç ವಿಭಾಗವು ಸೆನೆಟ್ ಸಭಾಂಗಣದಲ್ಲಿ `ಸಂಖ್ಯಾಶಾಸ್ತç ವಿಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆಗಳು’ ವಿಷಯ ಕುರಿತು ಇತ್ತೀಚೆಗೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
    ಸಂಖ್ಯಾಶಾಸ್ತç ವಿಷಯಕ್ಕೆ ಸಂಬAಽಸಿದ ಸರ್ಟಿಫಿಕೇಟ್ ಕೋರ್ಸ್ಗಳನ್ನು ಆರಂಭಿಸುವ ಅವಶ್ಯಕತೆ ಇದೆ ಎಂದರು.
    ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿದರು. ಕರ್ನಾಟಕ ಸಂಖ್ಯಾಶಾಸ್ತç ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಟಿ.ಪಿ. ಪಕ್ಕಲಾ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ. ಎ. ಚೆನ್ನಪ್ಪ, ಡಾ. ಬಿ.ಎಸ್. ಬಿರಾದಾರ, ಡಾ. ಎ.ಎಸ್. ತಳವಾರ, ಪ್ರೊ. ಎಸ್.ಬಿ. ಮುನೊಳ್ಳಿ, ಡಾ. ಎಸ್.ವಿ. ಭಟ್, ಡಾ. ಎಸ್.ಆರ್. ಗಣಿ ಹಾಗೂ ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts