More

    ನೀಟ್​, ಜೆಇಇ ಮುಂದೂಡಿ; ಸುಪ್ರೀಂಕೋರ್ಟ್​ ಮೊರೆ ಹೋಗಲು ಮುಂದಾದ ರಾಜ್ಯಗಳು

    ನವದೆಹಲಿ: ವೈದ್ಯಕೀಯ ಕೋರ್ಸ್​ಗಳ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (NEET) ಹಾಗೂ ಇಂಜಿನಿಯರಿಂಗ್​ ಕೋರ್ಸ್​ಗಳ ಜೆಇಇಯನ್ನು ಮುಂದೂಡುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್​ ಮೊರೆ ಹೋಗಲು ಎಲ್ಲ ರಾಜ್ಯಗಳ ಸಿಎಂ ಗಳಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.

    ಸೆಪ್ಟಂಬರ್​ನಲ್ಲಿ ನೀಟ್​ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಆದರೆ, ಈ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಿದ್ಧರಾಗಿಲ್ಲ. ಕರೊನಾ ಪರಿಸ್ಥಿತಿ ಸುಧಾರಿಸಿ ಪರೀಕ್ಷೆಗೆ ಹಾಜರಾಗುವ ಸನ್ನಿವೇಶ ಉಂಟಾಗುವವರೆಗೆ ಪರೀಕ್ಷೆಗೆ ಮುಂದೂಡುವಂತೆ ಸುಪ್ರೀಂ ಕೋರ್ಟ್​ಗೆ ಮನವಿ ಮಾಡೋಣ ಎಂದು ಬ್ಯಾನರ್ಜಿ ಹೇಳಿದ್ದಾರೆ.

    ಇದನ್ನೂ ಓದಿ; ಮೋರಾಟೋರಿಯಂ ಅವಧಿಗೇಕೆ ಹೆಚ್ಚುವರಿ ಬಡ್ಡಿ; ನಿಲುವು ಸ್ಪಷ್ಟಪಡಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ 

    ಪ್ರಧಾನಮಂತ್ರಿ ನಮ್ಮ ಅಹವಾಲುಗಳನ್ನು ಕೇಳುವುದಿಲ್ಲ. ಸಹಕಾರ ತತ್ವದ ಒಕ್ಕೂಟ ವ್ಯವಸ್ಥೆಯ ಹೆಸರಿನಲ್ಲಿ ರಾಜ್ಯಗಳನ್ನು ತುಳಿಯಲಾಗುತ್ತಿದೆ ಎಂದು ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಒಂದಾಗಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರೋಣ ಎಂದು ಅವರು ಹೇಳಿದ್ದಾರೆ.

    ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ನೀಟ್​, ಜೆಇಇಗೆ ವಿರೋಧ ವ್ಯಕ್ತವಾಗಿದೆ. ದೆಹಲಿಯಂತೂ ಪರೀಕ್ಷೆ ನೀವೇ ನಡೆಸಿಕೊಳ್ಳಿ ಎಂದು ಹೇಳಿದೆ. ಒಡಿಶಾ, ಪಂಜಾಬ್​, ಜಾರ್ಖಂಡ್​ನಲ್ಲೂ ಪರೀಕ್ಷೆ ಮುಂದೂಡಿ ಎಂಬ ಕೂಗು ಕೇಳಿ ಬಂದಿದೆ.

    ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts