More

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೆ ಕರೊನಾಗೆ ರಾಜ್ಯ ಬಲಿ

    ಸಿಂಧನೂರು: ಕೋವಿಡ್-19 ವಕ್ಕರಿಸಿರುವ ಈ ಸಂದರ್ಭರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇನಾದರೂ ಇದ್ದಿದ್ದರೆ ವೈರಾಣುವಿಗೆ ಇಡೀ ರಾಜ್ಯವೇ ಬಲಿಯಾಗುತ್ತಿತ್ತು ಎಂದು ಬಳ್ಳಾರಿ ಶಾಸಕ ಸೋಮಶೇಖರರೆಡ್ಡಿ ಕುಟುಕಿದರು.

    ಸುದೈವದಿಂದ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಹೆಚ್ಚಿನ ಮುಂಜಾಗ್ರತಾ ಕ್ರಮಕೈಗೊಂಡಿರುವುದರಿಂದ ಹೆಚ್ಚಿನ ಕೆಟ್ಟ ಪರಿಣಾಮ ಆಗಿಲ್ಲ ಎಂದು ತಾಲೂಕಿನ ಶ್ರೀಪುರಂಜಕ್ಷನ್‌ನಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿ ಸಮರ್ಥಿಸಿಕೊಂಡರು.

    ದೇಶದಲ್ಲಿ ಕೋವಿಡ್-19 ಪ್ರಮಾಣ ಹೆಚ್ಚದಂತೆ ನರೇಂದ್ರಮೋದಿಯವರ ನೇತೃತ್ವದಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗಿದೆ. ವಿರೋಧ ಪಕ್ಷಗಳು ಆರೋಪ ಮಾಡುವುದರಲ್ಲಿ ಹುರುಳಿಲ್ಲ. ಅವರಿಗೆ ಈಗ ಅಧಿಕಾರ ಇಲ್ಲ. ಮಾಡಲು ಬೇರೆ ಕೆಲಸ ಇಲ್ಲ. ಹೀಗಾಗಿ ಆರೋಪ ಮಾಡುತ್ತಿದ್ದಾರೆ. ಕೆಲಸ ಮಾಡುವವರ ವಿರುದ್ಧ ಹೋರಾಟ ಮಾಡುವ ಜಾಯಮಾನ ಅವರದ್ದು ಎಂದು ಟೀಕಿಸಿದರು.

    ಜನತೆ ಸ್ವಯಂ ಆಗಿ ಮುಂಜಾಗ್ರತೆ ವಹಿಸಬೇಕು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡಬೇಕು. ಹೊರಗೆ ಸುಮ್ಮನೆ ಓಡಾಡುವುದು ನಿಷೇಧಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವುದರಿಂದ ಕರೊನಾ ನಿಯಂತ್ರಣ ಸಾಧ್ಯವಾಗಲಿದೆ. ಕರೊನಾ ಹರಡದಂತೆ ಎಲ್ಲರೂ ದುಡಿಯೋಣ ಎಂದರು.

    ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವು ಹೆಚ್ಚಿದ್ದು 50 ಟಿಎಂಸಿ ನೀರು ಸಂಗ್ರಹವಾದ ನಂತರ ಐಸಿಸಿ ಸಭೆ ಕರೆದು ನೀರು ಬಿಡುವ ಬಗ್ಗೆ ತೀರ್ಮಾನಿಸಲಾಗುವುದು. ತುಂಗಭದ್ರಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿ ನಡೆದಿದ್ದು ಜು.25 ರೊಳಗಾಗಿ ಕಾಮಗಾರಿ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದ್ದಾರೆ. ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.
    | ಜಿ. ಸೋಮಶೇಖರರೆಡ್ಡಿ ಬಳ್ಳಾರಿ ನಗರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts